ಬಾಯಿ ಮೂಲಕ ನೀಡಲಾಗುವ ಕೊರೊನಾ ಲಸಿಕೆ ಅಭಿವೃದ್ಧಿಗೆ ಪ್ರಸ್ತಾವ

ಕೋಲ್ಕತ್ತಾ, ಜುಲೈ 05: ಕೊರೊನಾ ಸೋಂಕಿಗೆ, ಬಾಯಿ ಮೂಲಕ ನೀಡುವ ಲಸಿಕೆ ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೋಲ್ಕತ್ತಾ ಐಸಿಎಂಆರ್- ಎನ್‌ಐಸಿಇಡಿ ಸಂಸ್ಥೆಯು ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ.

"ಜರ್ಮನ್ ಸಂಸ್ಥೆಯ ಸಹಯೋಗದಲ್ಲಿ ಬಾಯಿ ಮೂಲಕ ನೀಡಲಾಗುವ ಲಸಿಕೆ ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸಲಾಗುವುದು. ಈ ಪ್ರಸ್ತಾಪ ಸದ್ಯಕ್ಕೆ ಇಲಾಖೆಯ ಪರಿಶೀಲನೆಯಲ್ಲಿದೆ. ಅನುಮೋದನೆ ಮತ್ತು ಹಣಕಾಸು ಬಿಡುಗಡೆಯಾಗುತ್ತಿದ್ದಂತೆ ಅಭಿವೃದ್ಧಿ ಪ್ರಕ್ರಿಯೆ ಶುರುವಾಗಲಿದೆ" ಎಂದು ಐಸಿಎಂಆರ್-ಎನ್‌ಐಸಿಇಡಿ ನಿರ್ದೇಶಕರಾದ ಶಾಂತನು ದತ್ತಾ ತಿಳಿಸಿದ್ದಾರೆ.

"ಬಾಯಿ ಮೂಲಕ ನೀಡಬಹುದಾದ ಔಷಧ ಅಭಿವೃದ್ಧಿಪಡಿಸಲು ಸುಮಾರು 5-6 ವರ್ಷ ಬೇಕಾಗಬಹುದು. ಒಮ್ಮೆ ಲಸಿಕೆ ಅಭಿವೃದ್ಧಿಯಾದರೆ ಎಲ್ಲಾ ಲಸಿಕೆಗಳಂತೆ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುವುದು" ಎಂದು ವಿವರಿಸಿದರು.

 Kolkata ICMR NICED Proposes Research On Oral Corona Vaccine

"ಎಲ್ಲಾ ಲಸಿಕೆಗಳ ಪ್ರಯೋಗಗಳಿಗೆ ಅನುಸರಿಸುವ ನಿಯಮಗಳನ್ನು ಈ ಲಸಿಕೆ ಅಭಿವೃದ್ಧಿಗೆ ಪಾಲಿಸಲಾಗುವುದು. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು 5-6 ವರ್ಷ ಬೇಕಾಗಬಹುದು. ಆನಂತರವೇ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗಲಿದೆ" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+