Get Updates
Get notified of breaking news, exclusive insights, and must-see stories!

‘ಖಲಿಸ್ತಾನಿ’ ಗ್ಯಾಂಗ್‌ಗೆ ಭಾರತದ ರಾಯಭಾರ ಕಚೇರಿಯೇ ಟಾರ್ಗೆಟ್ ಯಾಕೆ? ಅಮೆರಿಕದಲ್ಲಿ ಮತ್ತೊಮ್ಮೆ ಖಲಿಸ್ತಾನಿಗಳ ಡೆಡ್ಲಿ ಅಟ್ಯಾಕ್!

ವಾಷಿಂಗ್ಟನ್: ಖಲಿಸ್ತಾನಿಗಳ ಉಪಟಳ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ವಿದೇಶಗಳಲ್ಲಿ ಖಲಿಸ್ತಾನಿಗಳು ಭಾರತದ ರಾಯಭಾರ ಕಚೇರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಅಮೆರಿಕದಲ್ಲೂ ಅದೇ ರೀತಿ ಘಟನೆ ನಡೆದಿದೆ. ಅಷ್ಟಕ್ಕೂ 'ಖಲಿಸ್ತಾನಿ'ಗಳಿಗೆ ಭಾರತದ ರಾಯಭಾರ ಕಚೇರಿಯೇ ಟಾರ್ಗೆಟ್ ಯಾಕೆ? ಇವರೆಲ್ಲಾ ಹೀಗೆ ಶಾಂತಿ ಕದಡುತ್ತಿರುವುದು ಯಾಕೆ? ಬನ್ನಿ ತಿಳಿಯೋಣ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತವಾಸ ಕಚೇರಿ ಮೇಲೆ ಇಂದು ದಿಢೀರ್ ದಾಳಿ ನಡೆಸಿರುವ ಖಲಿಸ್ತಾನಿ (Khalistani) ಬೆಂಬಲಿಗರು, ಬೆಂಕಿ ಹಚ್ಚಿದ್ದಾರೆ. ಘಟನೆ ಬಗ್ಗೆ ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕದ ಸ್ಥಳೀಯ ಕಾಲಮಾನ ಪ್ರಕಾರ, ಮುಂಜಾನೆ 1.30ರಿಂದ 2.30ರ ಮಧ್ಯೆ ಭಾರತದ ರಾಯಭಾರ ಕಚೇರಿ ಟಾರ್ಗೆಟ್ ಮಾಡಿ ಬೆಂಕಿ ಹಚ್ಚಿದ್ದಾರೆ. ಕಳೆದ 5 ತಿಂಗಳಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು 2ನೇ ಬಾರಿಗೆ. ಕಳೆದ ಮಾರ್ಚ್‌ನಲ್ಲಿ ಕೂಡ ಇದೇ ರೀತಿ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತವಾಸ ಕಚೇರಿ ಮೇಲೆ ದಾಳಿ ಮಾಡಿದ್ದರು. ಹಾಗಾದರೆ ಈ 'ಖಲಿಸ್ತಾನಿ' ಗ್ಯಾಂಗ್‌ಗೆ ಭಾರತದ ರಾಯಭಾರ ಕಚೇರಿಯೇ ಟಾರ್ಗೆಟ್ ಯಾಕೆ? ಮುಂದೆ ಓದಿ.

Khalistan Supporters Vandalise Indian Consulate in San Francisco

ಭಾರತದ ವಿರುದ್ಧ ಮುಂದುವರಿದ ಷಡ್ಯಂತ್ರ

ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬಲ ಹೊಂದಿರುವ ಖಲಿಸ್ತಾನಿ ಬೆಂಬಲಿಗ ಪಡೆ ಈಗ ಭಾರತದ ವಿರುದ್ಧ ಷಡ್ಯಂತ್ರ ಮಾಡಿದಂತೆ ಕಾಣ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ವಿರುದ್ಧ ಪದೇ ಪದೆ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಅಮೆರಿಕ ಸೇರಿದಂತೆ ಕೆನಡಾದ ಬಹುಭಾಗದಲ್ಲಿ ಖಲಿಸ್ತಾನಿ ಬೆಂಬಲಿಗರು ವಾಸವಿದ್ದು, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಆರೋಪವಿದೆ. ಅದರಲ್ಲೂ ಪ್ರಮುಖವಾಗಿ ಈ ರೀತಿ ಭಾರತದ ರಾಯಭಾರ ಕಚೇರಿಯನ್ನೇ ಟಾರ್ಗೆಟ್ ಮಾಡುವುದಕ್ಕೂ ಕಾರಣವಿದ್ದು, ಆ ಮಾಹಿತಿ ಇಲ್ಲಿದೆ.

ಭಾರತದ ರಾಯಭಾರ ಕಚೇರಿಯೇ ಟಾರ್ಗೆಟ್ ಯಾಕೆ?

1) 'ಖಲಿಸ್ತಾನಿ' ಪಟಾಲಂ ಭಾರತದ ವಿರುದ್ಧ ಆಕ್ರೋಶ ಹೊರಹಾಕಲು ರಾಯಭಾರ ಕಚೇರಿಗಳೇ ಸುಲಭದ ಮಾರ್ಗ.

