ಅನಾರೋಗ್ಯದ ಹಿನ್ನೆಲೆ: ಲಾಲೂಗೆ ಆರು ವಾರಗಳ ತಾತ್ಕಾಲಿಕ ಜಾಮೀನು
ರಾಂಚಿ, ಮೇ 11: ವೈದ್ಯಕೀಯ ಕಾರಣಗಳಿಗಾಗಿ ಬಹುಕೋಟಿ ಮೇವು ಹಗರಣದ ಆರೋಪಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ತಾತ್ಕಾಲಿಕ ಜಾಮೀನು ನೀಡಿದೆ.
ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಮದುವೆ(ಮೇ 12 ರಂದು)ಯ ಸಲುವಾಗಿ ಈಗಾಗಲೇ 3 ದಿನಗಳ ಪೆರೋಲ್ ನಲ್ಲಿ ಜೈಲಿನಿಂದ ಹೊರಗಿದ್ದ ಯಾದವ್ ಅವರಿಗೆ ಆರು ವಾರಗಳ ತಾತ್ಕಾಲಿಕ ಜಾಮೀನು ನೀಡಲಾಗಿದೆ.
ಬಹು ಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಆರೋಪಗಳಲ್ಲಿ ದೋಷಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರು ನಾಲ್ಕು ಪ್ರಕರಣಗಳಿಂದ ಒಟ್ಟು 20.5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.

ರಾಂಚಿಯ ಜೈಲಿನಲ್ಲಿದ್ದ ಲಾಲೂ ಪ್ರಸಾದ್ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವೈದ್ಯಕೀಯ ಕಾರಣದಿಂದಲೇ ಅವರಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗಿದೆ.












Click it and Unblock the Notifications