ಚಿತ್ರಗಳಲ್ಲಿ: ವಾರಣಾಸಿ ಕದನ, ಪ್ರಿಯಾಂಕಾ 'ಸಹ' ಭೋಜನ
ಬೆಂಗಳೂರು,
ಏ.23: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಕರ್ನಾಟಕ ಸೇರಿ 121 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿದೆ. ಆರನೇ ಹಂತದ ಚುನಾವಣೆ ಏ.24ರಂದು ನಡೆಯಲಿದೆ. ಒಟ್ಟು 9 ಹಂತದ ಚುನಾವಣಾ ಪ್ರಕ್ರಿಯೆ ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿದೆ. id="toptextpromo"> id='are-slot-1' class='oiad oi-axt oiadv'>ವಾರಣಾಸಿಯಲ್ಲಿ
ಕದನದ ಬಿಸಿ ದಿನೇದಿನೇ ಜೋರಾಗುತ್ತಿದೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಅತ್ತ ರಾಯ್ ಬರೇಲಿಯಲ್ಲಿ ಅಮ್ಮ ಸೋನಿಯಾ ಗಾಂಧಿ ಪರ ಬಿರುಸಿನ ಪ್ರಚಾರ ನಡೆಸಿರುವ ಪ್ರಿಯಾಂಕಾ ಗಾಂಧಿ ಸ್ಥಳೀಯರೊಂದಿಗೆ ಕಲೆತು ಬೆರೆತು ಸಹ ಭೋಜನ ಮಾಡಿದ್ದಾರೆ. ವಾರಣಾಸಿ, ಉತ್ತರಪ್ರದೇಶ, ಹೈದರಾಬಾದ್,ಕೊಚ್ಚಿ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ.. id='are-slot-2' class='oiad oi-axt oiadv'>
ಪ್ರಿಯಾಂಕಾ ಗಾಂಧಿ 'ಸಹ' ಭೋಜನ
ರಾಯ್ ಬರೇಲಿಯಲ್ಲಿ ಅಮ್ಮ ಸೋನಿಯಾ ಗಾಂಧಿ ಪರ ಬಿರುಸಿನ ಪ್ರಚಾರ ನಡೆಸಿರುವ ಪ್ರಿಯಾಂಕಾ ಗಾಂಧಿ ಸ್ಥಳೀಯರೊಂದಿಗೆ ಕಲೆತು ಬೆರೆತು ಸಹ ಭೋಜನ ಮಾಡಿದ್ದಾರೆ.

ಸೋನಿಯಾ ಗಾಂಧಿ ಪರ ಬಿರುಸಿನ ಪ್ರಚಾರ
ರಾಯ್ ಬರೇಲಿಯಲ್ಲಿ ಅಮ್ಮ ಸೋನಿಯಾ ಗಾಂಧಿ ಪರ ಬಿರುಸಿನ ಪ್ರಚಾರ ನಡೆಸಿರುವ ಪ್ರಿಯಾಂಕಾ ವಾಧ್ರಾ.

ಪ್ರಿಯಾಂಕಾ ಗಾಂಧಿ ಸರಳತೆ ಕಂಡ ಹಳ್ಳಿಗರು
ಗ್ರಾಮಸ್ಥರ ಜತೆ ಕಲೆತು ಬೆರತ ಪ್ರಿಯಾಂಕಾ ಗಾಂಧಿ ಸರಳತೆ ಕಂಡು ಹಳ್ಳಿಗರು ಹಿರಿಹಿರಿ ಹಿಗ್ಗಿದರು. ಪ್ರಿಯಾಂಕಾ ಗಾಂಧಿ ಅವರು ನಿಗದಿತ ಕಾರ್ಯಕ್ರಮವಲ್ಲದೆ ಗ್ರಾಮಸ್ಥರ ಕರೆಗೆ ಓಗೊಟ್ಟು ತೆರಳುತ್ತಿರುವುದರಿಂದ ಭದ್ರತಾ ಸಿಬ್ಬಂದಿಗಳು ಕಷ್ಟಪಟ್ಟು ಪ್ರಿಯಾಂಕಾ ಅವರಿಗೆ ಸುರಕ್ಷತೆ ಒದಗಿಸುತ್ತಿದ್ದ ದೃಶ್ಯ ಕಂಡು ಬಂದಿತು

ಗ್ರಾಮಸ್ಥರ ಜತೆ ಸಂವಾದ ನಡೆಸಿದ ಪ್ರಿಯಾಂಕಾ
ಉತ್ತರಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಜನತೆಯ ಕಷ್ಟ ಸುಖ ಆಲಿಸಿದ ಪ್ರಿಯಾಂಕಾ ಗಾಂಧಿ

ನಿಮ್ಮ ನೋವಿಗೆ ನಾನು ಸ್ಪಂದಿಸುತ್ತೇನೆ
ನಿಮ್ಮ ನೋವಿಗೆ ನಾನು ಸ್ಪಂದಿಸುತ್ತೇನೆ ಎಂದು ನೊಂದವರಿಗೆ ಭರವಸೆ ನೀಡಿದ ಪ್ರಿಯಾಂಕಾ

