ಮಂಗಳೂರು ರೈಲ್ವೆ ವಿಚಾರದಲ್ಲಿ ಕೇರಳಕ್ಕೆ ಹಿನ್ನಡೆ! ರಾಜ್ಯಕ್ಕೆ 10% ಅಧಿಕ ಅನುದಾನ ಹಂಚಿಕೆ: ಅಶ್ವಿನಿ ವೈಷ್ಣವ್
ನವದೆಹಲಿ: ರೈಲ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದ ಸಂಸದರೊಂದಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಕೇರಳದ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ರೈಲ್ವೆಯನ್ನು ನೈಋತ್ಯ ರೈಲ್ವೆ ವಲಯದೊಂದಿಗೆ ಸೇರಿಸಿಕೊಳ್ಳುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸಚಿವರು ತಿಳಿಸಿದರು. ಈ ಮೂಲಕ ಬಾರೀ ಲಾಬಿನಡೆಸಿದ್ದ ಕೇರಳಕ್ಕೆ ಹಿನ್ನಡೆ ಆಗಿದೆ. ಆದರೆ ರಾಜ್ಯದಲ್ಲಿ ಭರಪೂರ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೇರಳದ ರೈಲ್ವೆ ಮೂಲಸೌಕರ್ಯ ಮತ್ತು ಪ್ರಯಾಣಿಕರ ಸಂಪರ್ಕ ವ್ಯವಸ್ಥೆ ಸಂಬಂಧ ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೇರಳದ ನಾಯಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಮಂಗಳೂರು ರೈಲ್ವೆ ವಿಚಾರದಲ್ಲಿ ಕೈಗೊಂಡ ನಿರ್ಧಾರ ಮುಂದುವರಿಯಲಿದೆ. ಮಂಗಳೂರು ರೈಲ್ವೆ ಪ್ರದೇಶವು ಮೂರು ವಿಭಿನ್ನ ರೈಲ್ವೆ ವಲಯಗಳ ನಡುವೆ ಹಂಚಿಹೋಗಿತ್ತು. ಇದರಿಂದ ಅಭಿವೃದ್ಧಿಗೆ ಆಗಿದ್ದ ತೊಂದರೆಯನ್ನು ಸಚಿವರು ಸಭೆಯಲ್ಲಿ ವಿವರಿಸಿದರು. ಈ ಸಂಬಂಧ ಕೇರಳ ಸಿಎಂ ಜತೆಗಿನ ಚರ್ಚೆ ಬಗ್ಗೆಯು ತಿಳಿಸಿದರು.

ಕೇರಳ ರೈಲ್ವೆ ಅನುದಾನದಲ್ಲಿ ಭಾರೀ ಹೆಚ್ಚಳ!
ಇನ್ನೂ ಕೇರಳ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಭರಪೂರ ಅನುದಾನ ಒದಗಿಸಲಾಗುತ್ತಿದೆ. ಕೇಂದ್ರದಿಂದ ನೀಡುವ ಅನುದಾನದಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ ಎಂಬುದನ್ನು ಅಶ್ವಿನಿ ವೈಷ್ಣವ್ ಅವರು ಸಭೆಯಲ್ಲಿ ಹೈಲೈಟ್ ಮಡಿದರು. ಸದ್ಯ ರಾಜ್ಯದಲ್ಲಿ 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಅನುದಾನದಡಿ ಕೇರಳದಲ್ಲಿ ಹೊಸ ರೈಲು ಮಾರ್ಗದ ಯೋಜನೆಗಳು, 145 ಮೇಲ್ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳು, 19 ನಿಲ್ದಾಣಗಳ ಮೇಲ್ದರ್ಜೆಗೆ ಏರಿಸುವ ಯೋಜನೆಗಳು ಒಳಗೊಂಡಿವೆ ಎಂದು ಅವರು ಹೇಳಿದರು.
