ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಕನ್ನಡದಲ್ಲೇ ಗುಡುಗಿದ ಬಿಎಸ್‌ವೈ

|
Google Oneindia Kannada News

ನವದೆಹಲಿ, ಚೆನ್ನೈ, ಜುಲೈ, 21: ಡಿವೈಎಸ್ಪಿ ಎಂಕೆ ಗಣಪತಿ ಹಾಗೂ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಬಿಎಸ್ ಯಡಿಯೂರಪ್ಪ ಲೋಕಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.

ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದ ಎರಡು ಪ್ರಕರಣಗಳ ಬಗ್ಗೆ ಕನ್ನಡದಲ್ಲಿಯೇ ಪ್ರಸ್ತಾಪಿಸುವ ಮೂಲಕ ಇಡೀ ಸದನದ ಗಮನ ಸೆಳೆದರು.[ಅಕ್ಕಪಕ್ಕದಲ್ಲೇ ಕಾಣಿಸಿಕೊಂಡ ಬಿಎಸ್ ವೈ ಮತ್ತು ಈಶ್ವರಪ್ಪ]

Karnataka BJP president B S Yeddyurappa Speech in Lok Sabha

ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಜಿಲ್ಲಾಧಿಕಾರಿಗಳೇ ಆತಂಕದಲ್ಲಿ ದಿನ ಕಳೆಯಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಪ್ರಕರಣವೇ ಉದಾಹರಣೆ ಎಂದು ಬಿಎಸ್ ವೈ ಹೇಳಿದರು.[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಸದನದಲ್ಲಿ ಯಡಿಯೂರಪ್ಪ ಆತ್ಮಹತ್ಯೆ ಪ್ರಕರಣ ಪ್ರಸ್ತಾಪ ಮಾಡುತ್ತಿದ್ದಂತೆ ಕಾಂಗ್ರೆಸ್ ಸಂಸದರಾದ ಧ್ರುವ ನಾರಾಯಣ್, ಮುದ್ದೇಹನುಮಗೌಡ, ಹುಕ್ಕೇರಿ, ಚಂದ್ರಪ್ಪ ಸದನದ ಬಾವಿಗೆ ಇಳಿದು ಬಂದರು. ಸುಮಾರು 5 ನಿಮಿಷಗಳ ಕಾಲ ಮಾತನಾಡಿದ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಮಾಡಿದರು.

English summary
New Delhi:Karnataka BJP president, MP B S Yeddyurappa demanding CBI probe into suicides of two DySPs B K Ganapathi and Kallappa Handibag. Here is the high lights of B S Yeddyurappa speech in Lok Sabha on on 21, July, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X