ಪದ್ಮಾವತ್ ವಿವಾದ: ಜನವರಿ 25ಕ್ಕೆ ಭಾರತ್ ಬಂದ್
ಬೆಂಗಳೂರು, ಜನವರಿ 21: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರವು ಪದ್ಮಾವತ್ ಎಂದು ಹೆಸರು ಬದಲಾಯಿಸಿಕೊಂಡ ಬಳಿಕವೂ ಅದೃಷ್ಟ ಬದಲಾಗಿಲ್ಲ.
ಚಿತ್ರ ಬಿಡುಗಡೆ ದಿನಾಂಕ ನಿಗದಿಯಾದರೂ ಆತಂಕ ದೂರಾಗಿಲ್ಲ. ಪದ್ಮಾವತಿ ಚಿತ್ರ ಬಿಡುಗಡೆ ದಿನ (ಜನವರಿ 25) ಭಾರತ್ ಬಂದ್ ಆಚರಣೆಗೆ ಶ್ರೀ ಕಾರ್ನಿ ಸೇನಾ ಕರೆ ನೀಡಿದೆ.

ಒಂದು ವೇಳೆ ಎಚ್ಚರಿಕೆ ಮೀರಿ ಚಿತ್ರವನ್ನು ಬಿಡುಗಡೆಗೊಳಿಸಿದರೆ, ಚಿತ್ರ ಮಂದಿರಗಳನ್ನು ಸುಟ್ಟು ಭಸ್ಮ ಮಾಡಲಾಗುವುದು ಎಂದು ಸೇನಾದ ಮುಂಬೈ ಘಟಕ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ಹೇಳಿದ್ದಾರೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟಿ, ರಾಣಿ ಪದ್ಮಾವತಿ ಪಾತ್ರಧಾರಿ ದೀಪಿಕಾ ಪಡುಕೋಣೆ ಅವರಿಗೆ ಈಗಾಗಲೇ ಸೇನಾದಿಂದ ಜೀವ ಬೆದರಿಕೆಯಿದೆ. ಅಂಬಾಲಾದಲ್ಲಿ ಕಾರ್ನಿ ಸೇನಾ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಗುಜರಾತಿನಲ್ಲಿ ಚಿತ್ರ ಪ್ರದರ್ಶನ ಮಾಡದಿರಲು ಅಲ್ಲಿನ ಪ್ರದರ್ಶಕರ ಸಂಘ ನಿರ್ಧರಿಸಿದೆ.












Click it and Unblock the Notifications