ಟ್ವಿಟ್ಟರ್ ನಲ್ಲಿ ರಾಡಿ ಎಬ್ಬಿಸಿದ JNUನಲ್ಲಿನ 'ಕಾಂಡೋಮ್' ಹೇಳಿಕೆ

Posted By:
Subscribe to Oneindia Kannada

ಅಧಿಕಾರಕ್ಕೆ ಬಂದಾಗಿನಿಂದಲೂ ನರೇಂದ್ರ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು/ಬಿಜೆಪಿ ವಿರೋಧಿಗಳ ಸರ್ವಪ್ರಯತ್ನ ಒಂದೆಡೆಯಾದರೆ, ಸ್ವಪಕ್ಷೀಯ ಮುಖಂಡರಿಂದಲೇ ಮೋದಿ ಸರಕಾರ ಮುಜುಗರಕ್ಕೀಡಾಗುತ್ತಿರುವುದು ಇನ್ನೊಂದೆಡೆ.

ಮೊದಲೇ ಹೊತ್ತಿ ಉರಿಯುತ್ತಿರುವ JNU (ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ) ಘಟನೆಗೆ, ಬಿಜೆಪಿ ಮುಖಂಡ ಮಂಗಳವಾರ (ಫೆ.23) ವಿವಾದಕಾರಿ ಹೇಳಿಕೆ ನೀಡುವ ಮೂಲಕ ಮತ್ತಷ್ಟು ತುಪ್ಪ ಸುರಿದಿದ್ದಾರೆ. (ಇಂಡಿಯಾ ಟುಡೇ ಸರ್ವೇ: ಮೋದಿ ಅತ್ಯುತ್ತಮ ಪ್ರಧಾನಿ)

ಬಿಜೆಪಿ ಮುಖಂಡನ ಕೀಳುಮಟ್ಟದ ಹೇಳಿಕೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಎಂದಿನಂತೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು/ಅನುಯಾಯಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿರುವುದರಿಂದ #BJPCountsCondoms ಮತ್ತು #SexAndDrugsAtJNU ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. (JNU ವೃತ್ತಾಂತ: ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ)

JNU ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲೇ ಮದ್ಯ ಸೇವಿಸುತ್ತಾರೆ, ನಗ್ನವಾಗಿ ನರ್ತಿಸುತ್ತಾರೆ, ಕಾಂಡೋಮ್ ಬಳಸುತ್ತಾರೆ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ್‌ ಅಹುಜಾ ಹೇಳಿಕೆ ನೀಡಿದ್ದರು.

ವಿವಿ ಆವರಣದಲ್ಲಿ ಎಷ್ಟು ಕಾಂಡೋಮ್, ಮದ್ಯದ ಬಾಟಲ್ ಖಾಲಿಯಾಗುತ್ತೆ ಎಂದು ಬಿಜೆಪಿ ಶಾಸಕ ನೀಡಿದ ಬ್ಯಾಲನ್ಸ್ ಶೀಟ್ ಹೀಗಿತ್ತು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ರಾಜಸ್ಥಾನದ ರಾಮಗಢದ ಬಿಜೆಪಿ ಶಾಸಕ

ರಾಜಸ್ಥಾನದ ರಾಮಗಢದ ಬಿಜೆಪಿ ಶಾಸಕ

JNU ವಿದ್ಯಾರ್ಥಿಗಳು ವಿವಿ ಕ್ಯಾಂಪಸ್‌ ಒಳಗೆ ನಗ್ನವಾಗಿ ನರ್ತಿಸುತ್ತಾರೆ, ದಿನಾ ಎರಡು ಸಾವಿರ ಮದ್ಯದ ಬಾಟಲ್, ಐವತ್ತು ಸಾವಿರ ಎಲುಬಿನ ತುಂಡು, ಐನರಕ್ಕೂ ಹೆಚ್ಚು ಅಬಾರ್ಷನ್ ಇಂಜೆಕ್ಷನ್, ಮೂರು ಸಾವಿರ ಕಾಂಡೋಮ್, ಹತ್ತು ಸಾವಿರ ಸಿಗರೇಟ್ ತುಂಡು ವಿವಿ ಆವರಣದಲ್ಲಿ ದಿನಂಪ್ರತಿ ಸಿಗುತ್ತದೆ ಎಂದು ಶಾಸಕ ಅಹುಜಾ ಹೇಳಿಕೆ ನೀಡಿದ್ದರು.