ಪ್ರಿಯಾಂಕಾಗೆ ಎಲ್ಲೆಡೆ ಭರ್ಜರಿ ಸ್ವಾಗತ
ಅಮೇಥಿಯಲ್ಲಿ ರಾಹುಲ್ ಗಾಂಧಿ ಪರ ಹಾಗೂ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದ ಪ್ರಿಯಾಂಕಾ ಅವರು ವಾರಣಾಸಿಯಲ್ಲೂ ಪ್ರಚಾರ ನಡೆಸಿ ಮೋದಿ ವಿರುದ್ಧ ಕಿಡಿಕಾರಲು ಸನ್ನದ್ಧರಾಗಿದ್ದಾರೆ.

ಮತ್ತೆ ಮತಯಾಚನೆಗೆ ಇಳಿದ ಸೋನಿಯಾ
ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ಮತ್ತೆ ಮತಯಾಚನೆಯಲ್ಲಿ ತೊಡಗಿದ್ದಾರೆ. ಕಳೆದ ವಾರ ಅನಾರೊಗ್ಯದ ನಿಮಿತ್ತ ಸೋನಿಯಾ ಅವರು ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರ ಸಮಾವೇಶಕ್ಕೆ ಗೈರು ಹಾಜರಾಗಿದ್ದರು.

ನಾಮಪತ್ರ ಸಲ್ಲಿಸಿದ ಆಮ್ ಅದ್ಮಿ ಮುಖಂಡ
ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿರುವ ಆಮ್ ಅದ್ಮಿ ಮುಖಂಡ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.

ಆಂಧ್ರದಲ್ಲಿ ಮೋದಿ ಅಲೆ ಮೂಡಿದ್ದು ಹೀಗೆ
ಮೋದಿ ಅಲೆ ಎಂಬುದು ಹೇಗಿರುತ್ತೆ ಗೊತ್ತಿಲ್ಲ. ಆಂಧ್ರಪ್ರದೇಶದಲ್ಲಿ ನರೇಂದ್ರ ಮೋದಿ ಸರಣಿ ಸಮಾವೇಶದ ಸಂದರ್ಭದಲ್ಲಿ ಕಂಡು ಬಂದ ಬಿಜೆಪಿ ಬಾವುಟ, ಜನ ಸಾಗರ

ಕೊಚ್ಚಿಯಲ್ಲಿ ಮರು ಮತದಾನ ಶಾಂತಿಯುತ
ಕೇರಳದ ಕೊಚ್ಚಿಯಲ್ಲಿ ಬುಧವಾರ ಮೂರು ಬೂತ್ ಗಳಲ್ಲಿ ಮರು ಮತದಾನ ಶಾಂತಿಯುತವಾಗಿ ನೆರವೇರಿದೆ

ಮುಲಾಯಂ ಸಿಂಗ್ ಯಾದವ್ ಪ್ರಚಾರ
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ನಾಮಪತ್ರ ಸಲ್ಲಿಸಿಯಾಗಿದ್ದು, ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಒಂದೇ ವೇದಿಕೆಯಲ್ಲಿ ನಾಯ್ಡು, ಮೋದಿ, ಪವನ್
ಒಂದೇ ವೇದಿಕೆಯಲ್ಲಿ ನಾಯ್ಡು, ಮೋದಿ, ಪವನ್ ಕಾಣಿಸಿಕೊಳ್ಳುವ ಮೂಲಕ ಟಿಡಿಪಿ, ಬಿಜೆಪಿ ಮೈತ್ರಿ ಸಬಲಗೊಳಿಸಿದ್ದಾರೆ. ಜತೆಗೆ ಪವನ್ ಕಲ್ಯಾಣ್ ಅವರ ಜನಸೇನಾ ಕೂಡಾ ಮೋದಿ ಬೆಂಬಲಕ್ಕೆ ನಿಂತಿದೆ.

ತಮಿಳುನಾಡಿನಲ್ಲಿ ವೇದಿಕೆ ಬಳಿ ಬಂದ ನಾಯಿ
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಮುಖಂಡ ಎಂ.ಕರುಣಾನಿಧಿ ಪ್ರಚಾರ ಸಮಾವೇಶದ ಸಂದರ್ಭದಲ್ಲಿ ನಾಯಿಯೊಂದು ವೇದಿಕೆ ಬಳಿ ಕಾಣಿಸಿಕೊಂಡು ಗೊಂದಲ ಮೂಡಿಸಿತ್ತು.

ರಾಹುಲ್ ಗಾಂಧಿಗೆ ಜೈ ಎಂದು ಪ್ರಚಾರ
ಕೊಯಮತ್ತೂರಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾವಚಿತ್ರ ಮೆರವಣಿಗೆ ಹಾಗೂ ಮತಯಾಚನೆ.












Click it and Unblock the Notifications