Khushbu Sundar: ಬಿಜೆಪಿ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರಣಧೀರನ ಬೆಡಗಿ!
ನವದೆಹಲಿ, ಏಪ್ರಿಲ್. 08: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ತಮಿಳುನಾಡಿನ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಸ್ಟಾರ್ ಪ್ರಚಾರಕಿಯಾಗಿದ್ದರು. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಬಳಿಕ ಮೊದಲ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಅವರು ಪಕ್ಷದ ಪರವಾಗಿ ನಿಲ್ಲಬೇಕಿತ್ತು. ಆದರೆ, ಚುನಾವಣಾ ಪ್ರಚಾರದಿಂದ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಹೌದು ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಬೇಕಿತ್ತು. ಸದ್ಯ ಅವರು ಪ್ರಚಾರದಿಂದ ಹಿಂದೆ ಸರಿಯುತ್ತಿದ್ದಾರೆ. ಭಾನುವಾರ ಪಕ್ಷದ ಹೈಕಮಾಂಡ್‌ಗೆ ಆರೋಗ್ಯ ಸಮಸ್ಯೆಯ ಕಾರಣ ಪ್ರಚಾರ ಚಟುವಟಿಕೆಗಳಿಂದ ತಮ್ಮನ್ನು ಬಿಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ನಟಿ, ರಾಜಕಾರಣಿ ಅವರು 2019 ರಲ್ಲಿ ದೆಹಲಿಯಲ್ಲಿ ನಡೆದ ಅಪಘಾತದಲ್ಲಿ ಆಗಿದ್ದ ತಮ್ಮ ಕಾಲಿನ ಗಾಯವನ್ನು ಕಾರಣವಾಗಿ ನೀಡಿದ್ದಾರೆ. ಕಾಲಿನ ಮೂಳೆ ಮುರಿತ ಉಂಟಾಗಿದ್ದು, ಈ ಗಾಯವು ಕಳೆದ ಐದು ವರ್ಷಗಳಿಂದ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಬಾರದು ಎಂದ ವೈದ್ಯಕೀಯ ಸಲಹೆಯ ಹೊರತಾಗಿಯೂ, ರಾಜ್ಯ ಚುನಾವಣೆಯಲ್ಲಿ ಪ್ರಚಾರವನ್ನು ಮುಂದುವರೆಸಿದ್ದರು. ಹೀಗಾಗಿ ತನ್ನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಈಗ ಅಗತ್ಯವಾದಗಿ ವಿರಾಮ ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ ಎಂದು ಭಾವನಾತ್ಮಕವಾಗಿ ಪತ್ರದಲ್ಲಿ ಬರೆದಿದ್ದಾರೆ.
"ನನ್ನ ಚಟುವಟಿಕೆಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸಬೇಕಾಗಿದೆ. ವಿಶೇಷವಾಗಿ ವ್ಯಾಪಕವಾದ ಪ್ರಯಾಣ ಮತ್ತು ದೀರ್ಘಾವಧಿ ನಿಲ್ಲುವುದನ್ನು ನಿಲ್ಲಿಸಬೇಕಿದೆ. ಆದರೆ, ಇವೆರಡೂ ಚುನಾವಣಾ ಪ್ರಚಾರಕ್ಕೆ ಅವಿಭಾಜ್ಯವಾಗಿವೆ. ಆದ್ದರಿಂದ ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ನನ್ನ ಸಕ್ರಿಯ ಭಾಗವಹಿಸುವಿಕೆಯನ್ನು ನಿಲ್ಲಿಸಬೇಕು" ಎಂದು ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
At times, hard decisions have to be taken and focus needs to be on one's health. I am at such a juncture today. I have dedicated myself to @BJP4India and have been following the path of our beloved PM @narendramodi ji, immersing myself in the election campaign activities. But… pic.twitter.com/tuevsqczok
— KhushbuSundar (Modi ka Parivaar) (@khushsundar) April 7, 2024
ಮುಂದುವರಿದು ನೇರ ಪ್ರಚಾರದಿಂದ ಹಿಂದೆ ಸರಿದಿದ್ದರೂ, ಪಕ್ಷದ ಉದ್ದೇಶಕ್ಕೆ ಬದ್ಧವಾಗಿದ್ದಾರೆ. ಬಿಜೆಪಿಯ ನೀತಿಗಳು ಮತ್ತು ಕಾರ್ಯಕ್ರಮಗಳಿಗಾಗಿ ತನ್ನ ಕೆಲಸವನ್ನು ಮುಂದುವರಿಸಲು ಸಾಮಾಜಿಕ ಮಾಧ್ಯಮ ವೇದಿಕೆಯೊಂದಿಗೆ ಸಕ್ರೀಯವಾಗಿರುತ್ತೆನೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದ ಅವರು, ಹಠಾತ್ ಆಗಿ ಚುನಾವಣಾ ಕೆಲಸಗಳಿಂದ ವಿರಾಮ ಪಡೆಯುತ್ತಿರುವುದು ಅನಿರೀಕ್ಷಿತ. ಇದು ಆರೋಗ್ಯ ಸಮಸ್ಯೆ ಅಷ್ಟೇಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂಬ ಚರ್ಚೆಗಳು ಈಗಾಗಲೇ ಆರಂಭವಾಗಿವೆ.












Click it and Unblock the Notifications