2) ಭಾರತದ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡಿದರೆ ಜಗತ್ತಿನಾದ್ಯಂತ ಸುಲಭವಾಗಿ ಸದ್ದು ಮಾಡುವ ಷಡ್ಯಂತ್ರ.

3) ಭಾರತದ ಹೆಸ4ರು ಕೆಡಿಸಲು ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ಖಲಿಸ್ತಾನಿಗಳು.

4) ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡಿ ಭಾರತದ ವಿರೋಧಿಗಳಿಂದ ಬೆಂಬಲ ಪಡೆಯುವ ಕುತಂತ್ರವೂ ಇದರಲ್ಲಿ ಸೇರಿರಬಹುದು.

5) ಯಾವುದೇ ದೇಶದಲ್ಲಿ ರಾಯಭಾರ ಕಚೇರಿ ಸೂಕ್ಷ್ಮ ಪ್ರದೇಶವಾಗಿದ್ದು, ಈ ರೀತಿ ದಾಳಿ ಮಾಡಿ ಭಯ ಹುಟ್ಟಿಸುವ ಕುತಂತ್ರ ಇರಬಹುದು.

ಭಾರತದಿಂದ ಖಡಕ್ ಸಂದೇಶ!

ಈ ಹಿಂದೆ ಅಂದರೆ ಕಳೆದ ಮಾರ್ಚ್ ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ದಿಢೀರ್ ಭಾರತೀಯ ರಾಯಭಾರಿ ಕಚೇರಿ (Indian embassy in USA) ಮೇಲೆ ದಾಳಿ ಮಾಡಿದ್ದರು. ಅಲ್ಲದೆ ಕಚೇರಿಯನ್ನೂ ಧ್ವಂಸ ಮಾಡಿ ವಿಕೃತಿ ಮೆರೆದಿದ್ದರು 'ಖಲಿಸ್ತಾನಿ'ಗಳು. ಈ ಘಟನೆ ಬಳಿಕ ಭಾರತ ಕೂಡ ಖಡಕ್ ಎಚ್ಚರಿಕೆ ನೀಡಿತ್ತು. ಇಂತಹ ಘಟನೆಗಳು ಮತ್ತೆ ನಡೆಯಬಾರದು ಎಂದು ಭಾರತ ಕೂಡ ಕ್ರಮ ಕೈಗೊಳ್ಳಲು ಮುಂದಾಗಿತ್ತು.

ಮಾತು ತಪ್ಪಿದ ಅಮೆರಿಕ ಅಧಿಕಾರಿಗಳು?

ಇದರ ಜೊತೆಗೆ ಭಾರತದಲ್ಲಿನ ಅಮೆರಿಕ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿ ಆರೋಪಿಗಳನ್ನ ಕೂಡಲೇ ಬಂಧಿಸಲು ಹಿಂದೆ ಸೂಚಿಸಲಾಗಿತ್ತು. ಹೀಗಾಗಿ ಮಾರ್ಚ್ ತಿಂಗಳ ದಾಳಿ ನಂತರ ದೆಹಲಿಯಲ್ಲಿ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳ ಜೊತೆಗೆ ತುರ್ತು ಸಭೆ ಕೂಡ ನಡೆಸಲಾಗಿತ್ತು. ಆಗ ಅಮೆರಿಕದಲ್ಲಿರುವ ಭಾರತದ ಕಚೇರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದ್ದರು ಅಮೆರಿಕದ ಅಧಿಕಾರಿಗಳು. ಆದರೆ ಕಳೆದ 5 ತಿಂಗಳಲ್ಲಿ ಇದೀಗ 2ನೇ ಬಾರಿಗೆ ಹೀನ ಕೃತ್ಯ ನಡೆದೇ ಹೋಗಿದೆ. ಅದು ದಾಳಿ ನಡೆದ ಜಾಗದಲ್ಲೇ ಮತ್ತೊಮ್ಮೆ ಅಟ್ಯಾಕ್ ಆಗಿರುವುದು ಭಾರತದ ತಾಳ್ಮೆಯನ್ನೂ ಕೆಡಿಸುತ್ತಿದೆ.

ಒಟ್ನಲ್ಲಿ 'ಖಲಿಸ್ತಾನಿ' ಗ್ಯಾಂಗ್ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಭಾರತ ಕೂಡ ಇವರ ವಿರುದ್ಧ ಗಂಭೀರ ಕ್ರಮಕ್ಕೆ ಚಿಂತಿಸುತ್ತಿದೆ. ಅದರಲ್ಲೂ ಕೆಲ ದಿನಗಳ ಹಿಂದೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಟ್ಯಾಬ್ಲೋ ಮಾಡಿದ್ದರು ಈ ಖಲಿಸ್ತಾನಿಗಳು. ಕೆನಡಾದಲ್ಲಿ ಈ ರೀತಿ ಘಟನೆ ನಡೆದಿತ್ತು. ಈಗ ದಿಢೀರ್ ಮತ್ತೆ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿದೆ. ರಾಯಭಾರ ಕಚೇರಿಗೆ ಬೆಂಕಿ ಹಚ್ಚಿದ್ದಲ್ಲದೆ, ಖಲಿಸ್ತಾನಿಗಳು ಘಟನೆಗೆ ಸಂಬಂಧಿಸಿದಂತೆ ವೀಡಿಯೋ ರಿಲೀಸ್ ಮಾಡಿ ವಿಕೃತಿ ಮೆರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+