ಲೇ ಆಫ್ ಆಗಿದ್ದಕ್ಕೆ ಶ್ರೀಮಂತನಾದೆ! ಮೆಟಾದಿಂದ ವಜಾಗೊಂಡ ಟೆಕ್ಕಿಯ ಸಿರಿವಂತಿಕೆಯ ಲೆಕ್ಕಾಚಾರ ಇದು!
Lay Off Meta: ಇತ್ತೀಚಿನ ದಿನಗಳಲ್ಲಿ ಲೇ ಆಫ್ ಎನ್ನುವುದು ತೀರಾ ಕಾಮನ್ ಆಗಿ ಬಿಟಿದೆ. ಯಾವಾಗ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೋ? ಯಾವಾಗ ಕೆಲಸದಿಂದ ಕಿತ್ತೆಸೆಯುತ್ತಾರೋ ಒಂದೂ ಗೊತ್ತಾಗುವುದಿಲ್ಲ. ಯಾರೇ ಆಗಲಿ ಕೆಲಸ ಕಳೆದುಕೊಳ್ಳುವುದು ಎಂದರೆ ಸಮಸ್ಯೆಯೇ. ಆರ್ಥಿಕ ಅಸುರಕ್ಷತೆ ಕಾಡಿ ಬಿಡುತ್ತದೆ. ನಾಳೆ ಏನು ಎನ್ನುವ ಪ್ರಶ್ನೆ ಕಣ್ಣ ಮುಂದೆ ಬಂದು ಬಿಡುತ್ತದೆ. ಸಾಮಾನ್ಯವಾಗಿ ಯಾರೂ ಕೂಡಾ ಕೆಲಸ ಕಳೆದುಕೊಳ್ಳುವುದನ್ನು ಆರಾಮದಿಂದ ಸ್ವೀಕರಿಸಲು ಸಾಧ್ಯವಿಲ್ಲ.
ಕೆಲಸ ಕಳೆದುಕೊಂಡಿದ್ದರಿಂದಲೇ ಹೆಚ್ಚಾಯಿತಂತೆ ಉಳಿತಾಯ
ಆದರೆ ಇಲ್ಲೊಬ್ಬ ಟೆಕ್ಕಿ ತಾನು ಕೆಲಸ ಕಳೆದುಕೊಂಡಿದ್ದೇ ತನಗೆ ವರವಾಗಿದೆ ಎಂದಿದ್ದಾರೆ. ಈ ವ್ಯಕ್ತಿಯನ್ನು ಮೆಟಾ ಕಂಪನಿ ಕೆಲಸದಿಂದ ತೆಗೆದು ಹಾಕಿತ್ತು. ಮೆಟಾದಂಥಹ ಕಂಪನಿಯ ಕೆಲಸ ಕಳೆದುಕೊಂಡಿರುವ ಬಗ್ಗೆ ಇವರಿಗೆ ಸ್ವಲ್ಪ ವೂ ಬೇಸರವಿಲ್ಲ. ಬದಲಿಗೆ ಕಂಪನಿ ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ನನ್ನ ಸೇವಿಂಗ್ಸ್ ಜಾಸ್ತಿಯಾಯಿತು ಎಂದಿದ್ದಾರೆ. ಕೆಲಸದಿಂದ ವಜಾ ಮಾಡಿರುವುದೇ ತಾನು ಹೆಚ್ಚು ಹಣ ಉಳಿತಾಯ ಮಾಡುವುದಕ್ಕೆ ಸಹಾಯವಾಯಿತು ಎಂದು ಹೇಳಿಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಮೇಲೆ ಉಳಿತಾಯ ಹೇಗೆ ಸಾಧ್ಯ ಎಂದು ನಿಮಗೂ ಆಶ್ಚರ್ಯವಾಗಬಹುದು. ಆದರೆ ಇವರ ಲೆಕ್ಕಾಚಾರ ಬಹಳ ಸಿಂಪಲ್.

ಮೂರು ತಿಂಗಳವರೆಗೆ ಡಬಲ್ ಸ್ಯಾಲರಿ ಜಾಕ್‌ಪಾಟ್
ನೋಟಿಸ್ ಅವಧಿಯ ಆರಂಭದಲ್ಲಿಯೇ ಈ ವ್ಯಕ್ತಿಗೆ ಹೊಸ ಕೆಲಸ ಸಿಕ್ಕಿದೆ. ಹಾಗಾಗಿ ಮೂರು ತಿಂಗಳವರೆಗೆ ಇವರಿಗೆ ಎರಡು ಕಂಪನಿಗಳಿಂದ ಸಂಬಳ ಬಂದಿದೆ. ಮೆಟಾ ಕೆಲಸದಿಂದ ತೆಗೆದು ಹಾಕಿದರೂ ಕಾನೂನು ಪ್ರಕಾರ ಮೂರು ತಿಂಗಳ ಸಂಬಳ ನೀಡಿದೆ. ಜೊತೆಗೆ ಹೊಸ ಕಂಪನಿಯ ವೇತನ. ಹೀಗೆ ಮೂರು ತಿಂಗಳು ಈ ವ್ಯಕ್ತಿಗೆ ಡಬಲ್ ಪೇಮೆಂಟ್. ಜೊತೆಗೆ ಸ್ಟಾಕ್ ವೆಸ್ಟ್ ಕೂಡ ಸಿಕ್ಕಿದೆ. ಒಂದು ವೇಳೆ ಇವರು ಮೆಟಾದಲ್ಲೇ ಮುಂದುವರೆದಿದ್ದರೆ ಅಷ್ಟು ದೊಡ್ಡ ಮೊತ್ತದ ಸೇವಿಂಗ್ಸ್ ಸಾಧ್ಯವಾಗ್ತಾ ಇರಲಿಲ್ಲ ಎನ್ನುವುದು ಅವರ ಅಭಿಪ್ರಾಯ.
