ಯುವತಿಯ ರಹಸ್ಯ ವಿಡಿಯೋ : ಬಾಬಿಯ ಕಾ'ಮುಕ' ಬಯಲು

ತ್ರಿಸ್ಸೂರು, ಮೇ 10: ಕೇರಳದ ಹೆಸರಾಂತ ಚೆಮ್ಮನೂರು ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ಸಂಸ್ಥೆಯ ಮುಖ್ಯಸ್ಥ, ದಾನಿ, ಉದ್ಯಮಿ ಬಾಬಿ ಚೆಮ್ಮನೂರು ಅವರು ಕುಟುಕು ಕಾರ್ಯಾಚರಣೆಯೊಂದರಲ್ಲಿ 'ಹೌದು ನಾನು ಸ್ತ್ರೀಲೋಲ, ಲಂಪಟ' ಎಂದು ಘೋಷಿಸಿಕೊಂಡಿದ್ದಾರೆ. ಮಹಿಳೆಯೊಬ್ಬರ ಬಳಿ ಹಣ ಪಡೆದು ಲೈಂಗಿಕವಾಗಿ ಬಳಸಿಕೊಂಡು ಕೈ ಕೊಟ್ಟ ಆರೋಪ ಈಗ ಬಾಬಿ ಮೇಲಿದೆ.

ಈ ಹಿಂದೆ ಆರ್ಥಿಕ ಅವ್ಯವಹಾರದಲ್ಲಿ ಬಾಬಿ ತೊಡಗಿರುವ ಆರೋಪ ಕೇಳಿ ಬಂದಿತ್ತು. ಸುಮಾರು 2,000 ಕೋಟಿ ಮೌಲ್ಯದ ವಂಚನೆ ಆರೋಪ ಹೊರೆಸಲಾಗಿತ್ತು.

ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರನ್ನು ಕರೆಸಿಕೊಂಡು ಮಲೇಷಿಯಾದಲ್ಲಿ ಚೆಮ್ಮನೂರು ಜ್ಯುವೆಲ್ಲರ್ ಮಳಿಗೆ ಆರಂಭ ಮಾಡಿ ಸುದ್ದಿಯಾಗಿದ್ದರು. ಆದರೆ, ಈಗ ಯುವತಿಯರನ್ನು ಕಾಮದ ಬಲೆಗೆ ಬೀಳಿಸಿಕೊಂಡು ಸುಖಿಸಿ ತ್ಯಜಿಸುವ ಲಂಪಟ ಎಂಬ ಆರೋಪ ಕೇಳಿ ಬಂದಿದೆ.

ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಬಿ ಎದುರು ಮಹಿಳೆಯೊಬ್ಬರು ಕಣ್ಣೀರಿಡುತ್ತಾ ಆತನ ಲೀಲೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋಗುತ್ತಾರೆ.

'ವೇಶ್ಯೆಯರಿಗಾದ್ರೂ ದುಡ್ಡು ಕೊಟ್ಟು ಸುಖ ಪಡೆಯುತ್ತಾರೆ, ನಿನಗೆ ಬಿಟ್ಟಿ ಸುಖ ಬೇಕು' ಎಷ್ಟು ಜನರಿಗೆ ಈ ರೀತಿ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುತ್ತೀಯ. ನಿನಗೆ ಪುಕ್ಕಟ್ಟೆ ಎಲ್ಲವೂ ಬೇಕು, ಪ್ರೀತಿಗೆ ಬೆಲೆ ಇಲ್ಲ, ನಿನ್ನ ಹುಡುಗರು ಕೂಡಾ ನಿನ್ನಂತೆ ಕಾಮಪಿಪಾಸುಗಳು ಎಂದು ಮಹಿಳೆ ಜರೆಯುತ್ತಾರೆ. ಇನ್ನಷ್ಟು ವಿವರ ಹಾಗೂ ವಿಡಿಯೋ ಮುಂದಿದೆ ನೋಡಿ...

