ಮೂರು ಮೆಟ್ರೋ ಸಿಟಿಗಳಲ್ಲಿ ಬಿಜೆಪಿ ಬಿರುಗಾಳಿಗೆ ಕಾಂಗ್ರೆಸ್ ಧೂಳೀಪಟ
ಕರ್ನಾಟಕದಲ್ಲಿ ಹೇಗೆ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಿತ್ತೋ ಅದೇ ರೀತಿ ಮಹಾರಾಷ್ಟ್ರದಲ್ಲಿ ಕೂಡಾ. ಬಿಜೆಪಿ - ಶಿವಸೇನೆ ಮೈತ್ರಿಕೂಟ ಕಳೆದ ಬಾರಿಯೂ 41ಸ್ಥಾನವನ್ನು ಗೆದ್ದಿತ್ತು, ಅಷ್ಟೇ ಸ್ಥಾನದಲ್ಲಿ ಎನ್ಡಿಎ ಮೈತ್ರಿಕೂಟ ಈ ಬಾರಿಯೂ ಗೆದ್ದಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಆರು ಸ್ಥಾನದಲ್ಲಿ ಗೆದ್ದಿದ್ದರೆ, ಈ ಬಾರಿ ಐದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸಿತ್ತು.
ಈ ಬಾರಿ ಯುಪಿಎ ಮೈತ್ರಿಕೂಟ ಗೆದ್ದ ಐದು ಕ್ಷೇತ್ರಗಳಲ್ಲಿ ನಾಲ್ಕು ಎನ್ಸಿಪಿ, ಒಂದು ಕಾಂಗ್ರೆಸ್. ಇನ್ನು ಎನ್ಡಿಎ ಮೈತ್ರಿಕೂಟ ಗೆದ್ದ 41 ಕ್ಷೇತ್ರಗಳಲ್ಲಿ ಬಿಜೆಪಿ 23, ಶಿವಸೇನೆ ಪಾಲು 18.
ಮೂರು ಮೆಟ್ರೋ ಸಿಟಿಯ ಹದಿನೈದು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀಪ್ ಸ್ವೀಪ್ ಮಾಡುವ ಮೂಲಕ, ವಿಪಕ್ಷಗಳು ಮುಖಭಂಗವಾಗುವಂತೆ ಮಾಡಿದೆ. (ಚಿತ್ರ : ಪಿಟಿಐ)

ಮುಂಬೈನಲ್ಲಿ ಬಿಜೆಪಿ ಬಿರುಗಾಳಿ
ಮುಂಬೈ ಕೇಂದ್ರ (ಉತ್ತರ)
ಗೆದ್ದ ಅಭ್ಯರ್ಥಿ : ಪೂನಂ ಮಹಾಜನ್
ಸೋತ ಅಭ್ಯರ್ಥಿ : ಪ್ರಿಯಾದತ್ (ಕಾಂಗ್ರೆಸ್)
ಗೆಲುವಿನ ಅಂತರ : 130,005
ಮುಂಬೈ ಈಶಾನ್ಯ
ಗೆದ್ದ ಅಭ್ಯರ್ಥಿ : ಮನೋಜ್ ಕೋಟಕ್
ಸೋತ ಅಭ್ಯರ್ಥಿ : ಸಂಜಯ್ ಪಾಟೀಲ್ (ಎನ್ಸಿಪಿ)
ಗೆಲುವಿನ ಅಂತರ : 226,486

ಊರ್ಮಿಳಾಗೆ ಸೋಲು
ಮುಂಬೈ ಉತ್ತರ
ಗೆದ್ದ ಅಭ್ಯರ್ಥಿ : ಗೋಪಾಲ್ ಶೆಟ್ಟಿ
ಸೋತ ಅಭ್ಯರ್ಥಿ : ಊರ್ಮಿಳಾ ಮಾತೋಂಡ್ಕರ್ (ಕಾಂಗ್ರೆಸ್)
ಗೆಲುವಿನ ಅಂತರ : 465,247
ಮುಂಬೈ ವಾಯುವ್ಯ
ಗೆದ್ದ ಅಭ್ಯರ್ಥಿ : ಗಂಜನ್ ಕೀರ್ತಿಕರ್ (ಶಿವಸೇನೆ)
ಸೋತ ಅಭ್ಯರ್ಥಿ : ಸಂಜಯ್ ನಿರುಪಮ್ (ಕಾಂಗ್ರೆಸ್)
ಗೆಲುವಿನ ಅಂತರ : 260,328
ಮುಂಬೈ ದಕ್ಷಿಣ
ಗೆದ್ದ ಅಭ್ಯರ್ಥಿ : ಅರವಿಂದ್ ಗಣಪತ್ ಸಾವಂತ್ (ಶಿವಸೇನೆ)
ಸೋತ ಅಭ್ಯರ್ಥಿ : ಮಿಲಿಂದ್ ದಿಯೋರ (ಕಾಂಗ್ರೆಸ್)
ಗೆಲುವಿನ ಅಂತರ : 100,067

