ಲೋಕಸಭೆ ಚುನಾವಣೆ 2024ರ ಫಲಿತಾಂಶ, ಡೈಲಿಹಂಟ್‌ನಲ್ಲಿ ನಿಖರ ಮಾಹಿತಿ
ನವದೆಹಲಿ, ಜೂನ್ 03: ಲೋಕಸಭೆ ಚುನಾವಣೆ 2024ರ ಫಲಿತಾಂಶ ಜೂನ್ 4ರ ಮಂಗಳವಾರ ಪ್ರಕಟವಾಗಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಮತದಾನ ನಡೆದಿತ್ತು. 8,360 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಿತು. ಏಪ್ರಿಲ್ 26ರಂದು 2ನೇ ಹಂತ, ಮೇ 7ರಂದು 3ನೇ ಹಂತ, ಮೇ 13ರಂದು 4ನೇ ಹಂತ, ಮೇ 20ರಂದು 5ನೇ ಹಂತ, ಮೇ 25ರಂದು 6ನೇ ಹಂತ ಮತ್ತು ಜೂನ್ 1ರಂದು 7ನೇ ಹಂತದ ಮತದಾನ ನಡೆದಿದೆ.

ಮೊದಲ ಹಂತದಲ್ಲಿ 102, 2ನೇ ಹಂತದಲ್ಲಿ 88, 3ನೇ ಹಂತದಲ್ಲಿ 94, 4ನೇ ಹಂತದಲ್ಲಿ 96, 5ನೇ ಹಂತದಲ್ಲಿ 49, 6ನೇ ಹಂತದಲ್ಲಿ 58 ಮತ್ತು 7ನೇ ಹಂತದಲ್ಲಿ 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. 26 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ಸಹ ನಡೆದಿದ್ದು, ಫಲಿತಾಂಶ ಪ್ರಕಟವಾಗಬೇಕಿದೆ.
ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಿದೆ. ವಿಧಾನಸಭೆ ಚುನಾವಣೆ ಫಲಿತಾಂಶವೂ ಜೂನ್ 4ರಂದು ಪ್ರಕಟವಾಗುತ್ತಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014, 2019ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಎರಡು ಬಾರಿ ಅಧಿಕಾರ ನಡೆಸಿದೆ. ಈ ಬಾರಿ 400ಕ್ಕೂ ಅಧಿಕ ಕೇತ್ರಗಳಲ್ಲಿ ಗೆಲ್ಲುವ ಮೂಲಕ 3ನೇ ಅವಧಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಎನ್‌ಡಿಎ ಮೈತ್ರಿಕೂಟ, ಬಿಜೆಪಿ ಪಕ್ಷದ ನಾಯಕರು ವಿಶ್ವಾಸದಲ್ಲಿದ್ದಾರೆ.
ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳನ್ನು ಸೇರಿಸಿ 'ಇಂಡಿಯಾ' ಮೈತ್ರಿಕೂಟ ರಚನೆ ಮಾಡಲಾಗಿದೆ. ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡು ವಿವಿಧ ಪಕ್ಷಗಳ ಜೊತೆ ಚುನಾವಣೆ ಎದುರಿಸಿದೆ. 400 ಕ್ಷೇತ್ರಗಳಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ ಎಂಬುದು ವಿಶೇಷವಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಟಿಎಂಸಿ, ಎಎಪಿ, ಸಮಾಜವಾದಿ ಪಕ್ಷ, ಎಐಎಡಿಎಂಕೆ, ಡಿಎಂಕೆ, ಜೆಡಿ(ಯು), ಬಿಎಸ್‌ಪಿ, ಟಿಡಿಪಿ, ವೈಎಸ್ಆರ್ ಕಾಂಗ್ರೆಸ್, ಶಿವಸೇವೆ, ಎನ್‌ಸಿಪಿ ತಮ್ಮ ತಮ್ಮ ಪ್ರಾಬಲ್ಯದ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಜೂನ್ 4ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಲೋಕಸಭೆಯಲ್ಲಿ ಬಹುಮತಗಳಿಸಲು ಬೇಕಾದ ಮ್ಯಾಜಿಕ್ ನಂಬರ್ 272. ಮಧ್ಯಾಹ್ನ 12 ಗಂಟೆಯ ವೇಳೆಗೆ ಯಾವ ಮೈತ್ರಿಕೂಟ ದೇಶದಲ್ಲಿ ಸರ್ಕಾರ ರಚನೆ ಮಾಡಲಿದೆ? ಎಂಬ ಚಿತ್ರಣ ಸಿಗುವ ನಿರೀಕ್ಷೆ ಇದೆ.
