KSRTC Bus Video: ರೈಲು ಆಯ್ತು ಇದೀಗ 'ಕರ್ನಾಟಕ ಅಂಬಾರಿ ಉತ್ಸವ' ಮೇಲೆ ಕಲ್ಲೆಸೆತ...

ಬೆಂಗಳೂರು, ನವೆಂಬರ್ 09: ಸಾರಿಗೆಯಲ್ಲಿನ ಅಭಿವೃದ್ಧಿ, ಪ್ರಯಾಣಿಕರಿಗೆ ಐಶಾರಾಮಿ ಮತ್ತು ಆರಾಮದಾಯಕ ಅನುಭವ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ (KSRTC) ಹೊಸ ಹೊಸ ಬಸ್‌ಗಳನ್ನು ಪರಿಚಯಿಸುತ್ತಿದೆ. ಮೊನ್ನೆಯಷ್ಟೆ 20 ಮಲ್ಟಿ ಎಕ್ಸೆಲ್ ಐರಾವತ ಎಸಿ ಬಸ್ ಪರಿಚಯಿಸಿದೆ. ಇದರ ಬೆನ್ನಲ್ಲೆ ಎರಡು ದಿನಗಳ ಹಿಂದೆ ನೆರೆ ರಾಜ್ಯದಲ್ಲಿ KSRTC Ambaari Utsav ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದ ಘಟನೆ ನಡೆದಿದೆ.

ಈ ಹಿಂದ ಭಾರತೀಯ ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷೆಯ ರೈಲು ಆದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳ ಮೇಲೆ ಕಲ್ಲು ಎಸೆದಿದ್ದನ್ನು ಗಮನಿಸಿದ್ದೇವೆ. ಅದರ ಬೆನ್ನಲ್ಲೆ ಕೆಎಸ್‌ಆರ್‌ಟಿಸಿಯ ಅಂಬಾರಿ ಉತ್ಸವ ಬಸ್ ಮೇಲೆ ನೆರೆ ತೆಲಂಗಾಣ ರಾಜ್ಯ ರಾಜಧಾನಿ ಹೈದರಾಬಾದ್ ವ್ಯಾಪ್ತಿಯಲ್ಲಿ ಕಲ್ಲು ತೂರಾಟದ ಘಟನೆ ನಡೆದಿದೆ.

KSRTC Bus Stome Pelting on Ambaari Utsav Bus at Hyderabad Video Viral

KSRTC ಬಸ್ ಕಲ್ಲೆಸೆತದ ವಿಡಿಯೋದಲ್ಲಿ ಏನಿದೆ?

ಘಟನೆಯಲ್ಲಿ ಬಸ್‌ನ ಗಾಜು ಪುಡಿ ಪುಡಿಯಾಗಿದೆ. ಕಲ್ಲು ಎಸೆತದ ವೇಗಕ್ಕೆ ಕಿಟಕಿ ಗಾಜು ಒಡೆದು ಕಲ್ಲು ಒಳಗೆ ಬಂದು ಬಿದ್ದಿದೆ. ಈ ಕುರಿತ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕರಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು ಹೈದರಾಬಾದ್‌ನ ಶಂಶಾಬಾದ್ನಲ್ಲಿ ನವೆಂಬರ್ 7ರಂದು ರಾತ್ರಿ ನಡೆದಿದೆ ಎಂದು ವರದಿ ಆಗಿದೆ.

ಬೆಂಗಳೂರು-ಹೈದರಾಬಾದ್ ಬಸ್ ಇದಾಗಿತ್ತು. ಎಂದಿನಂತೆ ಬಸ್ ಹೈದರಾಬದ್ ತೆರಳಿ ಮರಳಿ ಬರುವಾಗ ರಾತ್ರಿ 10.45ರ ಸುಮಾರಿಗೆ ಶಂಶಾಬಾದ್‌ನಲ್ಲಿ ಕಲ್ಲುತೂರಾಟ ನಡೆದಿದೆ. ಬಸ್‌ನೊಳಗೆ ಪ್ರಯಾಣಕರು ಇದ್ದಾಗಲೇ ಇಂತಹ ಘಟನೆ ನಡೆದಿರುವುದು ಆಕ್ಷೇಪಾರ್ಹ ಮತ್ತು ಖಂಡನೀಯ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೂ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸರ ದೌಡು: ಕ್ರಮಕ್ಕೆ ಪ್ರಯಾಣಿಕರ ಆಗ್ರಹ

ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಬಸ್ ಇರುವ ಶಂಶಾಬಾದ್‌ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕಲ್ಲೆಸೆತದಿಂದ ಆತಂಕದಲ್ಲಿದ್ದ ಬಸ್ ಪ್ರಯಾಣಿಕರಿಗೆ ಧೈರ್ಯ ಹೇಳಿದ ಪೊಲೀಸರು ಮಾಹಿತಿ ಪಡೆದಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಹಾಗೂ ಪೊಲೀಸರು ಕೂಡಿಕೊಂಡು ಘಟನೆಗೆ ಕಾರಣವಾದ ಪುಂಡರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ನಂತರ ಬಸ್ ಅಲ್ಲಿಂದ ಬೆಂಗಳೂರಿಗೆ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+