ಭಾರತದ ಶ್ರೀಮಂತ CM ಯಾರು? ಡಿಕೆ ಶಿವಕುಮಾರ್ ಗೆ ಅಗ್ರಸ್ಥಾನ, ಉಳಿದವರಿಗೆ ಯಾವ ಸ್ಥಾನ? ಕ್ರಿಮಿನಲ್ ಕೇಸ್‌ಗಳ ಪಟ್ಟಿ
ಕೊಲ್ಕತ್ತಾ: ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 28 ರಾಜ್ಯ ಮೂರು ಕೇಂದ್ರಾಡಳಿತ ಪ್ರದೇಶಗಳ ಸೇರಿದಂತೆ 31 ಸಿಎಂಗಳ ಪೈಕಿ ಅವರು 1,413 ಕೋಟಿ ಒಟ್ಟು ಆಸ್ತಿ ಹೊಂದುವ ಮೂಲಕ 'ಭಾರತದ ಟಾಪ್ 1 ಶ್ರೀಮಂತ ಮುಖ್ಯಮಂತ್ರಿ' ಎಂಬ ಖ್ಯಾತಿ ಪಡೆದಿದ್ದಾರೆ. ಇದರೊಂದಿಗೆ ಕೆಲವರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ವಿಲೇವಾರಿ ಆಗದೇ ಬಾಕಿ ಉಳಿದಿವೆ. ಹಾಗಾದರೆ ಯಾರೆಲ್ಲ ಶ್ರೀಮಂತ ಸಿಎಂ ಪಟ್ಟಿಯಲ್ಲಿದ್ದಾರೆ. ಅವರ ಮೇಲಿನ ಬಾಕಿ ಕ್ರಿಮಿನಲ್ ಪ್ರಕರಣಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ.
ಅಸೋಸಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (SDR) ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ/ಪಟ್ಟಿ ಪ್ರಕಾರ, ಕರ್ನಾಟಕದ ಸಿಎಂಗೆ ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಅಗ್ರಸ್ಥಾನ ಸಿಕ್ಕಿದೆ. ಪಶ್ಚಿಮ ಬಂಗಾಳ ಬಿಜೆಪಿ ಸಿಎಂ ಸುವೇಂದು ಅಧಿಕಾರಿ ಹಾಗೂ ಡಿಕೆ ಶಿವಕುಮಾರ್ ಅವರ ಮೇಲೆ ಕೊಲೆ ಯತ್ನದ ಆರೋಪ ಪ್ರಕರಣಗಳು ಇವೆ.

ಎಲ್ಲಾ 31 ಮುಖ್ಯಮಂತ್ರಿಗಳ ಒಟ್ಟು ಸಂಪತ್ತು 3,660 ಕೋಟಿ ರೂ. ಆಗುತ್ತದೆ. ಡಿಕೆ ಶಿವಕುಮಾರ್ ಕಷಿಕ, ಉದ್ಯಮಿ, ರಾಜಕಾರಣಿಯಾಗಿ ವಿವಿಧ ವಲಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ವರದಿ ಪ್ರಕಾರ ಕಾಶ್ಮೀರದ ಒಮರ್ ಅಬ್ದುಲ್ಲಾ ಅವರು ಒಟ್ಟು 55.24 ಲಕ್ಷ ರೂಪಾಯಿ ಹೊಂದುವ ಮೂಲಕ ಶ್ರೀಮಂತ ಸಿಎಂ ಪಟ್ಟಿಯ ಕೊನೆಯ ಸ್ಥಾನದಲ್ಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಸಲ್ಲಿಸಿದ ಸ್ವಯಂ ಪ್ರಮಾಣೀಕೃತ ಅಫಿಡವಿಟ್ ಮಾಹಿತಿ ಆಧರಿಸಿದ ವರದಿ ಇದಾಗಿದೆ.
ಕ್ರಿಮಿನಲ್ ಪ್ರಕರಣಗಳು ಯಾವುವು?
ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದರೂ ಸಹಿತ ರಾಜಕಾರಣದಲ್ಲಿ ಸಕ್ರಿಯವಾಗಿದ್ದುಕೊಂಡು ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ. ಪ್ರಕರಣಗಳ ದೀರ್ಘ ಕಾಲದಿಂದ ಬಾಕಿ ಉಳಿದಿದ್ದು, ಅಪಾರ ಸಂಪತ್ತು ಹೊಂದಿದ್ದಾರೆ. ಕೆಲವು ಮುಖ್ಯಮಂತ್ರಿಗಳು ಕೊಲೆ ಪ್ರಯತ್ನ ಮತ್ತು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಅಪರಾಧ ಪ್ರಕರಣಗಳ ಮಾಹಿತಿ
ಒಟ್ಟು 31 ಮುಖ್ಯಮಂತ್ರಿಗಳ 14 ಮಂದಿ (ಶೇಕಡಾ 45) ರಷ್ಟು ಜನಪ್ರತಿನಿಧಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ಘೋಷಿಸಿಕೊಂಡಿದ್ದಾರೆ. ಅದರಲ್ಲಿ 11 ಮುಖ್ಯಮಂತ್ರಿಗಳು (ಶೇಕಡಾ 35) ಎಡಿಆರ್ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪ ಎದುರಿಸುತ್ತಿದ್ದಾರೆ. ಇದರಲ್ಲಿ ಲಂಚ ಸ್ವೀಕಾರ, ಅಕ್ರಮ ಆಸ್ತಿ ಗಳಿಕ, ಜೀವ ಬೆದರಿಕೆ, ನಕಲಿ ದಾಖಲೆ ಸೃಷ್ಟಿ, ದ್ವೇಷದಂತಹ ಹಲವು ವಿಧದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಇದರಲ್ಲಿ ಕೊಲೆ ಯತ್ನ ಗಂಭೀರವಾದದ್ದಾಗಿದೆ.
ಸುವೇಂದು ಅಧಿಕಾರಿ ಮತ್ತು ಕರ್ನಾಟಕದ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 307ರ ಅಡಿಯಲ್ಲಿ ಕೊಲೆಗೆ ಯತ್ನ ಪ್ರಕರಣಗಳು ಸೇರಿವೆ. ಇದೆಲ್ಲದರ ಮಧ್ಯೆ ವರ್ಷದಿಂದ ವರ್ಷಕ್ಕೆ ಅಥವಾ ಚುನಾವಣೆಯಿಂದ ಚುನಾವಣೆಗೆ ಇವರ ಆಸ್ತಿಗಳ ಮೌಲ್ಯ ಹೆಚ್ಚುತ್ತಲೇ ಇದೆ.
ಎಲ್ಲ ಸಿಎಂಗಳ ಆಸ್ತಿ 3,660 ಕೋಟಿ ರೂ
ಪ್ರತಿ ಮುಖ್ಯಮಂತ್ರಿಯ ಸರಾಸರಿ ಘೋಷಿತ ಆಸ್ತಿ 118.07 ಕೋಟಿ ರೂಪಾಯಿ. ಎಲ್ಲಾ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ ಕೂಡಿಸಿದರೆ ಬರೋಬ್ಬರಿ 3,660 ಕೋಟಿಯಷ್ಟಾಗುತ್ತದೆ. ಶೇ.13ರಷ್ಟು ಮುಖ್ಯಮಂತ್ರಿಗಳ ಆಸ್ತಿ 100 ಕೋಟಿ ರೂ.ಗೂ ಅಧಿಕ ಮೌಲ್ಯದ್ದಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒಟ್ಟು ಆಸ್ತಿ 931 ಕೋಟಿ ರೂಪಾಯಿ, ತಮಿಳುನಾಡಿನ ಸಿಎಂ ಸಿ.ವಿಜಯ್ ಜೋಸೆಫ್ ಆಸ್ತಿ 648ಕೋಟಿ ರೂಪಾಯಿ, ಸಿಎಂ ಪೇಮಾಖಂಡು ಆಸ್ತಿ 332 ಕೋಟಿ ರೂಪಾಯಿಯಷ್ಟಿದೆ.
ದೇಶದಲ್ಲಿ ಒಬ್ಬರೇ ಮಹಿಳಾ ಸಿಎಂ
ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಪೈಕಿ ದೆಹಲಿಯಲ್ಲಿ ಒಬ್ಬರೇ ಮಹಿಳಾ (ರೇಖಾ ಗುಪ್ತಾ) ಸಿಎಂ ಆಡಳಿತದಲ್ಲಿದ್ದಾರೆ. ಮಹಿಳಾ ಸಿಎಂ ಒಬ್ಬರಿದ್ದಾರೆ. 09 ಮಂದಿ (ಶೇ.29) ಸ್ನಾತಕೋತ್ತರ ಪದವೀಧರ ಸಿಎಂ ಇದ್ದಾರೆ. 07 ಸಿಎಂಗಳು (ಶೇ. 23) ಪದವಿ ಪಡೆದವಿದ್ದಾರೆ. ಆರು ನಾಯಕರು (ಶೇ. 19) ಪದವೀಧರ ವೃತ್ತಿಪರರು ಇದ್ದರೆ, ಮೂವರು ಮುಖ್ಯಮಂತ್ರಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇನ್ನು ಇಬ್ಬರು ಕೇವಲ SSLC (10 ನೇ ತರಗತಿ) ಒದಿದವರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


Click it and Unblock the Notifications
