ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 6ರವರೆಗೆ ಕಾರ್ತಿ ಚಿದಂಬರಂಗೆ ಸಿಬಿಐ ಕಸ್ಟಡಿ

By Sachhidananda Acharya
|
Google Oneindia Kannada News

ದೆಹಲಿ, ಮಾರ್ಚ್ 1: ಐಎನ್ಎಕ್ಸ್ ಮೀಡಿಯಾ ಪ್ರಕರಣದ ವಿಚಾರಣೆ ಇಂದು ದೆಹಲಿಯ ಪಟಿಯಾಲಾ ನ್ಯಾಯಾಲಯದಲ್ಲಿ ನಡೆಯಲಿದ್ದು ಪ್ರಕರಣದ ಪ್ರಮುಖ ಆರೋಪಿ ಕಾರ್ತಿ ಚಿದಂಬರಂರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ಮಾರ್ಗ ಮಧ್ಯದಲ್ಲಿ ಮಾಧ್ಯಮಗಳು ಪ್ರಕರಣದ ಬಗ್ಗೆ ಕಾರ್ತಿ ಚಿದಂಬರಂಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಇದಕ್ಕೆ ಉತ್ತರಿಸಲು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ನಿರಾಕರಿಸಿದ್ದಾರೆ.

ಕಾರ್ತಿ ಚಿದಂಬರಂ ಪರ ವಾದ ಮಂಡನೆಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಖ್ಯಾತ ವಕೀಲ ಅಭಿಷೇಕ ಮನು ಸಿಂಗ್ವಿ ಹಾಜರಾಗಿದ್ದರೆ, ಸಿಬಿಐ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದಾರೆ.

Karti Chidambaram brought to Delhi's Patiala House Court for hearing

Newest FirstOldest First
6:44 PM, 1 Mar

ಮಾರ್ಚ್ 6ರವರೆಗೆ ಕಾರ್ತಿ ಚಿದಂಬರಂರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಆದೇಶ ನೀಡಿದೆ. ಐಎನ್ಎಕ್ಸ್ ಮಿಡಿಯಾ ಪ್ರಕರಣದಲ್ಲಿ ಅವರಿಗೆ 5 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.
3:55 PM, 1 Mar

ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಯಾವ ಅವಶ್ಯಕತೆಯೂ ಇಲ್ಲ. ಸಮನ್ಸ್ ಜಾರಿ ಮಾಡದೇ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಹೇಳಲು ಹೇಗೆ ಸಾಧ್ಯ? ಎಲ್ಲಾ ದಾಖಲೆಗಳು ಅವರ ಬಳಿಯಲ್ಲಿವೆ ಎಂದು ಕಾರ್ತಿ ಚಿದಂಬರಂ ವಕೀಲ ಅಭಿಷೇಕ್ ಮನು ಸಿಂಗ್ವಿ ಹೇಳಿದ್ದಾರೆ.
3:54 PM, 1 Mar

ಕಾರ್ತಿ ಚಿದಂಬರಂ ಲೆಕ್ಕಪರಿಶೋಧಕರ ಜಾಮೀನು ಅರ್ಜಿಯ ಬಗೆಗಿನ ತನ್ನ ತೀರ್ಪನ್ನು ಪಟಿಯಾಲಾ ನ್ಯಾಯಾಲಯ ಕಾಯ್ದಿರಿಸಿದೆ. ಹೀಗಾಗಿ ಮಾರ್ಚ್ 7ರವರೆಗೆ ಅವರು ಜೈಲಿನಲ್ಲೇ ಕಳೆಯಬೇಕಾಗಿದೆ.
3:45 PM, 1 Mar

ಸಿಬಿಐ ವಕೀಲರು.. ಪ್ರಕರಣದಲ್ಲಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ತಿ ಚಿದಂಬರಂ ದೆಹಲಿ ಹೊರತು ಪಡಿಸಿ ಇತರ ನಗರಗಳಲ್ಲೂ ಶಂಕಿತರ ಜತೆ ಸಂಪರ್ಕ ಇಟ್ಟುಕೊಂಡಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಬೇಕಾಗಿವೆ. ಜತೆಗೆ ಅವರಿಂದ ಮೂರು ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು. ಇವುಗಳ ಪರಿಶೀಲನೆ ನಡೆಸಬೇಕಾಗಿದೆ. 14 ದಿನಗಳ ಕನಿಷ್ಠ ಕಸ್ಟಡಿಗೆ ಅವರು ಬೇಕಾಗಿದ್ದಾರೆ.
3:44 PM, 1 Mar

ಸಿಬಿಐ ವಕೀಲರು: ಕಾರ್ತಿ ಚಿದಂಬರಂರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ತಮಗೇನೂ ತೊಂದರೆ ಇಲ್ಲ ಎಂದು ಹೇಳಿಯೂ ವೈದ್ಯರು ಮಾತ್ರ ಕಾರ್ಡಿಯಕ್ ಕೇರ್ ಗೆ ಶಿಫ್ಟ್ ಮಾಡಬೇಕು ಎಂದು ಹೇಳಿದರು. ಅವರು ತುರ್ತು ನಿಗಾ ಘಟಕದಲ್ಲಿ ಇಡಲಾಯಿತು ಮತ್ತು ಇಂದು ಬೆಳಿಗ್ಗೆ 7 ಗಂಟೆಗೆ ಡಿಸ್ಚಾರ್ಜ್ ಮಾಡಲಾಗಿದೆ. ಅವರು ಆರೋಗ್ಯವಾಗಿದ್ದಾರೆ. 8 ಗಂಟೆಗೆ ಕಾರ್ತಿ ಚಿದಂಬರಂ ಸಿಬಿಐ ಕಚೇರಿಗೆ ಬಂದಿದ್ದಾರೆ. ಅವರಿಗೆ ಆಗಲೇ ಬ್ರೇಕ್ ಫಾಸ್ಟ್ ನೀಡಲಾಗಿದೆ. 10 ಗಂಟೆಗೆ ವಿಚಾರಣೆ ಆರಂಭಿಸಿದ್ದೇವೆ. ಆದರೆ ಅದಕ್ಕೆ ಅವರು ಸಹಕಾರ ನೀಡುತ್ತಿಲ್ಲ.
3:36 PM, 1 Mar

ಕಾರ್ತಿ ಚಿದಂಬರಂ ಬಗ್ಗೆ ಸಿಬಿಐ ವಕೀಲರು: ಕಾರ್ತಿ ಚಿದಂಬರಂರನ್ನು 14 ದಿನಗಳ ಕಸ್ಟಡಿಗೆ ಕೇಳುತ್ತಿದ್ದೇವೆ.
3:35 PM, 1 Mar

ಕೋರ್ಟ್ ಕೋಣೆಯಲ್ಲಿ: ಸಿಬಿಐ ಅಧಿಕಾರಗಳ ಮಧ್ಯದಲ್ಲಿ ಕಾರ್ತಿ ಚಿದಂಬರಂ ಕುಳಿತಿದ್ದಾರೆ. ಕಾರ್ತಿ ಚಿದಂಬರಂ ಮುಂಭಾಗದಲ್ಲಿ ಸಿಬಿಐ ವಕೀಲ ತುಷಾರ್ ಮೆಹ್ತಾ ಕುಳಿತಿದ್ದಾರೆ. ಕಾರ್ತಿ ತಾಯಿ ನಳಿನಿ ಚಿದಂಬರಂ ಕೂಡ ನ್ಯಾಯಾಲಯದಲ್ಲಿದ್ದಾರೆ. ನಳಿನಿ ಪಕ್ಕದಲ್ಲಿ ಕಾರ್ತಿ ವಕೀಲ ಅಭಿಷೇಕ್ ಮನು ಸಿಂಗ್ವಿ ಕುಳಿತಿದ್ದಾರೆ, ಕೋರ್ಟ್ ಹಾಲ್ ತುಂಬಾ ಮಾಧ್ಯಮ ಪ್ರತಿನಿಧಿಗಳು ತುಂಬಿಕೊಂಡಿದ್ದಾರೆ.
Advertisement
3:25 PM, 1 Mar

ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ವಕೀಲರು: ಒಂದೊಮ್ಮೆ ಲೆಕ್ಕಪರಿಶೋಧಕರನ್ನು ಹೊರ ಬಿಟ್ಟರೆ ನಮ್ಮ ತನಿಖೆಗೆ ಅಡ್ಡಿಯಾಗಲಿದೆ. ಕಾರ್ತಿ ಚಿದಂಬರಂ ಬಳಿಯಲ್ಲಿ ಕೇಳಿದಾಗ ಭಾಸ್ಕರ್ ರಾಮನ್ ಗೆ ಎಲ್ಲಾ ಗೊತ್ತಿದೆ ಎಂದಿದ್ದಾರೆ. ಆದರೆ ಅವರು ತನಿಖೆಗೆ ಸಹಕರಿಸುತ್ತಿಲ್ಲ. 4 ಇನ್ ವಾಯ್ಸ್ ಗಳು ಪ್ರಮುಖವಾಗಿದ್ದು ಇವು ಅವರಿಗೆ ರೂ. 305 ಕೋಟಿ ಪಾವತಿ ಮಾಡಿದ್ದನ್ನು ತೋರಿಸುತ್ತಿವೆ. ಪ್ರಕರಣದ ಗಂಭೀರತೆ ಮತ್ತು ಭಾಸ್ಕರ್ ರಾಮನ್ ಅವರ ಪಾತ್ರವನ್ನು ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡಬಾರದು.
3:22 PM, 1 Mar

ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ವಕೀಲರು: ಲೆಕ್ಕ ಪರಿಶೋಧಕರು ತನಿಖೆಗೆ ಸಹಕರಿಸುತ್ತಿಲ್ಲ. ಎಲ್ಲರಿಂದಲೂ ವಿಚಾರಗಳನ್ನು ಮುಚ್ಚಿಡುತ್ತಿದ್ದಾರೆ. ನಮಗೆ ಎಲೆಕ್ಟ್ರಾನಿಕ್ ದಾಖಲೆಗಳು ಸಿಕ್ಕಿವೆ. ಇದಕ್ಕೆ ಮತ್ತಷ್ಟು ಸಮಯ ಬೇಕು. ಭಾಸ್ಕರ್ ರಾಮನ್ ಗೆ ಸೇರಿದ ಕಂಪನಿಗಳು ಸಿಂಗಾಪುರದಲ್ಲಿವೆ. ನಾವು ತನಿಖೆಗಾಗಿ ಒಬ್ಬರನ್ನು ಸಿಂಗಾಪುರಕ್ಕೆ ಕಳುಹಿಸಬೇಕಾಘಿದೆ. ಈ ಸಿಂಗಾಪುರದ ಕಂಪನಿ ಮೂಲಕವೇ ಎಲ್ಲವನ್ನೂ ನಿರ್ವಹಣೆ ಮಾಡಲಾಗಿದೆ.
3:19 PM, 1 Mar

ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ವಕೀಲರು: ಅವರ ಲೆಕ್ಕಪರಿಶೋಧಕರು ಅವರ ಎಲ್ಲಾ ಆಸ್ತಿಗಳನ್ನು ನಿರ್ವಹಣೆ ಮಾಡುತ್ತಾರೆ. ಎಫ್ಐಪಿಬಿ 4.24 ಕೋಟಿ ರೂ. ಹೂಡಿಕೆಗೆ ಅನುಮತಿ ನೀಡಿದೆ. ರೂ. 305 ಕೋಟಿ ಹೂಡಿಕೆಯನ್ನು ಐಎನ್ಎಕ್ಸ್ ಪಡೆದಿದೆ. ಈ ಹಣ ಹೇಗೆ ಬಂತು ಎಂದು ಐಟಿ ಪ್ರಶ್ನಿಸುತ್ತಿದೆ.
3:15 PM, 1 Mar

ಭಾಸ್ಕರ್ ರಾಮನ್ ವಕೀಲರು: ಕಂಪನಿಗೆ ಲಾಭ ಮಾಡಿಕೊಳ್ಳಲು 10 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ ಆರೋಪ ಇದೆ. ಜತೆಗೆ ನಾನು ಸಮನ್ಸ್ ಗೆ ಉತ್ತರಿಸಿಲ್ಲ ಎಂದು ಇಡಿ ಆರೋಪಿಸಿದೆ. ನನ್ನ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ನಾನು ಸಮನ್ಸ್ ನಿಂದ ತಪ್ಪಿಸಿಕೊಂಡು ತನಿಖೆಗೆ ಸಹಕರಿಸಿಲ್ಲ ಎಂದು ಆರೋಪಿಸಲಾಗಿದೆ. ಫೆಬ್ರವರಿ 16ರಂದೇ 5 ದಿನಗಳ ಕಾಲ ವಿಚಾರಣೆಗೆ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ಸಹಕಾರ ನೀಡಲಾಗಿದೆ. ನನ್ನ ಮೇಲಿರುವ ಎಲ್ಲಾ ಆರೋಪಗಳು ದಾಖಲೆಗಳನ್ನು ಆಧರಿಸಿದ್ದು ಇದು 2015ರಿಂದಲೇ ಲಭ್ಯವಿದೆ. ಬಂಧನದಲ್ಲಿಟ್ಟು ನನ್ನಿಂದ ಸಾಧಿಸುವುದು ಏನೂ ಇಲ್ಲ. ನಾನು ಪ್ರಭಾವಿ ವ್ಯಕ್ತಿಯೂ ಅಲ್ಲ. ನಾನು 10 ದಿನಗಳಿಂದ ಇಡಿ ಜೈಲಿನಲ್ಲಿದ್ದೇನೆ 2007ರಲ್ಲಿ ನಾನು 10 ಲಕ್ಷ ತೆಗೆದುಕೊಂಡಿದ್ದೇನೆ ಎಂಬ ಆರೋಪ ಇದೆ. ನನ್ನನ್ನು ಯಾಕೆ ಜೈಲಿಗೆ ಕಳುಹಿಸಲಾಗಿದೆ.
3:04 PM, 1 Mar

ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ ಎಸ್. ಭಾಸ್ಕರನ್ ಜಾಮೀನು ಅರ್ಜಿಗೆ ಪಟಿಯಾಲಾ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯದಿಂದ ವಿರೋಧ.
Advertisement

English summary
INX Media Case: Karti Chidambaram brought to Delhi's Patiala House Court for hearing in case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X