ಕೆಲಸ ಕಳೆದುಕೊಂಡಿದ್ದರಿಂದಲೇ ಶ್ರೀಮಂತನಾದೆ
ಮೆಟಾ ಕೆಲಸದಿಂದ ವಜಾ ಮಾಡಿದ್ದು ನನ್ನನ್ನು ಶ್ರೀಮಂತನನ್ನಾಗಿ ಮಾಡಿತು ಎಂದು ಅವರು ಬ್ಲೈಂಡ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಆ ವ್ಯಕ್ತಿಯು ತಮ್ಮ ಆದಾಯ ಹೆಚ್ಚಿಸುವಲ್ಲಿ, ಹೆಚ್ಚಿನ ಉಳಿತಾಯ ಮಾಡುವಲ್ಲಿ ಯಾವ ರೀತಿ ಯಶಸ್ವಿಯಾದರು ಎನ್ನುವುದನ್ನು ಕೂಡಾ ವಿವರಿಸಿದ್ದಾರೆ. ವಜಾ ಅವಧಿ ಮುಗಿಯುವ ಎರಡು ತಿಂಗಳ ಮೊದಲು ಬೇರೆ ಕೆಲಸಕ್ಕೆ ಸೇರಿಕೊಂಡೆ. ಹೊಸ ಕೆಲಸದ ಸಂಬಳ ಬಂದಾಗಲೇ ಸುಮಾರು 3 ತಿಂಗಳ ಮೆಟಾ ಪೇಚೆಕ್‌ಗಳು ಕೂಡಾ ಸಿಕ್ಕಿತು. ಜೊತೆಗೆ ಆಗಸ್ಟ್ ವೆಸ್ಟ್ ಕೂಡಾ ಸಿಕ್ಕಿತು. ಕೊನೆಗೆ ಸುಮಾರು 30 ಸಾವಿರ ಹೆಚ್ಚುವರಿ ಹೂಡಿಕೆ ಮಾಡುವುದು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ನನ್ನನ್ನು ಕೆಲಸದಿಂದ ವಜಾ ಮಾಡಿದ್ದರಿಂದಲೇ ಈಗ ನನ್ನ ಕೈಯ್ಯಲ್ಲಿ ಹೆಚ್ಚುವರಿ ಹಣ ಉಳಿದುಕೊಂಡಿದೆ. ಅದೇ ಕೆಲಸದಲ್ಲಿ ಮುಂದುವರೆದಿದ್ದರೆ ಇದು ಸಾಧ್ಯವಾಗುತ್ತಾ ಇರಲಿಲ್ಲ. ಆಗುವುದೇಲ್ಲಾ ಒಳ್ಳೆಯದ್ದಕ್ಕೆ ಎಂದೇ ಮುಂದುವರಿಯಬೇಕು ಎಂದಿದ್ದಾರೆ.
ಜನರ ಪ್ರತಿಕ್ರಿಯೆ ಹೀಗಿತ್ತು
ಈ ವ್ಯಕ್ತಿಯ ಪೋಸ್ಟ್‌ಗೆ ಅನೇಕ ಮಂದಿ ರಿಯಾಕ್ಟ್ ಮಾಡಿದ್ದಾರೆ. ನೀವು ಉಳಿಸಿರುವ ಹಣ ಹೆಚ್ಚು ಕಾಲ ಉಳಿಯುವದಿಲ್ಲ. ನೀವು ಇನ್ನೂ ಹೆಚ್ಚು ಶ್ರಮಿಸಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ಇದು ಅಸಾಮಾನ್ಯ, ಕಠಿಣ ಮತ್ತು ಪ್ರತಿಕೂಲ ಮಾರುಕಟ್ಟೆ. ಇಲ್ಲಿ 20% ಜನರಿಗೆ ಮಾತ್ರ ಉತ್ತಮ ಕೆಲಸ ಸಿಗುತ್ತದೆ. ಉಳಿದವರು ಕಟ್‌ಥ್ರೋಟ್ ಸ್ಥಾನಗಳಲ್ಲಿದ್ದಾರೆ ಎಂದು ಹೇಳಿದ್ದಾರೆ.
ಮೆಟಾದಷ್ಟು ಉತ್ತಮವಾಗಿ ಪಾವತಿಸುವ ಮತ್ತೊಂದು ಸಾರ್ವಜನಿಕ ತಂತ್ರಜ್ಞಾನ ಕಂಪನಿಯನ್ನು ಹುಡುಕುವುದು ಕಷ್ಟ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
