ರಕ್ಷಣಾ ಕಾರ್ಯಕ್ಕಾಗಿ ರಜೆ ರದ್ದು ಮಾಡಿ ಮಾನವೀಯತೆ ಮೆರೆದ ಸೈನಿಕ

ತಿರುವನಂತಪುರಂ, ಆಗಸ್ಟ್ 23: 'A Soldier is never off duty' ಎಂಬ ಮಾತಿದೆ. ಸೈನಿಕರು ಎಂದಿಗೂ ಕರ್ತವ್ಯದ ಮೇಲೆಯೇ ಇರುತ್ತಾರೆ ಎಂಬ ಮಾತನ್ನು ಸಾಬೀತು ಪಡಿಸಿದ್ದಾರೆ 28 ಮದ್ರಾಸ್ ಸಪ್ತ ಶಕ್ತಿ ಕಮಾಂಡ್ ನ ಮೇಜರ್ ಹೇಮಂತ್ ರಾಜ್!

ರಜೆಯ ಮೇಲಿದ್ದ ಅವರು ಸ್ವ ಇಚ್ಛೆಯಿಂದ ತಮ್ಮ ರಜೆಯನ್ನು ರದ್ದುಮಾಡಿ, ಕೇರಳ ಪ್ರವಾಹದ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದ್ದಾರೆ.

ಕೇರಳದಲ್ಲಿ ಸುರಿದ ಧಾರಾಕಾರ ಮಳೆಗೆ ಇದುವರೆಗೆ ಸುಮಾರು 400 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸುಮಾರು 13.5 ಲಕ್ಷ ಜನರಿಗೆ ಸುಮಾರು 3520 ಸಂತ್ರಸ್ತ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ.

ರಕ್ಷಣಾ ಸಿಬ್ಬಂದಿಗಳಂತೂ ಭೀಕರ ಪ್ರವಾಹದ ನಡುವಲ್ಲೂ ಪ್ರಾಣದ ಹಂಗು ತೊರೆದು, ಹಗಲಿರುಳೆನ್ನದೆ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

Kerala Floods: A soldier cancels his leave and joins Kerala flood relief works

ಹೇಮಂತ್ ರಾಜ್ ಅವರು ರಜೆಯಲ್ಲಿದ್ದಿದ್ದರಿಂದ ಅವರನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಅವರ ವೃತ್ತಿಧರ್ಮ ಮರೆಯದೇ, ಕೇರಳ ಜನರ ಕಣ್ಣೀರಿಗೆ ಆಸರೆಯಾಗಿ ಪರಿಹಾರ ಕಾರ್ಯದಲ್ಲಿ ಧುಮುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+