Karnataka Budget 2023: ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ

ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬೆಂಗಳೂರು, ಫೆಬ್ರವರಿ. 17: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಒಟ್ಟು ಬಜೆಟ್ ಗಾತ್ರ 309182 ಕೋಟಿ ರೂಪಾಯಿಯಾಗಿದ್ದು, ಭರಪೂರ ಭರವಸೆಗಳನ್ನೇ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್‌ಗೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿದೆ. ಇದು ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ ಎಂದು ಟೀಕಿಸಿದೆ.

"ಹಿಂದಿನ ಬಜೆಟ್‌ನ ಪ್ರಗತಿ 50% ಕೂಡ ದಾಟಿಲ್ಲ. ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ. ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Karnataka Congress Reaction to CM Basavaraj Bommai Govt Karnataka Budget 2023

"50% ರಷ್ಟೂ ಸಹ ಹಿಂದಿನ ಬಜೆಟ್‌ನ ಘೋಷಣೆಗಳು ಪ್ರಗತಿಯಾಗಿಲ್ಲ. 90%ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ. 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ. ಹೀಗಿರುವಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಓದುತ್ತಿರುವ ಬಜೆಟ್‌ನಲ್ಲಿ ಬದ್ಧತೆ ಇಲ್ಲ. ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ" ಎಂದು ವ್ಯಂಗ್ಯವಾಡಿದೆ.

"ಲ್ಯಾಪ್ಟಾಪ್ ಹಂಚಿಕೆಯಿಂದ ಹಿಡಿದು ವಿದ್ಯಾರ್ಥಿವೇತನದವರೆಗೂ ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರ ಎಲ್ಲಾ ತರದಲ್ಲೂ ದ್ರೋಹವೆಸಗಿದೆ. ಈಗಾಗಲೇ SC,ST ವಿದ್ಯಾರ್ಥಿವೇತನದ 4500 ಸಾವಿರ ಕೋಟಿ ಬಾಕಿ ಇದೆ. ಅದನ್ನೇ ಕೊಡದವರು ಬಜೆಟ್‌ ಘೋಷಣೆಗಳನ್ನು ಈಡೇರಿಸುವರೇ..?" ಎಂದು ಪ್ರಶ್ನೆ ಮಾಡಿದೆ.

"ಕೇಂದ್ರದಿಂದ ರಾಜ್ಯದವರೆಗೂ ಬಿಜೆಪಿ ಮೊದಲಿಂದಲೂ ಜನರ ಕಿವಿ ಮೇಲೆ ಹೂವಿಡುತ್ತಲೇ ಬಂದಿದೆ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಕಿವಿ ಮೇಲೆ ಹೂವಿಟ್ಟರು.

ಈಗ ರಾಜ್ಯ ಬಜೆಟ್‌ನಲ್ಲಿ ಕನ್ನಡಿಗರ ಕಿವಿ ಮೇಲೆ ಹೂವಿಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿನ 90% ರಷ್ಟು ಭರವಸೆ ಈಡೇರಿಸದ ಬಿಜೆಪಿ ಬಜೆಟ್‌ನಲ್ಲಿ ಹೇಳಿದ್ದು ಮಾಡುವುದೇ..!" ಎಂದು ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+