ಅನದಾನ ಹಂಚಿಕೆಯಲ್ಲಿನ ಏರಿಕೆ ವಿವರ
ಕೇಂದ್ರದಿಂದ ಕೇರಳಕ್ಕೆ 2014 ರಲ್ಲಿ372 ಕೋಟಿ ರೂಪಾಯಿ ಇತ್ತು. 2026-27ರ ವೇಳೆಗೆ ಆ ಅನುದಾನ ಪ್ರಮಾಣ ಸುಮಾರು 10 ಪಟ್ಟು ಏರಿಕೆ (3,795 ಕೋಟಿ) ಮಾಡಲಾಗಿದೆ. ಕಳೆದ 12 ವರ್ಷಗಳಲ್ಲಿ ಕೇರಳವು ತನ್ನ ರೈಲ್ವೆ ಜಾಲದ ಸಂಪೂರ್ಣ (ಶೇ.100) ವಿದ್ಯುದೀಕರಣ ಸಾಧಿಸಲಾಗಿದೆ. ಅನೇಕ ರೈಲು ಹಳಿಗಳನ್ನು ದ್ವಿಪಥಗೊಳಿಸಲಾಗಿದೆ. ಇನ್ನೂ ಗೇಜ್ ಪರಿವರ್ತನೆಯ ಕಾಮಗಾರಿ ಪ್ರಗತಿಯಲ್ಲಿಇವೆ. ಈವರೆಗೆ ರಾಜ್ಯದಲ್ಲಿ ಬರೋಬ್ಬರಿ 131 ಮೇಲ್ಸೇತುವೆ, ಅಂಡರ್‍ಪಾಸ್ ಪೂರ್ಣಗೊಳಿಸಲಾಗಿದೆ. 'ಅಮೃತ್ ಭಾರತ್ ನಿಲ್ದಾಣ ಯೋಜನೆ'ಯಡಿ 16 ರೈಲ್ವೆ ನಿಲ್ದಾಣ ಆಧುನಿಕರಣಗೊಂಡಿವೆ ಎಂದರು.
ರೈಲ್ವೆ ಲೆವೆಲ್-ಕ್ರಾಸಿಂಗ್ ಸಮಸ್ಯೆ ನಿವಾರಣೆಗೆ, ರಸ್ತೆ-ರೈಲು ಸಂಪರ್ಕ ಸುಧಾರಿಸಲು ರಾಹ್ಯದಲ್ಲಿ 4,700 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 145 ರಸ್ತೆ ಮೇಲ್ಸೇತುವೆ, ರಸ್ತೆ ಅಂಡರ್‌ಬ್ರಿಡ್ಜ್‌ಗಳ (RUB) ಕಾಮಗಾರಿ ಪ್ರಗತಿಯಲ್ಲಿವೆ. ಇದರಲ್ಲಿ ಸುರಂಗ ಮಾರ್ಗವು ಒಳಗೊಂಡಿದೆ. ಭೂಸ್ವಾಧೀನ ಸದ್ಯ ವಿವಿಧ ಕಾರಣಗಳಿಗಾಗಿ 52 ಯೋಜನೆಗಳು ಪೂರ್ಣಗೊಳ್ಳದೇ ಗಡುವು ಮೀರಿವೆ.
ಉತ್ತರ-ದಕ್ಷಿಣ ರೈಲು ಜಾಲ ವ್ಯಾಪ್ತಿಯಲ್ಲಿ 800 ಕಿ.ಮೀಗೂ ಹೆಚ್ಚು ಉದ್ದದ ಮೂರನೇ, ನಾಲ್ಕನೇ ರೈಲು ಮಾರ್ಗದ ಯೋಜನೆ ಆರಂಭಿಸಲು ಸಮಗ್ರ ಯೋಜನಾ ವರದಿ (DPR) ತಯಾರಿಸಲಾಗುತ್ತದೆ. ಈ ಸಂಬಂಧ ಸಮೀಕ್ಷೆ ಕೈಗೊಳ್ಳಲಾಗಿದೆ. ಭೂಸ್ವಾಧೀನಕ್ಕಾಗಿ ರೈಲ್ವೆ ಇಲಾಖೆಯು ಈಗಾಗಲೇ ಕೇರಳ ಸರ್ಕಾರಕ್ಕೆ 1,976 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.


Click it and Unblock the Notifications
