ಪರಿಷ್ಕೃತ PM ವಯ ವಂದನ ಯೋಜನೆ ಹೊರ ತಂದ LIC

ನವದೆಹಲಿ, ಮೇ 29: ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಿ, ಪರಿಷ್ಕೃತಗೊಳಿಸಿ ಜಾರಿಗೊಳಿಸಲಾಗಿದೆ.

Recommended Video

      ಕೋಲ್ಕತಾದಲ್ಲಿ ಎಲ್ ಐಸಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ | Oneindia kannada

      ಈ ಯೋಜನೆಯ ಕೊನೆ ದಿನಾಂಕವನ್ನು 2020 ರ ಮಾರ್ಚ್ 31 ರ ಬದಲಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಹೀಗಾಗಿ 2023 ಮಾರ್ಚ್ 31 ರವರೆಗೆ ವಿಸ್ತರಣೆಗೊಂಡಿದೆ. ಈ ಕುರಿತ ಬದಲಾವಣೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ಬಳಿಕ ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ಅಧಿಕೃತ ಪ್ರಕಟಣೆ ಹೊರಡಿಸಿದೆ.

      ಭಾರತೀಯ ಜೀವವಿಮಾ ನಿಗಮದ ಮೂಲಕ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿಯೂ ಖರೀದಿಸಬಹುದು, ಆದರೆ, ಪಾಲಿಸಿಗಳ ಒಟ್ಟು ಮೌಲ್ಯ 15 ಲಕ್ಷ ರೂ. ಮೀರಬಾರದು, ಮಾಸಿಕ ಗರಿಷ್ಠ 9,250 ರೂ. ಪಿಂಚಣಿ ಪಡೆಯಬಹುದು ಎಂಬ ಪರಿಷ್ಕೃತ ನಿಯಮಗಳನ್ನು ಎಲ್ ಐಸಿ ನೀಡಿದೆ. ಪಿಎಂವಿವಿವೈ ವಿಸ್ತರಣೆಯು ವೃದ್ಧಾಪ್ಯದ ಆದಾಯ ಸುರಕ್ಷತೆ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ ಅನುವು ಮಾಡಿಕೊಡುತ್ತದೆ.

       ಪಿಂಚಣಿ ದರವನ್ನು ಬದಲಾಯಿಸಲಾಗುತ್ತದೆ

      ಪಿಂಚಣಿ ದರವನ್ನು ಬದಲಾಯಿಸಲಾಗುತ್ತದೆ

      ಪಿಎಂವಿವಿವೈ ಪಿಂಚಣಿ ದರ ಶೇ. 8ರಷ್ಟಿತ್ತು.ಆದರೆ, ಈಗ ಪ್ರಸಕ್ತ ಸಾಲಿನಲ್ಲಿ ಪಿಂಚಣಿ ದರವನ್ನು ಶೇ 7.4ಕ್ಕೆ ಇಳಿಸಲಾಗಿದೆ. 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಪ್ರತಿ ವರ್ಷ ಪಿಂಚಣಿ ದರವನ್ನು ಬದಲಾಯಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಎಲ್ ಐಸಿ ಮೂಲಕ ಆನ್ ಲೈನ್, ಆಫ್ ಲೈನ್ ನಲ್ಲಿ PM ವಯ ವಂದನ ಯೋಜನೆಯಲ್ಲಿ ಹೂಡಿಕೆ ಮಾಡಿ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.

       ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ

      ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ

      * ಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1.50 ಲಕ್ಷ; ಗರಿಷ್ಠ ಹೂಡಿಕೆ: ರೂ. 7.50 ಲಕ್ಷ ರು
      * ತ್ರೈಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,49,068; ಗರಿಷ್ಠ ಹೂಡಿಕೆ: ರೂ. 7,45,342
      * ಅರ್ಧವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,47,601; ಗರಿಷ್ಠ ಹೂಡಿಕೆ: ರೂ. 7,38,007
      *ವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,44,578; ಗರಿಷ್ಠ ಹೂಡಿಕೆ: ರೂ. 7,22,892

       ಪಿಂಚಣಿ ಮೊತ್ತ

      ಪಿಂಚಣಿ ಮೊತ್ತ

      * ಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 1,000/; ಗರಿಷ್ಠ ಪಿಂಚಣಿ: ರೂ. 5,000/
      * ತ್ರೈಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 3,000/; ಗರಿಷ್ಠ ಪಿಂಚಣಿ: ರೂ. 15,000/
      * ಅರ್ಧವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 6,000/ ಗರಿಷ್ಠ ಪಿಂಚಣಿ: ರೂ. 30,000/
      * ವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 12,000/ ಗರಿಷ್ಠ ಪಿಂಚಣಿ: ರೂ. 60,000/

       ಪಿಂಚಣಿದಾರರು ಮರಣ ಹೊಂದಿದಲ್ಲಿ?

      ಪಿಂಚಣಿದಾರರು ಮರಣ ಹೊಂದಿದಲ್ಲಿ?

      ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಾರ್ಷಿಕ ಮರುಹೊಂದಿಸುವ ದರವನ್ನು ಅನುಮೋದಿಸಲು ಹಣಕಾಸು ಸಚಿವರಿಗೆ ಅಧಿಕಾರವನ್ನು ನೀಡಲಾಗಿದೆ. 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 7.40% ನಷ್ಟು ಆದಾಯದ ದರವನ್ನು ಆರಂಭದಲ್ಲಿ ಅನುಮತಿಸಲು ಮತ್ತು ನಂತರ ಪ್ರತಿ ವರ್ಷ ಮರುಹೊಂದಿಸಬಹುದಾಗಿದೆ. ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಯಾವುದೇ ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿಗೆ ಮೊತ್ತ ಸಲ್ಲಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+