• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆ ಬಾಗಿಲಿಗೆ ಬರಲಿದೆ ಮದ್ಯ; ಒಬ್ಬರಿಗೆ 2 ಲೀಟರ್ ಮಾತ್ರ!

|

ನವದೆಹಲಿ, ಮೇ 06 : ಪಂಜಾಬ್ ಸರ್ಕಾರ ಗುರುವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಕರ್ಫ್ಯೂ ಸಡಿಲಿಕೆಯಾದ ಅವಧಿಯಲ್ಲಿ ಮಾತ್ರ ಅಂಗಡಿ ತೆರೆಯಬಹುದು. ಗ್ರಾಹಕರ ಮನೆಗೆ ಮದ್ಯ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಯಲ್ಲಿರುವ ಪಂಜಾಬ್‌ನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ತನಕ ಮಾತ್ರ ಕರ್ಫ್ಯೂ ಸಡಿಲಿಕೆ ಇರಲಿದ್ದು, ಆಗ ಮಾತ್ರ ಮದ್ಯ ಮಾರಾಟ ಮಾಡಬಹುದು.

ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ?

ಸರ್ಕಾರ ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಿದೆ. ಆದರೆ, ಒಬ್ಬ ವ್ಯಕ್ತಿ 2 ಲೀಟರ್ ಮದ್ಯವನ್ನು ಮಾತ್ರ ಖರೀದಿ ಮಾಡಬಹುದು. ಅಲ್ಲದೇ ಮದ್ಯವನ್ನು ಮನೆಗೆ ತಲುಪಿಸುವ ಡೆಲಿವರಿ ಬಾಯ್ ಕರ್ಫ್ಯೂ ಅವಧಿಯಲ್ಲಿ ಸಂಚಾರ ನಡೆಸಲು ಪಾಸು ಹೊಂದಿರಬೇಕು.

ಎಣ್ಣೆ ಸಿಕ್ಕಿದ್ದಕ್ಕೆ ದೇವರಿಗೂ ಮದ್ಯ ಸೇವೆ ಮಾಡಿದ ಕುಡುಕ

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಕೇಂದ್ರಕ್ಕೆ ಮೊದಲು ಪ್ರಸ್ತಾವನೆ ಸಲ್ಲಿಸಿದ ರಾಜ್ಯ ಪಂಜಾಬ್. ಮೊದಲು ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಿದರೂ ಬಳಿಕ ಅನುಮತಿ ನೀಡಿತು.

ಲಾಕ್‌ಡೌನ್ ಮಧ್ಯೆ ಶಾಕ್: ನಾಳೆಯಿಂದ ದುಬಾರಿಯಾಗಲಿದೆ ಮದ್ಯ

ಷರತ್ತುಗಳು ಅನ್ವಯ

ಷರತ್ತುಗಳು ಅನ್ವಯ

ಪಂಜಾಬ್‌ನಲ್ಲಿಯೇ ತಯಾರಾದ ಮದ್ಯವನ್ನು ಮನೆಗೆ ತಲುಪಿಸಲು ಸರ್ಕಾರ ಅವಕಾಶ ನೀಡಿಲ್ಲ. ಪಂಜಾಬ್ ಅಬಕಾರಿ ಕಾಯ್ದೆ 1914ರ ಅನ್ವಯ ಲಿಕ್ಕರ್ ಮನೆ ಬಾಗಿಲಿಗೆ ತಲುಪಿಸಲು ಅನುಮತಿ ಇಲ್ಲ. ಮದ್ಯದ ಅಂಗಡಿಗಳ ಮುಂದೆ ಜನ ಸಂದಣಿ ಸೇರದಂತೆ ತಡೆಯಲು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಕಳ್ಳಸಾಗಣೆ ತಡೆಗೆ ಪ್ರಯತ್ನ

ಕಳ್ಳಸಾಗಣೆ ತಡೆಗೆ ಪ್ರಯತ್ನ

ಮದ್ಯದ ಕಳ್ಳ ಸಾಗಣೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಮದ್ಯವನ್ನು ಡೆಲಿವರಿ ಮಾಡುವವರು ಅದಕ್ಕೆ ಸಂಬಂಧಿಸಿದ ಬಿಲ್ ಹೊಂದಿರಬೇಕು. ಯಾವ ಸಮಯದಲ್ಲಿ ಮನೆಗೆ ಮದ್ಯ ತಲುಪಿಸಬಹುದು ಎಂದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಲಿದ್ದಾರೆ.

ಮದ್ಯದ ಅಂಗಡಿಗಳು

ಮದ್ಯದ ಅಂಗಡಿಗಳು

ಮದ್ಯದ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಲಿಕ್ಕರ್ ಶಾಪ್‌ ಒಳಗೆ 5ಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಸಿಬ್ಬಂದಿ ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಪಾಡಲು ಗುರುತು ಮಾಡಬೇಕು ಎಂದು ಸೂಚಿಸಲಾಗಿದೆ.

ಕೊರೊನಾ ಸ್ಥಿತಿಗತಿ

ಕೊರೊನಾ ಸ್ಥಿತಿಗತಿ

ಪಂಜಾಬ್ ರಾಜ್ಯದಲ್ಲಿ ಇದುವರೆಗೂ 1451 ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿದೆ. 25 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಲಾಕ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಆದರೆ, ಕರ್ಫ್ಯೂ ಜಾರಿಯಲ್ಲಿದೆ.

English summary
Punjab government has ordered opening of liquor shops from May 7, 2020 with a provision to deliver liquor at doorstep of residents. But single buyer only get two litres of liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X