ಎಷ್ಟು ಬಾರಿ ಗರ್ಭಪಾತ ಮಾಡಿಸಿಕೊಳ್ಳಲಿ

ಎಷ್ಟು ಬಾರಿ ಗರ್ಭಪಾತ ಮಾಡಿಸಿಕೊಳ್ಳಲಿ

ಆಗಸ್ಟ್ ತಿಂಗಳು ನನಗೆ ಒಳ್ಳೆ ತಿಂಗಳು ಕಳೆದ ವರ್ಷ ಇದೇ ಸಮಯಕ್ಕೆ ನಾನು ಗರ್ಭವತಿಯಾಗಿದ್ದೆ. ನಾನು ಈಗಾಗಲೇ ಐದಾರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ, ಐಸಿಯುನಲ್ಲಿದ್ದಾಗ ಎಸ್ಎಂಎಸ್ ಮಾಡಿದರೂ ರಿಪ್ಲೇ ಮಾಡಲೇ ಇಲ್ಲ. ಎಷ್ಟು ಬಾರಿ ನಿನಗೆ ಮನುಷ್ಯತ್ವವೇ ಇಲ್ಲ ಎಂದು ಮಹಿಳೆ ಗೋಳಾಡುತ್ತಾರೆ.

ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿರುತ್ತಾನೆ

ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿರುತ್ತಾನೆ

ವಿಡಿಯೋದುದ್ದಕ್ಕೂ ಶ್ವೇತವಸ್ತ್ರಧಾರಿ ಬಾಬಿ, ಸುಮ್ಮನೆ ಕುಳಿತು ಕೇಳಿಸಿಕೊಳ್ಳುತ್ತಿರುತ್ತಾನೆ. ನೀನು womaniser ಎಂದಾಗ, ಹೌದು ಏನೀವಾಗ, ನಾನು womaniser, ಸಾವಿರ ಜನ ಮಹಿಳೆಯರ ಸಹವಾಸ ಮಾಡಿದ್ದೇನೆ. ಹಾಗೆ ನಾನು ದಾನಿ ಕೂಡಾ, ನನ್ನ ಪಾಲಿಸಿ ಇಷ್ಟೇ ಯಾರನ್ನು ಲವ್ ಮಾಡಬಾರದು ಎಂದು ಹೇಳುತ್ತಾನೆ.

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ

ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, don't use that f@$k love word, ನಾನು ಅನಾಥೆ ಎಂಬ ಕಾರಣ ನನ್ನನ್ನು ಬಳಸಿಕೊಂಡು ಬಿಸಾಡುತ್ತೀಯಾ, ಒಂದು ದಿನ ಜನರು ನಿನ್ನನ್ನು bastard ಎಂದು ಬೈಯ್ದು ಬೀದಿಯಲ್ಲಿ ಹೊಡೆಯುವ ಕಾಲ ಬರಲಿದೆ. ನಿನಗೆ ಒಳ್ಳೆ ಸಾವು ಸಿಗದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಎಂದು ಮಹಿಳೆ ಆಕ್ರೋಶದಿಂದ ಹೇಳುತ್ತಾರೆ.

ನಿನ್ನ ಕಾಮಕ್ಕೆ ಫುಲ್ ಸ್ಟಾಪ್ ಇಡುತ್ತೇನೆ

ನಿನ್ನ ಕಾಮಕ್ಕೆ ಫುಲ್ ಸ್ಟಾಪ್ ಇಡುತ್ತೇನೆ

ನಿನಗೆ ಕಾಮಾತುರವಾದಾಗ ಜತೆಗೆ ಯಾರು ಇಲ್ಲ ಎಂದು ನನ್ನ ಬಳಿಗೆ ಬಂದಿದ್ದೀಯ, ನಿನ್ನ ಕಾಮಾಂಗ ಕತ್ತರಿಸಿಕೊಂಡು ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕು. ನಿನ್ನ ಲಂಪಟತನ, ಶೋಕಿ ಎಲ್ಲವನ್ನು ಜಗತ್ತಿನ ಮುಂದಿಡುತ್ತೇನೆ, ಉದ್ಯಮಿ, ದಾನಿ ಎಂಬ ಜನಪ್ರಿಯತೆ ಮಣ್ಣಾಗುವಂತೆ ಮಾಡುತ್ತೇನೆ ಎಂದು ಮಹಿಳೆ ಕೂಗುತ್ತಾರೆ.

ಸಂಭಾಷಣೆ ಇರುವ ವಿಡಿಯೋ ಇಲ್ಲಿದೆ:

ಮಲೆಯಾಳಮ್ ಹಾಗೂ ಇಂಗ್ಲೀಷ್ ನಲ್ಲಿ ಸಂಭಾಷಣೆ ಇರುವ ವಿಡಿಯೋ ಇಲ್ಲಿದೆ: ವಿಡಿಯೋ ನೋಡುವ ಮುನ್ನ ಪೋಷಕರ ಗಮನಕ್ಕೆ 18+ ಪದಗಳಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+