ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಪ್ರತಿಭಟನೆಯಿಂದ ರದ್ದಾದ ರೈಲು ಮಾರ್ಗಗಳ ಪಟ್ಟಿ

|
Google Oneindia Kannada News

ನವದೆಹಲಿ, ಡಿ.2: ಕೇಂದ್ರ ಸರ್ಕಾರದ ಹೊಸ ಕೃಷಿ ವಿಧೇಯಕಗಳ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ ಒಂದು ವಾರದಿಂದ ಮುಂದುವರೆದಿದೆ. ರೈತರ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದೆ. ಡಿಸೆಂಬರ್ 3 ರಂದು ಇನ್ನೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

Recommended Video

Farmers Protest: Delhiಯಲ್ಲಿ ರೈತರ ಮೇಲೆ ಹಿಂಸಾಚಾರ ನಡೆದಿದೆಯೇ , ಅಸಲಿ ಸತ್ಯ ಏನು | Oneindia Kannada

ರೈತರು ಪ್ರತಿಭಟನೆಯನ್ನು ನಿಲ್ಲಿಸಿ ಮಾತುಕತೆಗೆ ಬರಬೇಕೆಂದು ಮನವಿ ಮಾಡುತ್ತೇವೆ. ಆದರೂ ಪ್ರತಿಭಟನೆಯನ್ನು ನಿಲ್ಲಿಸುವ ನಿರ್ಧಾರ ರೈತ ಸಂಘಟನೆಗಳು ಮತ್ತು ರೈತರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದ್ದಾರೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ, ಪಂಜಾಬ್ ಮತ್ತು ಹರಿಯಾಣ ಗಡಿ ಪ್ರದೇಶಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ಉತ್ತರ ವಿಭಾಗದ ರೈಲು ಮಾರ್ಗ, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

List of trains that got cancelled or diverted by Indian Railways due to farmers agitation

ರೈಲು ಸಂಚಾರ ರದ್ದು/ಬದಲಿ/ತಾತ್ಕಾಲಿಕ ರದ್ದು ವಿವರ

* 09613 ಅಜ್ಮೇರ್- ಅಮೃತ್ ಸರ್ ಎಕ್ಸ್ ಪ್ರೆಸ್ ವಿಶೇಷ ರೈಲು -ಡಿಸೆಂಬರ್ 2ರಂದು ರದ್ದು
* 09612 ಅಮೃತ್ ಸರ್ -ಅಜ್ಮೇರ್ ಎಕ್ಸ್ ಪ್ರೆಸ್ ವಿಶೇಷ ರೈಲು -ಡಿಸೆಂಬರ್ 3ರಂದು ರದ್ದು

* 05211 ದಿಬ್ರುಘರ್- ಅಮೃತ್ ಸರ್ ಎಕ್ಸ್ ಪ್ರೆಸ್ ರೈಲು- ಡಿಸೆಂಬರ್ 3ರಂದು ರದ್ದು
* 05212 ಅಮೃತ್ ಸರ್ -ದಿಬ್ರುಘರ್ ಎಕ್ಸ್ ಪ್ರೆಸ್ ರೈಲು ಕೂಡಾ ಡಿಸೆಂಬರ್ 3ರಂದು ರದ್ದಾಗಿದೆ.

* 04998/04997 ಭಟಿಂಡಾ-ವಾರಣಾಸಿ ಎಕ್ಸ್ ಪ್ರೆಸ್ ವಿಶೇಷ ರೈಲು ಮುಂದಿನ ಸೂಚನೆ ತನಕ ರದ್ದು.

* 02715 ನಾಂದೇಡ್- ಅಮೃತ್ ಸರ್ ಎಕ್ಸ್ ಪ್ರೆಸ್ -ಡಿಸೆಂಬರ್ 2 ರಂದು ನವದೆಹಲಿ ಬಳಿ ಸಂಚಾರ ಮೊಟಕು.

* 02925- ಬಾಂದ್ರಾ ಟರ್ಮಿನಸ್ -ಅಮೃತ್ ಸರ್ -ಡಿಸೆಂಬರ್ 2 ರಂದು ಚಂದೀಗಢ ಬಳಿ ಸಂಚಾರ ಮೊಟಕು.

* 04650/74- ಅಮೃತ್ ಸರ್- ಜಾಯ್ ನಗರ್ ಎಕ್ಸ್ ಪ್ರೆಸ್ ಡಿಸೆಂಬರ್ 2 ಮಾರ್ಗ ಬದಲಾಗಿದ್ದು, ಅಮೃತ್ ಸರ್- ತರ್ನಾತರನ್-ಬಿಯಾಸ್ ಮಾರ್ಗದಲ್ಲಿ ಸಂಚರಿಸಲಿದೆ.

* 08215 ದುರ್ಗ್ -ಜಮ್ಮು ತಾವಿ ಎಕ್ಸ್ ಪ್ರೆಸ್ ಡಿಸೆಂಬರ್ 2ರಂದು ಬದಲಿ ಮಾರ್ಗದಲ್ಲಿ ಲೂಧಿಯಾನಾ ಜಲಂಧರ್ ಕಂಟೋನ್ಮೆಂಟ್- ಪಠಾನ್ ಕೋಟ್ ಕಂಟೋನ್ಮೆಂಟ್ ಮಾರ್ಗದಲ್ಲಿ ಸಂಚರಿಸಲಿದೆ
* 08216 ಜಮ್ಮು ತಾವಿ ಇಂದ ದುರ್ಗ್ ಎಕ್ಸ್ ಪ್ರೆಸ್ ಡಿಸೆಂಬರ್ 4ರಂದು ಬದಲಿ ಮಾರ್ಗದಲ್ಲಿ ಪಠಾನ್ ಕೋಟ್ ಕಂಟೋನ್ಮೆಂಟ್ -ಲೂಧಿಯಾನಾ ಜಲಂಧರ್ ಕಂಟೋನ್ಮೆಂಟ್ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಭಾರತೀಯ ರೈಲ್ವೆಯ ಉತ್ತರ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

English summary
Due to agitation being conducted by farmers of Punjab, some trains run by Northern Railway have been cancelled/short terminated/short-originated/diverted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X