ಕಾಂಗ್ರೆಸ್, ಎನ್ಸಿಪಿ ಧೂಳೀಪಟ
ಮುಂಬೈ ಕೇಂದ್ರ (ದಕ್ಷಿಣ)
ಗೆದ್ದ ಅಭ್ಯರ್ಥಿ : ರಾಹುಲ್ ರಮೇಶ್ ಶೆವಾಲೆ (ಶಿವಸೇನೆ)
ಸೋತ ಅಭ್ಯರ್ಥಿ : ಏಕನಾಥ್ ಗಾಯಕ್ವಾಡ್ (ಕಾಂಗ್ರೆಸ್)
ಗೆಲುವಿನ ಅಂತರ : 100,067
ದೆಹಲಿ ಚಾಂದ್ನಿ ಚೌಕ್
ಗೆದ್ದ ಅಭ್ಯರ್ಥಿ : ಹರ್ಷವರ್ಧನ್
ಸೋತ ಅಭ್ಯರ್ಥಿ : ಜೈಪ್ರಕಾಶ್ ಅಗರವಾಲ್ (ಕಾಂಗ್ರೆಸ್)
ಗೆಲುವಿನ ಅಂತರ : 228,145

ರಾಜಧಾನಿಯಲ್ಲಿ ನರೇಂದ್ರ ಮೋದಿ ಹವಾ
ದೆಹಲಿ ಪೂರ್ವ
ಗೆದ್ದ ಅಭ್ಯರ್ಥಿ : ಗೌತಂ ಗಂಭೀರ್
ಸೋತ ಅಭ್ಯರ್ಥಿ : ಅರ್ವಿಂದರ್ ಸಿಂಗ್ ಲವ್ಲಿ (ಕಾಂಗ್ರೆಸ್)
ಗೆಲುವಿನ ಅಂತರ : 391,222
ನವದೆಹಲಿ
ಗೆದ್ದ ಅಭ್ಯರ್ಥಿ : ಮೀನಾಕ್ಷಿ ಲೇಖಿ
ಸೋತ ಅಭ್ಯರ್ಥಿ : ಅಜಯ್ ಮೇಕನ್ (ಕಾಂಗ್ರೆಸ್)
ಗೆಲುವಿನ ಅಂತರ : 256,504

ಸರ್ವಂ ಮೋದಿ ಮಯ
ಈಶಾನ್ಯ ದೆಹಲಿ
ಗೆದ್ದ ಅಭ್ಯರ್ಥಿ : ಮನೋಜ್ ತಿವಾರಿ
ಸೋತ ಅಭ್ಯರ್ಥಿ : ಶೀಲಾ ದೀಕ್ಷಿತ್ (ಕಾಂಗ್ರೆಸ್)
ಗೆಲುವಿನ ಅಂತರ : 366,102
ವಾಯುವ್ಯ ದೆಹಲಿ
ಗೆದ್ದ ಅಭ್ಯರ್ಥಿ : ಹನ್ಸ್ ರಾಜ್ ಹನ್ಸ್
ಸೋತ ಅಭ್ಯರ್ಥಿ : ಗುಗನ್ ಸಿಂಗ್ (ಆಪ್)
ಗೆಲುವಿನ ಅಂತರ : 553,897

ಬಿಜೆಪಿ ಆರ್ಭಟಕ್ಕೆ ಕಾಂಗ್ರೆಸ್, ಆಪ್ ತತ್ತರ
ದಕ್ಷಿಣ ದೆಹಲಿ
ಗೆದ್ದ ಅಭ್ಯರ್ಥಿ : ರಮೇಶ್ ಬಿದೂರಿ
ಸೋತ ಅಭ್ಯರ್ಥಿ : ರಾಘವ್ ಚಡ್ಡಾ (ಆಪ್)
ಗೆಲುವಿನ ಅಂತರ : 367,043
ಪಶ್ಚಿಮ ದೆಹಲಿ
ಗೆದ್ದ ಅಭ್ಯರ್ಥಿ : ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ
ಸೋತ ಅಭ್ಯರ್ಥಿ : ಮಹಾಬಲ ಮಿಶ್ರಾ (ಕಾಂಗ್ರೆಸ್)
ಗೆಲುವಿನ ಅಂತರ : 578,486

ಬೆಂಗಳೂರು ನಗರದ ಎಲ್ಲಾ ಕ್ಷೇತ್ರಗಳು ಬಿಜೆಪಿಗೆ
ಬೆಂಗಳೂರು ದಕ್ಷಿಣ
ಗೆದ್ದ ಅಭ್ಯರ್ಥಿ : ತೇಜಸ್ವಿ ಸೂರ್ಯ
ಸೋತ ಅಭ್ಯರ್ಥಿ : ಬಿ ಕೆ ಹರಿಪ್ರಸಾದ್ (ಕಾಂಗ್ರೆಸ್)
ಗೆಲುವಿನ ಅಂತರ : 331,192
ಬೆಂಗಳೂರು ಕೇಂದ್ರ
ಗೆದ್ದ ಅಭ್ಯರ್ಥಿ : ಪಿ ಸಿ ಮೋಹನ್
ಸೋತ ಅಭ್ಯರ್ಥಿ : ರಿಜ್ವಾನ್ ಅರ್ಷದ್ (ಕಾಂಗ್ರೆಸ್)
ಗೆಲುವಿನ ಅಂತರ : 70,968
ಬೆಂಗಳೂರು ಉತ್ತರ
ಗೆದ್ದ ಅಭ್ಯರ್ಥಿ : ಡಿ ವಿ ಸದಾನಂದ ಗೌಡ
ಸೋತ ಅಭ್ಯರ್ಥಿ : ಕೃಷ್ಣ ಭೈರೇಗೌಡ (ಕಾಂಗ್ರೆಸ್)
ಗೆಲುವಿನ ಅಂತರ : 147,518












Click it and Unblock the Notifications