Get Updates
Get notified of breaking news, exclusive insights, and must-see stories!

ಕೇರಳ ಸಚಿವೆ ಶೈಲಜಾಗೆ ಮದರ್ ತೆರೆಸಾ ಪ್ರಶಸ್ತಿ

ನವದೆಹಲಿ, ಡಿಸೆಂಬರ್ 25: ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಡಿಜಿಪಿ ಸಂಜಯ್ ಪಾಂಡೆ, ಅಮೆರಿಕದ ಖ್ಯಾತ ವೈದ್ಯ ಡಾ. ಆಂಥೋನಿ ಫೌಸಿ ಮತ್ತು ಇತರೆ ಅನೇಕ ಜಾಗತಿಕ ವ್ಯಕ್ತಿಗಳು 2020ರ ಪ್ರತಿಷ್ಠಿತ ಮದರ್ ತೆರೆಸಾ ಸ್ಮಾರಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೋಲ್ಕತಾದ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯು 2005ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಈ ವರ್ಷ ಕೋವಿಡ್ 19ರ ನಿಯಂತ್ರಣದ ಹೋರಾಟದಲ್ಲಿ ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಕ್ತ ವರ್ಷ 'ಕೋವಿಡ್ ಸಮಯದಲ್ಲಿ ಅನುಕಂಪದ ಸಂಭ್ರಮಾಚರಣೆ' ಥೀಮ್‌ನಲ್ಲಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಹಾರ್ಮೊನಿ ಫೌಂಡೇಷನ್ ಅಧ್ಯಕ್ಷ ಅಬ್ರಹಾಂ ಮಥಾಯ್ ಹೇಳಿದ್ದಾರೆ.

ಕೇರಳದ ಆರೋಗ್ಯ ಸಚಿವರಾದ ಕೆ.ಕೆ. ಶೈಲಜಾ (64) ಪರಿಣತರು ಮತ್ತು ವಿಜ್ಞಾನಿಗಳ ಸಲಹೆಗಳನ್ನು ಪಡೆದು ಕೊರೊನಾ ವೈರಸ್ ತಡೆಗೆ ತೆಗೆದುಕೊಂಡ ಕ್ರಮಗಳು ಮತ್ತು ಕೋವಿಡ್ ಭೀತಿಗೆ ಒಳಗಾಗಿದ್ದ ಅಸಂಖ್ಯಾತ ಕೇರಳಿಗರಿಗೆ ಸಹಾಯ ಮಾಡುವ ಮೂಲಕ ಇತರೆ ರಾಜ್ಯಗಳು ಮತ್ತು ದೇಶಗಳಿಗೆ ಮಾದರಿಯಾಗಿದ್ದಾರೆ ಎಂದು ಸಂಸ್ಥೆ ಗುರುತಿಸಿದೆ.

 Kerala Health Minister KK Shailaja, Dr Fauci Named For Mother Teresa Awards

ಬಾಣಸಿಗ ವಿಕಾಸ್ ಖನ್ನಾ (49) ಸೌಲಭ್ಯವಿಲ್ಲದವರು, ಅನಾಥರು, ಕೆಳಸಮುದಾಯದ ಜನರಿಗೆ ಆಹಾರ, ಪಾದರಕ್ಷೆ, ಸ್ಯಾನಿಟರಿ ಪ್ಯಾಡ್ ಮತ್ತು ಮಾಸ್ಕ್‌ಗಳನ್ನು ಒದಗಿಸುವ ಫೀಡ್ ಇಂಡಿಯಾ ಎಂಬ ಕಾರ್ಯಕ್ರಮವನ್ನು ಶುರುಮಾಡಿದ್ದರು. ಮಹಾರಾಷ್ಟ್ರ ಹೋಮ್ ಗಾರ್ಡ್ ಡಿಜಿಪಿ ಸಂಜಯ್ ಪಾಂಡೆ ಅವರು ಪೊಲೀಸ್ ಅಧಿಕಾರಿಯಾಗಿ ತಮ್ಮ ಕರ್ತವ್ಯದಾಚೆಗೆ, ಮುಂಬೈನಲ್ಲಿ ಲಾಕ್‌ಡೌನ್‌ನಿಂದ ಜೀವನೋಪಾಯಕ್ಕೆ ಮಾರ್ಗವಿಲ್ಲದೆ ತತ್ತರಿಸಿದ್ದ ವಲಸೆ ಕಾರ್ಮಿಕರಿಗೆ ಮೊದಲ ಪರಿಹಾರ ಕೇಂದ್ರವನ್ನು ಸ್ಥಾಪಿಸಿದ್ದರು. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಾಣಾಪಾಯವನ್ನು ಲೆಕ್ಕಿಸದೆ ಇಬ್ಬರು ವಾರ್ಡ್‌ಬಾಯ್‌ಗಳ ಜತೆಗೂಡಿ ತಮ್ಮ ಸಹೋದ್ಯೋಗಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ತಾವೇ ಗುಂಡಿ ತೋಡಿ ದೇಹಕ್ಕೆ ಸೂಕ್ತ ಅಂತ್ಯಸಂಸ್ಕಾರ ನಡೆಸಿದ ಚೆನ್ನೈನ ಡಾ. ಪ್ರದೀಪ್ ಕುಮಾರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದರ ಜತೆಗೆ ಅಮೆರಿಕದ ವೈದ್ಯ ಡಾ. ಆಂಥೋನಿ ಫೌಸಿ, ಇಟಲಿಯ ಫಾದರ್ ಫೇಬಿಯೊ ಸ್ಟೆವೆನಾಜ್, ಇಟಲಿಯ ಕ್ರಿಸ್ಟಿಯನ್ ಫ್ರಕಾಸ್ಸಿ ಮತ್ತು ಅಲೆಸ್ಸಾಂಡ್ರೊ ರೊಮೈಲಿ ಅವರನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+