Liquor: ಸ್ಕಾಚ್ ವಿಸ್ಕಿ, ಜಿನ್ ಬೆಲೆ ಇಳಿಕೆ.. ಆಸೆ ನೆರವೇರಿಸಿಕೊಳ್ಳಲು ಕಾಯುತ್ತಿದ್ದ ಮದ್ಯಪ್ರಿಯರಿಗೆ ಭರ್ಜರಿ ಗುಡ್ ನ್ಯೂನ್

Liquor Price Cut: ಸಾಮಾನ್ಯವಾಗಿ ದೊಡ್ಡ (ಸ್ಕಾಚ್ ವಿಸ್ಕಿ, ಜಿನ್) ಬ್ರ್ಯಾಂಡ್‌ಗಳ ಎಣ್ಣೆ ರುಚಿ ನೋಡಬೇಕೆಂಬ ಬಹುತೇಕ ಮದ್ಯಪ್ರಿಯರ ಕನಸು ಕನಸಾಗಿಯೇ ಉಳಿದುಬಿಡುತ್ತಿತ್ತು. ದುಬಾರಿ ಬೆಲೆ ಇದ್ದ ಕಾರಣ ಕೊಂಡುಕೊಳ್ಳಲು ಸಾಧ್ಯವಾಗದೆ ಶಾಪ್‌ಗಳಲ್ಲಿ ಅವುಗಳನ್ನು ನೋಡಿ ಕಣ್ಣು ತಂಪು ಮಾಡಿಕೊಳ್ಳುತ್ತಿದ್ದರು ಅಷ್ಟೇ.. ಆದರೆ ಇದೀಗ ಅಂತಹವರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ.

ಭಾರತ ಮತ್ತು ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ದೇಶದಲ್ಲಿ ವಿದೇಶಿ ಬ್ರ್ಯಾಂಡ್‌ಗಳ ಮದ್ಯದ ಬೆಲೆಗಳು ಗಣನೀಯವಾಗಿ ಕಡಿಮೆ ಆಗಲಿವೆ. ಈ ಐತಿಹಾಸಿಕ ವ್ಯಾಪಾರ ಒಪ್ಪಂದವು ಪ್ರೀಮಿಯಂ ಮದ್ಯ ಪ್ರಿಯರಿಗೆ ದೊಡ್ಡ ಸಮಾಧಾನ ತಂದಿದೆ. ಒಂದು ವೇಳೆ ಇವುಗಳ ಬೆಲೆ ಕಡಿಮೆ ಆದರೆ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Liquor India-UK FTA Scotch Whisky and Gin Prices May Drop as Import Duty is Slashed know details

ಆಮದು ಸುಂಕದಲ್ಲಿ ಭಾರಿ ಕಡಿತ

ಪ್ರಸ್ತುತ ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ ಸ್ಕಾಚ್ ವಿಸ್ಕಿ ಮತ್ತು ಜಿನ್ ಮೇಲೆ ಶೇಕಡಾ 150ರಷ್ಟು ಬೃಹತ್ ಪ್ರಮಾಣದ ಆಮದು ಸುಂಕವನ್ನು ವಿಧಿಸಲಾಗುತ್ತಿದೆ. ಹೊಸ ಒಪ್ಪಂದದ ಅಡಿಯಲ್ಲಿ ಈ ಸುಂಕವನ್ನು ತಕ್ಷಣವೇ ಶೇಕಡಾ 75ಕ್ಕೆ ಇಳಿಸಲು ತೀರ್ಮಾನ ಮಾಡಲಾಗಿದೆ. ಅಷ್ಟೇ ಅಲ್ಲದೆ ಮುಂದಿನ 10 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಈ ಸುಂಕವನ್ನು ಶೇಕಡಾ 40ಕ್ಕೆ ಇಳಿಸುವ ಸುದೀರ್ಘ ಯೋಜನೆಯನ್ನು ರೂಪಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್