ನಾನು ಸತ್ಯವನ್ನಲ್ಲದೇ ಬೇರೇನೂ ಹೇಳುತ್ತಿಲ್ಲ

ನಾನು ಸತ್ಯವನ್ನಲ್ಲದೇ ಬೇರೇನೂ ಹೇಳುತ್ತಿಲ್ಲ

ಅಷ್ಟು ಕರೆಕ್ಟಾಗಿ ಹೇಗೆ ಹೇಳುತ್ತೀರಾ ಎನ್ನುವ ಮಾಧ್ಯಮವರ ಪ್ರಶ್ನೆಗೆ ಉತ್ತರಿಸುತ್ತಾ ಅಹುಜಾ, ವಿವಿ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ವಿದ್ಯಾರ್ಥಿಗಳು ನಗ್ನವಾಗಿ ನರ್ತಿಸುತ್ತಾರೆ. ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಸಿಕ್ಕ ಮಾಹಿತಿ ಆಧರಿಸಿ ಈ ಹೇಳಿಕೆ ನೀಡುತ್ತಿದ್ದೇನೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ ಅಹುಜಾ, ರಾಹುಲ್ ಗಾಂಧಿ ಒಬ್ಬ ದೇಶ ವಿರೋಧಿ ಮುಖಂಡ. ಈ ರೀತಿಯ ವ್ಯಕ್ತಿಗಳನ್ನು ಗುಂಡಿಕ್ಕಿ ಸಾಯಿಸಿದರೆ ತಪ್ಪೇನೂ ಇಲ್ಲ ಎಂದು ಇನ್ನೊಂದು ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಮೋದಿ ಮತ್ತು ಭಕ್ತರು

ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಹೇಳಿದ್ದರು, ಮೋದಿ ದೊಡ್ಡ ಫೇಕ್ ಬಲೂನ್ ಎಂದು. ಅಂದಿನಿಂದ ಮೋದಿ ಭಕ್ತರು ಅದನ್ನು ಸಂಗ್ರಹಿಸುತ್ತಿದ್ದಾರೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದು ಹೀಗೆ..

ಅನುಪಮ್ ಖೇರ್

ಮೋದಿಯನ್ನು ಇಂಪ್ರೆಸ್ ಮಾಡಲು ಭಾರೀ ಪೈಪೋಟಿ ನಡೆಯುತ್ತಿದೆ. ಡಸ್ಟ್ ಬಿನ್ ನಲ್ಲಿದ್ದ ಆರು ಸಾವಿರಕ್ಕೂ ಹೆಚ್ಚು ಕಾಂಡಮ್ ಗಳು ಅನುಪಮ್ ಖೇರ್ ಕೈಯಲ್ಲಿದೆ.

ಯಾಕೆ ಸರಕಾರ ಈ ವಿವಿಗೆ ದುಡ್ಡು ಸುರಿಯುತ್ತಿದೆ

ಅನೈತಿಕ ಚಟುವಟಿಕೆಯ ತಾಣವಾಗಿರುವ ಜವಾಹರಲಾಲ್ ನೆಹರೂ ವಿವಿಗೆ ಯಾಕಾಗಿ ಅನಾವಶ್ಯಕವಾಗಿ ದುಡ್ಡು ಸುರಿಯಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2,000 liquor bottles, 3,000 condoms found daily at JNU, says BJP MLA from Rajasthan. Twitter reaction.
Please Wait while comments are loading...