ಕೇರಳ: ಘರ್ಷಣೆ ನಿಯಂತ್ರಿಸುವ ಸ್ಪೀಕರ್ ಪ್ರಯತ್ನ ವಿಫಲ, ಆಡಳಿತ, ವಿಪಕ್ಷ, ಭದ್ರತಾ ಸಿಬ್ಬಂದಿ ಮೇಲೆ ಪ್ರಕರಣ
ಯಾವುದೇ ಪ್ರಚೋದನೆ ಇಲ್ಲದೆ ಸ್ಪೀಕರ್ ಕಚೇರಿಗೆ ನುಗ್ಗಲು ಯತ್ನಿಸಿದ ವಿರೋಧ ಪಕ್ಷದ ಶಾಸಕರು ಈ ಹಿಂಸಾಚಾರಕ್ಕೆ ಕಾರಣ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.
ತಿರುವನಂತಪುರಂ, ಮಾರ್ಚ್ 16: ಕೇರಳ ವಿಧಾನಸಭೆಯಲ್ಲಿ ಆರಂಭವಾಗಿರುವ ಘರ್ಷಣೆ ಸದ್ಯಕ್ಕೆ ನಿಲ್ಲುವಂತೆ ಕಾಣಿಸುತ್ತಿಲ್ಲ. ಬುಧವರಾವಷ್ಟೇ ಹಿಂಸಾಚಾರಕ್ಕೆ ಸಾಕ್ಷಿಯಾದ ವಿಧಾನಸಭೆಯಲ್ಲಿ ಗುರುವಾರವೂ ಧರಣಿ, ಪ್ರತಿಭಟನೆ ಮುಂದುವರೆದಿತ್ತು. ನಡೆಯುತ್ತಿರುವ ವಿವಾದವನ್ನು ಪರಿಹರಿಸುವ ಕೇರಳ ವಿಧಾನಸಭೆ ಸ್ಪೀಕರ್ ಎಎನ್ ಷಂಷೀರ್ ಪ್ರಯತ್ನವೂ ವಿಫಲವಾಯಿತು.
ಯುಡಿಎಫ್ ಶಾಸಕರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ಸಿಪಿಐಎಂ ಶಾಸಕರಾದ ಎಚ್ ಸಲಾಮ್ ಮತ್ತು ಸಚಿನ್ ದೇವ್ ಮತ್ತು ಭದ್ರತಾ ಸಿಬ್ಬಂದಿಯ ಉಪ ಮುಖ್ಯ ಮಾರ್ಷಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಗುರುವಾರದ ಸಮನ್ವಯ ಸಭೆಯಲ್ಲಿ, ರೆವಲ್ಯೂಷನರಿ ಮಾರ್ಕ್ಸ್‌ವಾದಿ ಪಕ್ಷದ (ಆರ್‌ಎಂಪಿ) ಶಾಸಕಿ ಕೆಕೆ ರೆಮಾ ಅವರ ಕೈ ಮುರಿತಕ್ಕೊಳಗಾದ ಕಾರಣ ಇಬ್ಬರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಒತ್ತಾಯಿಸಿದ್ದಾರೆ.

ಆದರೆ ಯಾವುದೇ ಪ್ರಚೋದನೆ ಇಲ್ಲದೆ ಸ್ಪೀಕರ್ ಕಚೇರಿಗೆ ನುಗ್ಗಲು ಯತ್ನಿಸಿದ ವಿರೋಧ ಪಕ್ಷದ ಶಾಸಕರು ಈ ಹಿಂಸಾಚಾರಕ್ಕೆ ಕಾರಣ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ಬುಧವಾರ ವಿಪಕ್ಷ ಸದಸ್ಯರು ಸ್ಪೀಕರ್ ಕಚೇರಿಗೆ ಮೆರವಣಿಗೆ ನಡೆಸಿ ಸದನದ ಮಾರ್ಷಲ್‌ಗಳು ಮತ್ತು ಆಡಳಿತ ಪಕ್ಷದ ಸದಸ್ಯರೊಂದಿಗೆ ವಾಗ್ವಾದಕ್ಕಿಳಿದಾಗ ಮೊದಲ ಬಾರಿಗೆ ಹಿಂಸಾಚಾರದ ಘಟನೆಗಳಿಗೆ ವಿಧಾನಸಭೆ ಸಾಕ್ಷಿಯಾಯಿತು. ಘಟನೆಯ ನಂತರ ನಾಲ್ವರು ವಿರೋಧ ಪಕ್ಷದ ಶಾಸಕರು ಮತ್ತು ಏಳು ಮಂದಿ ಮಾರ್ಷಲ್‌ಗಳು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.