ಸುಂಕ ಕಡಿತದ ಪರಿಣಾಮವಾಗಿ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಮೂಲ ಬೆಲೆಯಲ್ಲಿ ಸುಮಾರು ಶೇಕಡಾ 15ರಿಂದ 20ರಷ್ಟು ಇಳಿಕೆ ಆಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ. ಉದಾಹರಣೆಗೆ ಶೇಕಡ 150ರಷ್ಟಿದ್ದ ಆಮದು ಸುಂಕ ಶೇಕೆ 75ಕ್ಕೆ ಇಳಿಕೆಯಾಗಲಿದ್ದು, ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಶೇಕಡ 15-20 ರಷ್ಟು ರಿಯಾಯಿತಿ ಸಿಗಲಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಶೇಕಡ 40ಕ್ಕೆ ಸುಂಕ ಇಳಿಸುವ ಸಾಧ್ಯತೆಯಿದೆ. ಇದು ಜಾರಿಯಾದ್ರೆ ಜಾಗತಿಕ ಮಟ್ಟದ ಪ್ರಸಿದ್ಧ ಬ್ರ್ಯಾಂಡ್‌ಗಳು ಭಾರತೀಯ ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ.

ಅಂತಿಮ ಚಿಲ್ಲರೆ ಮಾರಾಟ ಬೆಲೆ ನಿರ್ಧರಿಸುವವರು ಯಾರು?

ಕೇಂದ್ರ ಸರ್ಕಾರವು ಆಮದು ಸುಂಕವನ್ನು ಇಳಿಕೆ ಮಾಡಿದರೂ, ಮದ್ಯದ ಅಂತಿಮ ಚಿಲ್ಲರೆ ಮಾರಾಟ ಬೆಲೆಯನ್ನು ನಿರ್ಧರಿಸುವ ಹಕ್ಕು ಆಯಾ ರಾಜ್ಯ ಸರ್ಕಾರಗಳ ಬಳಿ ಇದೆ. ರಾಜ್ಯಗಳ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸ್ಥಳೀಯ ಸಾಗಣೆ ವೆಚ್ಚ ಮತ್ತು ವಿತರಕರ ಕಮಿಷನ್ ಮದ್ಯದ ಬೆಲೆಯಲ್ಲಿ ಬಹುಪಾಲು ಇರುತ್ತದೆ. ಆದ್ದರಿಂದ ಕೇಂದ್ರ ಮಟ್ಟದ ಸುಂಕ ಕಡಿತದ ಪೂರ್ಣ ಪ್ರಮಾಣದ ಪ್ರಯೋಜನವು ಗ್ರಾಹಕರಿಗೆ ತಕ್ಷಣವೇ ಸಿಗದೇ ಇರಬಹುದು. ರಾಜ್ಯಗಳು ತೆರಿಗೆಯನ್ನು ಮರುಹೊಂದಿಸಿದರೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ.

ದೇಶಿಯ ಮಾರುಕಟ್ಟೆಗಳ ಮೇಲಾಗುವ ಪರಿಣಾಮಗಳು

ಭಾರತದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ವಿಸ್ಕಿ ಮಾರಾಟವಾಗಲಿದೆ. ಬೆಲೆ ಇಳಿಕೆಯಿಂದ ಪ್ರೀಮಿಯಂ ಮದ್ಯದ ಮಾರಾಟ ಮತ್ತು ಬಳಕೆ ಇನ್ನುಷ್ಟು ಹೆಚ್ಚಾಗಲಿದೆ. ವಿದೇಶಿ ಬ್ರ್ಯಾಂಡ್‌ಗಳು ಅಗ್ಗದ ದರದಲ್ಲಿ ಸಿಗುವುದರಿಂದ, ಇತಂಹ ಮದ್ಯ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ.

ಬ್ರಿಟನ್‌ನಿಂದ ಸ್ಕಾಚ್ ಆಮದು ಮಾಡಿಕೊಂಡು ಭಾರತದಲ್ಲಿ ಬಾಟಲಿಂಗ್ ಮತ್ತು ಬ್ಲೆಂಡಿಂಗ್ ಮಾಡುವ ಕಂಪನಿಗಳ ಉತ್ಪಾದನಾ ವೆಚ್ಚ ಕಡಿಮೆ ಆಗಲಿದ್ದು, ಇದರಿಂದ ದೇಶೀಯ ಸಂಸ್ಥೆಗಳಿಗೂ ಹೆಚ್ಚಿನ ಲಾಭ ಸಿಗಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಇದರಿಂದ ಭಾರತೀಯ ಮದ್ಯ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಡಲಿದ್ದು, ಇಂತಹ ಬ್ರ್ಯಾಂಡ್‌ಗಳನ್ನು ಬಯಸುವ ಮದ್ಯ ಪ್ರಿಯರಿಗೆ ಬಿಗ್ ಗುಡ್‌ ನ್ಯೂಸ್‌ ಸಿಕ್ಕಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+