Get Updates
Get notified of breaking news, exclusive insights, and must-see stories!

School Holiday: ದಸರಾ 2025ಕ್ಕೆ ಶಾಲೆ-ಕಾಲೇಜುಗಳಿಗೆ ಸುದೀರ್ಘ ರಜೆ ಘೋಷಣೆ, ಅಪ್ಡೇಟ್ಸ್

School Holidays 2025: ನಿರಂತರವಾಗಿ ಸುರಿದ ಮುಂಗಾರು ಮಳೆ ಪ್ರಯುಕ್ತ ಈಗಾಗಲೇ ಶಾಲೆ-ಕಾಲೇಜುಗಳು ಮಳೆ ಪಡೆದಿವೆ. ಇದೀಗ ಸಾಲು ಸಾಲು ಹಬ್ಬಗಳು ಎದುರಾಗಿವೆ. ಗಣೇಶ ಹಬ್ಬ ಮುಗಿಯುತ್ತಿದ್ದಂತೆ ದಸರಾ ಹಬ್ಬ 2025 ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಬ್ಬದ ರಜೆ ಘೋಷಣೆ ಆಗಿದೆ. ಒಟ್ಟು 09 ದಿನ ರಜೆ ನೀಡಲಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ರಜೆ ಪಟ್ಟಿ ಪ್ರಕಟಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಾದ್ಯಂತ ಹಬ್ಬದ ಕ್ಯಾಲೆಂಡರ್‌ನ ಭಾಗವಾಗಿ ಶಾಲಾ-ಕಾಲೇಜುಗಳು ವಿಸ್ತೃತ ಅವಧಿಗೆ ಬಂದ್ ಆಗಲಿವೆ. ದಸರಾ ಹಬ್ಬದಾಚರಣೆ ವೇಳೆ ಶಾಲೆಗಳಿಗೆ ಒಂಬತ್ತು ದಿನ ರಜೆ ನೀಡಲಾಗಿದೆ. ಇದೇ ತಿಂಗಳೂ ಆಗಸ್ಟ್‌ 15 (ಸ್ವಾತಂತ್ರ್ಯ ದಿನಾಚರಣೆ), ಆಗಸ್ಟ್. 16 ಮತ್ತು ಆ. 17 ರಂದು ಮೂರು ದಿನಗಳ ರಜೆ ನೀಡಲಾಗಿತ್ತು. ಇದೀಗ ಗಣೇಶ ಹಬ್ಬ ಎದುರಾಗಿದೆ. ಆಗಸ್ಟ್ 27ರಂದು ರಜೆ ಇದೆ. ಇದೀಗ ತೆಲಂಗಾಣ, ಆಂಧ್ರ ಪ್ರದೇಶ ಶೈಕ್ಷಣಿಕ ಇಲಾಖೆಗಳು ಕ್ಯಾಲೆಂಡರ್‌ ಅನ್ವಯ ಮುಂದಿನ ರಜೆಗಳನ್ನು ಪ್ರಕಟಿಸಿವೆ.

Karnataka Telangana and Andhra Pradesh Schools-Colleges Get Extended Holidays for Dussehra 2025

ದಸರಾ ಪ್ರಯುಕ್ತ ಶಾಲೆ ಮತ್ತು ಕಾಲೇಜುಗಳು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2 ರವರೆಗೆ ಒಟ್ಟು ಒಂಬತ್ತು ದಿನಗಳ ರಜೆ ಇರಲಿದೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತ ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಸೆ. 27 ರಿಂದ ಅಕ್ಟೋಬರ್ 2 ರವರೆಗೆ ಆರು ದಿನ ರಜೆ ನೀಡಿವೆ. ಇದು ದಸರಾ ರಜೆಗಿಂತ ಮೂರು ದಿನ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ದಸರಾ ರಜೆ ನೀಡಲಾಗುತ್ತದೆ. ಸದ್ಯಕ್ಕೀಗ ಕೆಲವು ಜಿಲ್ಲೆಗಳು ಆಗಾಗ ಒಂದು ದಿನ ಮಳೆ ರಜೆ ಪಡೆಯುತ್ತಿವೆ.

ಶಾಲೆ-ಕಾಲೇಜು ರಜೆ ಘೋಷಣೆ

ತೆಲಂಗಾಣದಲ್ಲಿ ಸುದೀರ್ಘ ರಜೆಗಳು ಸಿಕ್ಕಿವೆ. ರಾಜ್ಯಾದ್ಯಂತ ಶಾಲೆ- ಕಾಲೇಜುಗಳು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 3 ರವರೆಗೆ ರಜೆ ಪಡೆಯಲಿವೆ. ತೆಲಂಗಾಣದಲ್ಲಿ ದಸರಾ ಹೆಚ್ಚಿನ ದಿನಗಳಲ್ಲಿ ಆಚರಣೆ ಆಗಲಿದೆ. ಸೆಪ್ಟೆಂಬರ್ 5 ರಂದು ಉರುಸ್-ಉನ್-ನಬಿಯನ್ನು ರಜಾದಿನವೆಂದು ಈಗಾಗಲೇ ಕ್ಯಾಲೇಂಡರ್‌ನಲ್ಲಿ ತಿಳಿಸಲಾಗಿದೆ. ಇನ್ನೂ ಡಿಸೆಂಬರ್ 22 ರಿಂದ 28 ರವರೆಗೆ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಕ್ರಿಸ್‌ಮಸ್ ರಜೆ ಘೋಷಣೆ ಆಗಿದೆ. 2026ರ ಜನವರಿಯಲ್ಲಿ ಅಲ್ಪಸಂಖ್ಯಾತ ಶಾಲೆಗಳಲ್ಲಿ ಜನವರಿ 10 ರಿಂದ 15 ರವರೆಗೆ ಸಂಕ್ರಾಂತಿ ರಜಾದಿನ ಇದೆ. ಸಾಮಾನ್ಯ ಶಾಲೆಗಳು ಜನವರಿ 10 ರಿಂದ 18 ರವರೆಗೆ ಮುಚ್ಚಲ್ಪಡುತ್ತವೆ ಎಂದು ವರದಿ ಆಗಿದೆ.

ಕರ್ನಾಟಕ ದಸರಾ ರಜೆ ದಿನಗಳು

ಕರ್ನಾಟಕದಲ್ಲಿ ದಸರಾ ಸೆಪ್ಟಂಬರ್ ಮೂರನೇ ವಾರದಿಂದ ಶುರುವಾಗಲಿದೆ. ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. 2026 ಏಪ್ರಿಲ್ 11 ರಿಂದ 2026 ಮೇ 5ರ ವರೆಗೆ ಇನ್ನೂ ಬೇಸಿಗೆ ರಜೆ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 123 ದಿನ ರಜೆ ಘೋಷಣೆ ಆಗಿದೆ. ಉಳಿದ ದಿನಗಳಲ್ಲಿ ಶಾಲೆಗಳು ತೆರೆಯಲಿವೆ. ಈ ಮಧ್ಯೆ ಭಾರೀ ಮಳೆಗೆ ಆಗಾಗ ಕೆಲವು ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ. ಅದನ್ನು ರಜಾ ದಿನಗಳಲ್ಲಿ ತರಗತಿ ನಡೆಸಿ ಪಠ್ಯಭ್ಯಾಸ ಸರಿಹೊಂದಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+