ಸಮನ್ವಯ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿಪಕ್ಷ ನಾಯಕ ಸತೀಶನ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಪ್ರತಿಪಕ್ಷಗಳು ಪ್ರತಿ ದಿನ ಸದನವನ್ನು ಮುಂದೂಡಲು ಸಾಧ್ಯವಿಲ್ಲ ಮತ್ತು ಸದನಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದು, ಇದಕ್ಕೆ ಉತ್ತರಿಸಿದ ಸತೀಶನ್, ಸದನದಲ್ಲಿನ ಪ್ರಮುಖ ಘಟನೆಗಳು ಮತ್ತು ಸಮಸ್ಯೆಗಳನ್ನು ಎತ್ತಿ ಹಿಡಿಯುವುದು ಪ್ರತಿಪಕ್ಷಗಳ ಕರ್ತವ್ಯ ಎಂದು ವಾದಿಸಿದ್ದಾರೆ.
ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಸ್ಪೀಕರ್ ಅವರು ವಿಡಿಯೋಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ತಮ್ಮ ತೀರ್ಪು ನೀಡುವುದಾಗಿ ಹೇಳಿದರು. ಸದನದ ಮಧ್ಯದಲ್ಲಿಯೇ ವಿರೋಧ ಪಕ್ಷದ ಸದಸ್ಯರು ಅಣಕು ವಿಧಾನಸಭೆ ಕಲಾಪ ನಡೆಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ದೊಡ್ಡ ಬ್ಯಾನರ್‌ಗಳ ಬಳಕೆಯನ್ನು ವಿರೋಧಿಸಿದ ಅವರು, ತಮ್ಮ ಪ್ರತಿಭಟನೆಯನ್ನು ಶಾಂತಿಯುತವೆಂದು ಹೇಳಿ, ಮಾರ್ಷಲ್‌ಗಳು ಮತ್ತು ಆಡಳಿತ ಪಕ್ಷದ ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ನಂತರ ಸಿಎಂ ಕಾರ್ಯಪ್ರವೃತ್ತರಾಗಿದ್ದಾರೆ. ಸದನದಲ್ಲಿ ಪ್ರಮುಖ ಪ್ರಕರಣಗಳು ಮತ್ತು ಘಟನೆಗಳನ್ನು ಬೆಳಕಿಗೆ ತರುವುದು ಪ್ರತಿಪಕ್ಷಗಳ ಕರ್ತವ್ಯ. ಟೀಕೆಗಳನ್ನು ಎದುರಿಸಲಾಗದೆ ಸಿಎಂ ಅಸಹಿಷ್ಣುತೆ ಹೊಂದುತ್ತಿದ್ದಾರೆ' ಎಂದು ಸತೀಶನ್ ಆರೋಪಿಸಿದ್ದಾರೆ. ಇನ್ನು, ಪೊಲೀಸರು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಶಾಸಕರು ಮತ್ತು ವಿಧಾನಸಭೆಯ ವಾಚ್ ಮತ್ತು ವಾರ್ಡ್ ಸಿಬ್ಬಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಏಳು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಶಾಸಕರ ಮೇಲೆ ಗಲಭೆ ಮತ್ತು ನೋವನ್ನುಂಟುಮಾಡಲು ಸ್ಪೀಕರ್ ಕಚೇರಿಗೆ ನುಗ್ಗಿದ ಪ್ರಕರಣದಲ್ಲಿ ಜಾಮೀನು ರಹಿತ ಕೇಸ್‌ಗಳನ್ನು ಹಾಕಲಾಗಿದೆ. ಇಬ್ಬರು ಆಡಳಿತ ಪಕ್ಷದ ಸದಸ್ಯರ ಮೇಲೆ ಹಲ್ಲೆ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications