ಇನ್ನು ಮುಂದೆ ನಕಲಿ ಮತದಾನಕ್ಕೆ ಅವಕಾಶವೇ ಇಲ್ಲ

ನವದೆಹಲಿ, ಮಾ. 23: ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಕಲಿ ಮತದಾನಕ್ಕೆ ಅವಕಾಶ ಸಾಧ್ಯವೇ ಇಲ್ಲ ಎಂದು ಚುನಾವಣಾ ಆಯುಕ್ತ ಮುಖ್ಯಸ್ಥ ಎಚ್.ಎಸ್. ಬ್ರಹ್ಮ ತಿಳಿಸಿದ್ದಾರೆ.

ಮತದಾರ ಚೀಟಿ ಜತೆಗೆ ಆಧಾರ್ ಕಾರ್ಡ್ ಸೇರ್ಪಡೆ ಕಾರ್ಯ ನಡೆಯುತ್ತಿದೆ. ಜನರೇ ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕ್ರಿಯೆ ದೇಶವನ್ನು ಪ್ರಪಂಚದಲ್ಲಿಯೇ ಮಾಹಿತಿಯಾಧಾರಿತ ಬಯೋಮೆಟ್ರಿಕ್ ಹೊಂದಿರುವ ಮೊದಲ ರಾಷ್ಟ್ರ ಎಂಬ ಹಿರಿಮೆ ತೆಗೆದುಕೊಂಡು ಹೋಗಲಿದೆ ಎಂದು ತಿಳಿಸಿದ್ದಾರೆ.[ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಪುನರುಚ್ಚಾರ]

aadhar

ಮುಂಬರುವ ಆಗಸ್ಟ್ ತಿಂಗಳೊಳಗೇ ಭಾರತದ 25-30 ಕೋಟಿ ಜನರಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ನಂತರ ಈ ವರ್ಷದ ಅಂತ್ಯದಲ್ಲಿ ಆಧಾರ್ ಕಾರ್ಡ್ ಜೊತೆಗೆ ಮತದಾರರ ಫೋಟೋ ಹಾಗೂ ಗುರುತಿನ ಚೀಟಿಯನ್ನು ಸೇರ್ಪಡೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಆಧಾರ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು ಎಂದು ಜನರ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಪ್ರತಿದಿನ ಲಕ್ಷಾಂತರ ಮಂದಿ ಸ್ವತಃ ತಾವೇ ಬಂದು ಆಧಾರ್ ಕಾರ್ಡ್ ಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದು ಒಂದು ಬಗೆಯ ಉತ್ತಮ ಬೆಳವಣಿಗೆಯೇ ಆಗಿದೆ ಎಂದು ಹೇಳಿದ್ದಾರೆ.[ಆಧಾರ್ ಕಾರ್ಡ್ ಕಳ್ಕೊಂಡ್ರೆ, ಆನ್ ಲೈನ್ ನಲ್ಲೇ ಪಡ್ಕೊಳ್ಳಿ]

10 ವರ್ಷಗಳಿಂದ ಚುನಾವಣೆಯಲ್ಲಿ ಭಾಗವಹಿಸದ ಪಕ್ಷಗಳ ನೋಂದಣಿಗಳನ್ನು ರದ್ದು ಮಾಡುವುದರ ಕುರಿತು ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+