ಚಿತ್ರಗಳಲ್ಲಿ: ಲೋಕಸಭೆ ಕುರುಕ್ಷೇತ್ರ ಕದನ ಸಿದ್ಧತೆ
ಬೆಂಗಳೂರು, ಏ.23: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಏಳನೇ ಹಂತದ ಚುನಾವಣೆ ಏ.24ರಂದು ಮುಗಿದಿದ್ದು, ಮೇ.7 ರಂದು 8ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಒಟ್ಟು 9 ಹಂತದ ಚುನಾವಣಾ ಪ್ರಕ್ರಿಯೆ ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿದೆ.
ವಾರಣಾಸಿ, ಅಮೇಥಿಯಲ್ಲಿ ಕದನದ ಬಿಸಿ ದಿನೇದಿನೇ ಜೋರಾಗುತ್ತಿದೆ. 8ನೇ ಹಂತದಲ್ಲಿ 7 ರಾಜ್ಯಗಳ 64 ಸ್ಥಾನಗಳಿಗಾಗಿ ಸ್ಪರ್ಧೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ 6, ಉತ್ತರಾಖಂಡ್ ನ 5, ಹಿಮಾಚಲ ಪ್ರದೇಶದ 4, ಉತ್ತರಪ್ರದೇಶದ 80, ಬಿಹಾರದ 40, ಆಂಧ್ರಪ್ರದೇಶ 42 ಹಾಗೂ ಪಶ್ಚಿಮ ಬಂಗಾಳದ 42 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.[10 ಘಟಾನುಘಟಿಗಳ ಹಣೆಬರಹ ಬುಧವಾರ ನಿರ್ಧಾರ]
ಈ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಸಿಬ್ಬಂದಿ ಎಲೆಕ್ಟ್ರಾನಿಕ್ ಮತ ಯಂತ್ರ ಸಿದ್ದಪಡಿಸಿಕೊಂಡು ಮತಗಟ್ಟೆಗಳತ್ತ ದಾಪುಗಾಲಿಟ್ಟಿದ್ದಾರೆ. ಚುನಾವಣಾ ಮತದಾನ ಸಿದ್ಧತೆ, ಕಳೆದ ವಾರ ಪ್ರಮುಖರಿಂದ ಮತಯಾಚನೆ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಇವಿಎಂಗಳನ್ನು ಹೊತ್ತ ಚುನಾವಣಾಧಿಕಾರಿಗಳು
ಫೈಜಾಬಾದ್: ಇವಿಎಂಗಳನ್ನು ಹೊತ್ತ ಚುನಾವಣಾಧಿಕಾರಿಗಳು ಮತಗಟ್ಟೆಗಳತ್ತ ಮಂಗಳವಾರ ಆಗಮಿಸಿದ್ದು ಹೀಗೆ.. ಚಿತ್ರ : ಪಿಟಿಐ

ಎಲ್ಲೆಡೆ ಬಿಗಿ ಭದ್ರತಾ ವ್ಯವಸ್ಥೆ
ಅಲಹಾಬಾದ್: ಪಂಜಾಬ್ ಪೊಲೀಸ್ ಹೌಸಿಂಗ್ ಕಾರ್ಪ್ ಅಧಿಕಾರಿಗಳು ಮತಗಟ್ಟೆಯತ್ತ ಮತಯಂತ್ರಗಳನ್ನು ಹೊತ್ತು ತರುತ್ತಿರುವ ಚಿತ್ರ.PTI Photo

ಸೆಕ್ಸ್ ವರ್ಕರ್ಸ್ ಗೆ ಮತದಾನ ಪಾಠ
ಕೋಲ್ಕತ್ತಾದ ಸೆಕ್ಸ್ ವರ್ಕರ್ಸ್ ಗೆ ಮತದಾನದ ಮಹತ್ವದ ಬಗ್ಗೆ ಪಾಠ ಮಾಡುತ್ತಿರುವ ಚುನಾವಣೆ ಅಧಿಕಾರಿಗಳು

ರಾಹುಲ್ ಗಾಂಧಿ ಪರ ಪ್ರಿಯಾಂಕಾ ಪ್ರಚಾರ
ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಪ್ರಿಯಾಂಕಾ ಗಾಂಧಿ ಪ್ರಚಾರ

ಆಮ್ ಆದ್ಮಿ ಪಕ್ಷದವರ ಜತೆ ಪ್ರಿಯಾಂಕಾ
ಅಮೇಥಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಕಂಡಾಗ ಕೈ ಕುಲುಕಿ ವಿಷ್ ಮಾಡಿದ ಪ್ರಿಯಾಂಕಾ ಗಾಂಧಿ

ಗುಂಟೂರಿನಲ್ಲಿ ಸೋನಿಯಾ ಗಾಂಧಿ
ಸೀಮಾಂಧ್ರದ ಗುಂಟೂರಿನಲ್ಲಿ ಚುನಾವಣಾ ಪ್ರಚಾರ ನಿರತ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ಸಿಇಸಿ ಜತೆ ಸಭೆ ನಂತರ ಅನಂತಕುಮಾರ್
ಸಿಇಸಿ ಜತೆ ಸಭೆ ನಂತರ ಅನಂತಕುಮಾರ್, ಮುಖ್ತಾರ್ ಅಬ್ಬಾಸ್ ನಖ್ವಿ, ಚಂದನ್ ಮಿತ್ರಾ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಚಾರ
ಚಂಪರನ್ ನ ಚಿರಾಯದಲ್ಲಿ ಚುನಾವಣಾ ಪ್ರಚಾರ ನಿರತ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್

ಮಾಯಾವತಿ ಅಭಿಮಾನಿಗಳ ಬ್ಯಾನರ್
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅಭಿಮಾನಿಗಳು ಬ್ಯಾನರ್ ಹಿಡಿದುಕೊಂಡು ರೂರ್ಖಿಯಲ್ಲಿ ಪ್ರಚಾರ ನಿರತರಾಗಿದ್ದಾರೆ.

ಕುಮಾರ್ ವಿಶ್ವಾಸ್ ಪರ ಕೇಜ್ರಿವಾಲ್
ಅಮೇಥಿಯಲ್ಲಿ ಕುಮಾರ್ ವಿಶ್ವಾಸ್ ಪರ ಕೇಜ್ರಿವಾಲ್ ಅವರು ಪ್ರಚಾರ ನಡೆಸಿದರು.

ಪ್ರಿಯಾಂಕಾ ಗಾಂಧಿ ಜನಸ್ಪಂದನ ಚಿತ್ರ
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ನಡೆಸುವ ಜನಸ್ಪಂದನ ಚಿತ್ರ

ಸಮಾಜವಾದಿ ಪಕ್ಷದ ಪ್ರಚಾರ ವೈಖರಿ
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರ ಪ್ರಚಾರದ ವೈಖರಿ












Click it and Unblock the Notifications