ಶಾಸಕರ ರಾಜೀನಾಮೆ ಅಂಗೀಕಾರವಾಗಲು ಹೇಗಿರಬೇಕು? ಹೇಗಿರಬಾರದು?

ನವದೆಹಲಿ, ಜುಲೈ 16: ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಶಾಸಕರ ರಾಜೀನಾಮೆಯನ್ನು ತಡೆಹಿಡಿಯಲು ಸ್ಪೀಕರ್ ಅವರಿಗೆ ಅಧಿಕಾರ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸುವ ಹಂತದಲ್ಲಿದೆ.

ಶಾಸಕರ ರಾಜೀನಾಮೆ ಪತ್ರಗಳ ಮೇಲೆ ಕುಳಿತಿರುವ ಸ್ಪೀಕರ್, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿ ಹಾಜರಾಗಬೇಕು, ಇಲ್ಲವೇ ವಿಪ್ ಉಲ್ಲಂಘನೆ ಮಾಡಿದ ಆರೋಪದಲ್ಲಿ ಅವರನ್ನು ಅನರ್ಹಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಒಂದು ವೇಳೆ ಶಾಸಕರು ರಾಜೀನಾಮೆ ಸಲ್ಲಿಸಿದರೆ ಯಾವ ಬಗೆಯ ಪ್ರಕ್ರಿಯೆಯನ್ನು ಅನುಸರಿಸಬೇಕು? ಆ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ...

karnataka political crisis how should be the resignation of MLAs

ಮೊದಲು ರಾಜೀನಾಮೆಯನ್ನು ಸೂಕ್ತ ಮಾದರಿಯಲ್ಲಿ ಬರೆಯಬೇಕು. ಸಂಕ್ಷಿಪ್ತ ರೂಪದಲ್ಲಿ ಸ್ವ ಇಚ್ಛೆಯಿಂದ ರಾಜೀನಾಮೆಯನ್ನು ಬರೆದು ಸಲ್ಲಿಸಬೇಕು ಮತ್ತು ಅವರು ಯಾವುದೇ ಒತ್ತಡಕ್ಕೆ ಮಣಿದು ನೀಡಬಾರದು.

ತಾನು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸದಸ್ಯತ್ವಕ್ಕೆ ತಕ್ಷಣದಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಶಾಸಕರು ಸರಳವಾಗಿ ಬರೆಯಬೇಕು. ಅದರಲ್ಲಿ ಯಾವುದೇ ಹೆಚ್ಚುವರಿ ಪದವಿದ್ದರೂ ಅದನ್ನು ತಿರಸ್ಕರಿಸಲಾಗುತ್ತದೆ. ಅಲ್ಲದೆ, ಶಾಸಕರು ತಮ್ಮ ರಾಜೀನಾಮೆಗೆ ಕಾರಣವನ್ನು ಆ ಪತ್ರದಲ್ಲಿ ವಿವರಿಸುವ ಅಗತ್ಯವಿಲ್ಲ.

ರಾಜೀನಾಮೆ ಪತ್ರವನ್ನು ಮುದ್ರಿಸುವಂತಿಲ್ಲ. ತಮ್ಮ ಹಸ್ತಾಕ್ಷರದಲ್ಲಿಯೇ ಅದನ್ನು ಬರೆಯಬೇಕು. ಮತ್ತು ಸ್ಪೀಕರ್ ಅವರಿಗೆ ಖುದ್ದಾಗಿ ತಲುಪಿಸಬೇಕು. ಯಾವುದೇ ಬೆದರಿಕೆಯ ಒತ್ತಡಗಳಿಂದ ರಾಜೀನಾಮೆ ನೀಡಿಲ್ಲ ಎಂಬುದು ದೃಢಪಟ್ಟಬಳಿಕ ಸ್ಪೀಕರ್ ಅದನ್ನು ಅಂಗೀಕರಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+