ಡೈಲಿಹಂಟ್ ಫಲಿತಾಂಶ; ಡೈಲಿಹಂಟ್ ಲೋಕಸಭೆ ಚುನಾವಣೆ 2024 ಫಲಿತಾಂಶ ಮತ್ತು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ನಿಖರವಾಗಿ ನೀಡಲಿದೆ. ಚುನಾವಣೆ ಎಂದರೆ ಕೇವಲ ಅಂಕಿ ಸಂಖ್ಯೆಗಳು ಎಂಬುದು ನಮ್ಮ ನಂಬಿಕೆಯಲ್ಲ.
ಜನರ ಬದುಕಿನ ಮೇಲೆ ಪ್ರಭಾವ ಬೀರುವ ಚುನಾವಣೆ ಮಾಹಿತಿ, ವಿವರಗಳು, ವಿಶ್ಲೇಷಣೆ ಮೂಲಕ ಸರಿಯಾದ ಚಿತ್ರಣವನ್ನು ಡೈಲಿಹಂಟ್ ನೀಡಲಿದೆ. ಒಮ್ಮೆ ಅಂಕಿ ಸಂಖ್ಯೆಗಳು ಬರಲು ಆರಂಭವಾದ ಬಳಿಕ ಎಲ್ಲಾ ದೃಷ್ಟಿಕೋನಗಳಿಂದ ಅದರ ವಿಶ್ಲೇಷಣೆ ಮಾಡಲಿದ್ದೇವೆ.
ಡೈಲಿಹಂಟ್ ಚುನಾವಣಾ ಫಲಿತಾಂಶದ ಚಿತ್ರಣವನ್ನು ಕಟ್ಟಿಕೊಡಲಿದೆ. ನಂಬರ್‌ಗಳ ಚಿತ್ರಣದ ಆಳಕ್ಕೆ ಇಳಿದು ವಿವರಗಳನ್ನು ನೀಡಲಿದ್ದೇವೆ. ಸಾಮಾನ್ಯ ಜನರಿಗೆ ರಾಜಕೀಯ ವಿಶ್ಲೇಷಕರ ಮೂಲಕ ಸರಿಯಾದ ವಿಶ್ಲೇಷಣೆ ಕಟ್ಟಿಕೊಡಲಿದ್ದೇವೆ.
ಲೈವ್ ಪೇಜ್ ಮೂಲಕ ಕ್ಷಣ-ಕ್ಷಣದ ಮಾಹಿತಿ, ಅಂಕಿ ಸಂಖ್ಯೆಯನ್ನು ವೇಗವಾಗಿ ನೀಡುವುದು, ಚಿತ್ರಣವನ್ನು ಸರಳವಾಗಿ ಜನರಿಗೆ ತಲುಪಿಸಲಾಗುತ್ತದೆ. ಕಳೆದ ಚುನಾವಣೆಯ ಫಲಿತಾಂಶದ ಜೊತೆ ಹೋಲಿಕೆ, ರಾಜ್ಯವಾರು, ಕ್ಷೇತ್ರವಾರು ಬದಲಾಗುವ ಸಂಖ್ಯೆಗಳನ್ನು ನಿಖರವಾಗಿ ನೀಡಲಿದ್ದೇವೆ.
ಚುನಾವಣಾ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣದ ಟ್ರೆಂಡ್ ಸಹ ಕಟ್ಟಿಕೊಡಲಿದ್ದೇವೆ. ಕ್ಷಣ ಕ್ಷಣದ ವಿಡಿಯೋಗಳು, ವೈರಲ್ ಮೀಮ್‌ಗಳು, ಟ್ರೆಂಡಿಂಗ್ ಸ್ಟೋರಿಗಳು ಸಹ ನಿಮಗೆ ಲಭ್ಯವಾಗಲಿವೆ. ಫೋಟೋ, ವಿಡಿಯೋ, ಫಲಿತಾಂಶದ ಬಗ್ಗೆ ನಾಯಕರ ಪ್ರತಿಕ್ರಿಯೆಗಾಗಿ, ಕ್ಷಣ ಕ್ಷಣದ ಫಲಿತಾಂಶ ಡೈಲಿಹಂಟ್‌ನಲ್ಲಿ ಲಭ್ಯ.
-
ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ












Click it and Unblock the Notifications