ಬಿಹಾರದಲ್ಲಿ ಪತ್ರಕರ್ತನ ಮೇಲೆ ಗುಂಡಿನ ದಾಳಿ, ಸ್ಥಿತಿ ಗಂಭೀರ
ಬಿಹಾರ, ಸೆಪ್ಟೆಂಬರ್ 7: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸುದ್ದಿ ಜನಮಾನಸದಿಂದ ಮಾಸುವ ಮುನ್ನವೇ ಮತ್ತೊಬ್ಬ ಪತ್ರಕರ್ತನ ಮೇಲೆ ಕೊಲೆ ಯತ್ನ ನಡೆದಿದೆ.
ಬಿಹಾರದ ಸ್ಥಳೀಯ ಪತ್ರಕರ್ತರೊಬ್ಬರ ಮೇಲೆ ಬೈಕಿನಲ್ಲಿ ಬಂದ ಆಗಂತುಕರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಗೆ ಬಿಹಾರದ ಅರ್ವಾಲಾದ ಸ್ಥಳೀಯ ಪತ್ರಿಕೆ 'ರಾಷ್ಟ್ರೀಯ ಸಹರಾ'ದ ಪತ್ರಕರ್ತ ಪಂಕಜ್ ಮಿಶ್ರಾ ಗಂಭೀರ ಗಾಯಗೊಂಡಿದ್ದಾರೆ.

ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಬೆನ್ನಿಗೆ ಮತ್ತೋರ್ವ ಪತ್ರಕರ್ತನ ಹತ್ಯೆಗೆ ಯತ್ನ ನಡೆದಿರುವುದು ಪತ್ರಕರ್ತರನ್ನು ಬೆಚ್ಚಿ ಬೀಳಿಸಿದೆ.












Click it and Unblock the Notifications