ನೀವು ಆಮ್ಲೆಟ್ ತಿಂತಿರಾ!: ಗಂಟಲಲ್ಲಿ ಆಮ್ಲೆಟ್ ಸಿಲುಕಿ ಕಾಸರಗೋಡಿನ ವ್ಯಕ್ತಿ ಸಾವು: ಆಗಿದ್ದೇನು..?
ಮನುಷ್ಯನಿಗೆ ಸಾವು ಹೇಗೆ ಬರುತ್ತೆ ಎಂದು ಗೊತ್ತಾಗುವುದಿಲ್ಲ. ಇತ್ತೀಚೆಗೆ ದೈನಂದಿನ ಕಾರ್ಯದಲ್ಲಿ ನಿರತಾದಾಗ, ದೈಹಿಕವಾಗಿ ಗಟ್ಟಿಮುಟ್ಟಾದ ಮತ್ತು ಆರೋಗ್ಯವಂತ ವ್ಯಕ್ತಿಗಳೇ ಹೃದಯಾಘಾತದಿಂದ ಮೃತಪಡುವ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲ ಒಂದೆಡೆಯಾದರೆ, ಇಲ್ಲೊಬ್ಬ ವ್ಯಕ್ತಿ ಆಮ್ಲೆಟ್ ತಿನ್ನುವಾಗ ಮೃತಪಟ್ಟಿರುವ ಘಟನೆ ಕಾರಸಗೋಡಿನಲ್ಲಿ ನಡೆದಿದೆ.
ವಿನ್ಸೆಂಟ್ ಕಾಸ್ತಾ (52) ಎಂಬುವವರು ಮನೆ ಬಳಿಯ ಗೂಡಂಗಡಿಯಲ್ಲಿ ಆಮ್ಲೆಟ್ ತಿನ್ನುವಾಗ ಅದು ಗಂಟಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇವರು ಕಾಸರಗೋಡಿನ ಬದಿಯಡ್ಕ ಚುಳ್ಳಿಕ್ಕಾನ ನಿವಾಸಿಯಾಗಿದ್ದಾರೆ. ಸದ್ಯ ಬಾರಡ್ಕದಲ್ಲಿ ವಾಸವಿದ್ದ ಅವರು ಅಸುನಿಗಿದ್ದಾರೆ. 52 ವರ್ಷದ ಇವರು ಅವಿವಾಹಿತರಾಗಿದ್ದು, ಒಬ್ಬರೆ ಇದ್ದರು ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿನ್ಸೆಂಟ್ ತಮ್ಮ ಮನೆ ಸಮೀಪ ಗೂಡಂಗಡಿಗೆ ಎಂದಿನಂತೆ ಹೋಗಿದ್ದಾರೆ. ಅಲ್ಲಿ ಆಮ್ಲೆಟ್ ತಿನ್ನುತ್ತಿದ್ದರು. ಈ ವೇಳೆ ಗಂಟಲಿಗೆ ಆಮ್ಲೆಟ್ ಸಿಲುಕಿ ಒದ್ದಾಡಿದ್ದಾರೆ. ಕೂಡಲೇ ಸ್ಥಳಿಯರು ಅವರನ್ನು ಕಂಬಳೆಯ ಆಸ್ಪತ್ರೆಗೆ ಸೇರಿಸಿದರಾದರೂ ಫಲಕಾರಿಯಾಗಲಿಲ್ಲ. ಅವರು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಜೀವ ಬಿಟ್ಟಿದ್ದಾರೆ.
ಬೇಳ ಕಟ್ಟಂತಗಡಿ ಎಂಬಲ್ಲಿ ಅವರು ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ಬಳಿಕ ಸ್ಥಳಕ್ಕೆ ಬಂದ ಬದಿಯಡ್ಕ ಪೊಲೀಸರು ಸ್ಥಳಿಯರಿಂದ ಮಾಹಿತಿ ಪಡೆದು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸುದ್ದಿ ಕೇಳಲು ಚೂರು ಅಚ್ಚರಿ ಅನ್ನಿಸಿದರೂ ಆಮ್ಲೆಟ್ ತಿನ್ನುವಾಗ ಮೃತಪಟ್ಟಿದ್ದಾರೆ. ಆಮ್ಲೆಟ್‌ನಲ್ಲಿ ಬೇರೆ ಏನಾದರು ಕಸರು ಇತ್ತಾ? ಅಥವಾ ಅವರಿಗೆ ಅನಾರೋಗ್ಯ ಎದುರಾಗಿತ್ತಾ? ಅಥವಾ ತಿನ್ನುವಾಗ ಹೃದಯಾಘಾತವಾಗಿ ಮೃತಪಟ್ಟರಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇದೆಲ್ಲವು ಅಸಾಧ್ಯ. ಯಾರಾದರೂ ಆಮ್ಲೆಟ್ ತಿನ್ನುವಾಗ ಮೃತಪಟ್ಟರೆಂದರೆ ನಂಬಲು ಆಗಲ್ಲ. ಬಹುಶಃ ಅವರಿಗೆ ಹೃದಯಾಘಾತವಾಗಿರಬೇಕು ಎಂದು ಈ ಸಾವಿನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.












Click it and Unblock the Notifications