ಉಸಿರಾಟ ಸಮಸ್ಯೆಯವರಿಗೆ ಕೋಲ್ಕತ್ತಾದಲ್ಲಿ "ಪಾಕೆಟ್ ವೆಂಟಿಲೇಟರ್" ಆವಿಷ್ಕಾರ
ಕೋಲ್ಕತ್ತಾ, ಜೂನ್ 15: ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ದೇಶದಲ್ಲಿ ಅತೀವವಾಗಿತ್ತು. ಆಮ್ಲಜನಕ ಕೊರತೆಯ ತೀವ್ರತೆಯನ್ನು ಕಂಡ ಹಾಗೂ ಸ್ವತಃ ಅನುಭವಿಸಿದ ಕೋಲ್ಕತ್ತಾ ಮೂಲದ ವಿಜ್ಞಾನಿ ಡಾ. ರಮೇಂದ್ರ ಲಾಲ್ ಮುಖರ್ಜಿ ಇದೀಗ "ಪಾಕೆಟ್ ವೆಂಟಿಲೇಟರ್" ಅಭಿವೃದ್ಧಿಪಡಿಸಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಮೇಂದ್ರ ಲಾಲ್, ಬ್ಯಾಟರಿ ಬೆಂಬಲಿತ ವೆಂಟಿಲೇಟರ್ ಅಭಿವೃದ್ಧಿಗೊಳಿಸಿದ್ದು, ಉಸಿರಾಟ ಸಮಸ್ಯೆ ಇರುವವರಿಗೆ ಇದು ನೆರವಾಗಲಿದೆ.
"ಯಾವುದೇ ವಯಸ್ಸಿನವರೂ ಇದನ್ನು ಬಳಸಬಹುದಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಎಂಟು ಗಂಟೆಗಳವರೆಗೂ ಬಳಸಬಹುದು. ಈ ಸಾಧನಕ್ಕೆ ಪವರ್ ಯುನಿಟ್ ಹಾಗೂ ವೆಂಟಿಲೇಟರ್ ಯುನಿಟ್ ಎಂಬ ಎರಡು ಭಾಗಗಳಿವೆ. ಒಮ್ಮೆ ಬಟನ್ ಆನ್ ಮಾಡಿದರೆ, ವೆಂಟಿಲೇಟರ್, ಹೊರಗಿನ ಗಾಳಿಯನ್ನು ಒಳಗೆ ತೆಗೆದುಕೊಳ್ಳುತ್ತದೆ. ಅದರಲ್ಲಿನ ಯುವಿ ಚೇಂಬರ್‌ನಿಂದ ಗಾಳಿ ಶುದ್ಧಗೊಳಿಸಿ, ನಂತರ ಬಾಯಿಗೆ ಗಾಳಿ ನೀಡುತ್ತದೆ," ಎಂದು ವಿವರಿಸುತ್ತಾರೆ ಡಾ. ಮುಖರ್ಜಿ.

ಕೊರೊನಾ ಸೋಂಕು ತಗುಲಿದ್ದರೂ ಈ ಯುವಿ ಚೇಂಬರ್ ಗಾಳಿಯನ್ನು ಫಿಲ್ಟರ್ ಮಾಡಿ ಅದನ್ನು ಸೋಂಕು ಮುಕ್ತಗೊಳಿಸುತ್ತದೆ. ಇದರಲ್ಲಿನ ಕಂಟ್ರೋಲ್ ನಾಬ್, ಆಮ್ಲಜನಕದ ಅಗತ್ಯದ ಮೇಲೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಪುಟ್ಟ ವೆಂಟಿಲೇಟರ್ 250 ಗ್ರಾಂ ಇದ್ದು, ಮೊಬೈಲ್ ಚಾರ್ಜರ್ ಮೂಲಕವೂ ಚಾರ್ಜ್ ಮಾಡಬಹುದು.
"ತಮಗೂ ಈ ಮುನ್ನ ಕೊರೊನಾ ಸೋಂಕು ತಗುಲಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಸಂಗತಿಯೇ ನನಗೆ ಈ ಸಾಧನ ಹೊರತರಲು ಪ್ರೇರಣೆಯಾಯಿತು," ಎಂದು ಮುಖರ್ಜಿ ಹೇಳಿಕೊಂಡಿದ್ದಾರೆ.
ಕೊರೊನಾ ಸೋಂಕಿತರಿಗಷ್ಟೇ ಅಲ್ಲ, ಆಸ್ತಮಾ ಹಾಗೂ ಉಸಿರಾಟ ತೊಂದರೆಯಿರುವವರೆಲ್ಲರಿಗೂ ಇದು ಉಪಯೋಗಕ್ಕೆ ಬರುತ್ತದೆ. ಅಮೆರಿಕ ಮೂಲದ ಕಂಪನಿ ಈ ಸಾಧನದ ಅಭಿವೃದ್ಧಿಗೆ ಪ್ರಸ್ತಾಪವಿಟ್ಟಿದೆ. ಸದ್ಯ 30 ಪೇಟೆಂಟ್‌ಗಳಿದ್ದು, ಹಲವು ಜೀವಗಳನ್ನು ಈ ಸಾಧನ ರಕ್ಷಿಸಬಲ್ಲದಾಗಿದೆ ಎಂದು ಹೇಳಿಕೊಂಡಿದ್ದಾರೆ.
-
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
ಯುಪಿಎಸ್ಸಿ 2025 ಫಲಿತಾಂಶ ಪ್ರಕಟ: ಪಾಸಾದವರು 958 ಆಕಾಂಕ್ಷಿಗಳು, ಅರ್ಜಿ ಹಾಕಿದ್ದವರು 10 ಲಕ್ಷ ಮಂದಿ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ












Click it and Unblock the Notifications