ಗುಜರಾತ್ ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: ಇಂದು ಮತದಾನ
ಅಹ್ಮದಾಬಾದ್, ಫೆಬ್ರವರಿ 17: ಗುಜರಾತಿನಲ್ಲಿ ಇಂದು(ಫೆ.17) ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, 74 ನಗರಪಾಲಿಕೆಗಳಿಗೆ ಮತದಾನ ನಡೆಯಲಿದೆ.
2016 ರಲ್ಲಿ ಸ್ಥಳೀಯ ಸಂಸ್ಥೆಗಳ 123 ಸೀಟುಗಳಲ್ಲಿ 106 ನ್ನು ಬಿಜೆಪಿ ಗೆದ್ದು ಅಲೆ ಎಬ್ಬಿಸಿತ್ತು. ಈ ಬಾರಿಯೂ ಅದೇ ಮರುಕಳಿಸುತ್ತದೆ ಎಂಬ ವಿಶ್ವಾಸ ಬಿಜೆಪಿಯದು.

ಒಟ್ಟು 2763 ಮತಗಟ್ಟೆಗಳಲ್ಲಿ, 522 ಮುನ್ಸಿಪಲ್ ಬೋರ್ಡ್ ನ 1988 ಸೀಟುಗಳಿಗೆ ಮತದಾನ ನಡೆಯಲಿದೆ. ಇವುಗಳಲ್ಲಿ 530 ಬೂತ್ ಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಲಾಗಿದ್ದು, 95 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಘೋಷಿಸಲಾಗಿದೆ. ಫೆ.19 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications