ಕಾಮುಕರಿಗೆ ರಕ್ತ ಬರುವಂತೆ ಬಡಿದ ಹದಿನಾರರ ಹುಡುಗಿ
ಬರಸತ್ (ಕೊಲ್ಕತಾ), ಸೆ, 08 : ಹೆಣ್ಣು ಮಕ್ಕಳ ಕುರಿತಾಗಿ ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಗಾದೆ ಮಾತನ್ನು ನೀವು ಕೇಳಿರ್ತಿರಿ. ಈ ಮಾತು ಕೊಲ್ಕತಾದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ.
ಚೇಡಿಸುತ್ತಾ, ಅತ್ಯಾಚಾರ ಎಸಗಲು ಮುಂದಾದ ಬೀದಿ ಕಾಮಣ್ಣರ ವಿರುದ್ಧ 16 ವರ್ಷದ ಬಾಲಕಿ ತಿರುಗಿ ಬಿದ್ದಿದ್ದು, ಕಾಮುಕರಿಗೆ ರಕ್ತ ಸುರಿಯುವಂತೆ ಗೂಸಾ ನೀಡಿ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಂಡಿದ್ದಾಳೆ.[ಬಯಲಾಯ್ತು ಹುಬ್ಬಳ್ಳಿ ಪ್ರಿನ್ಸಿಪಾಲರ ವಿಕೃತ ಕಾಮುಕತನ]

ದಿನಂಪ್ರತಿ ಈಕೆ ಓಡಾಡುವ ದಾರಿಯಲ್ಲಿ ರೋಡ್ ರೋಮಿಯೋಗಳ ಕಾಟ ಇದ್ದೇ ಇತ್ತು. ಕೆಲವು ದಿನಗಳ ಹಿಂದೆ ಅವಳನ್ನು ಆಕೆಯನ್ನು ರೇಗಿಸಲು ಮುಂದಾಗಿದ್ದರು. ಇವೆಲ್ಲಾವನ್ನು ಶಾಂತ ರೀತಿಯಲ್ಲೇ ಗಮನಿಸಿ ಸಮಾಧಾನದಿಂದ ಇದ್ದ ಈಕೆ ತನ್ನ ಆಕ್ರೋಶವನ್ನು ಸೋಮವಾರ ಸಂಜೆ ಹೊರಹಾಕಿದ್ದಾಳೆ.
ಈ ಬಾಲಕಿ ಸೋಮವಾರ ಸಂಜೆ ಒಬ್ಬಂಟಿಯಾಗಿ ಬರುವುದನ್ನು ಗಮನಿಸಿದ ಕಾಮುಕರು ಕುಡಿದ ಮತ್ತಿನಲ್ಲಿ, ಬೈಕಿನಲ್ಲಿ ಬಂದು ಆಕೆಗೆ ಹಿಂದಿನಿಂದ ತಳ್ಳಿ ಬೀಳಿಸಿದ್ದಾರೆ. ಇವರ ಪುಂಡಾಟಗಳಿಗೆ ಕುಪಿತಳಾದ ಬಾಲಕಿ ಆ ನಾಲ್ಕು ಜನರ ಮುಖ, ತಲೆ, ಕೈ, ಕಾಲು ರಕ್ತಸಿಕ್ತವಾಗುವಂತೆ ಥಳಿಸಿದ್ದಾಳೆ. ಅತ್ಯಾಚಾರ ಮಾಡಲು ಮುಂದಾದ ಕಾಮುಕರು ಬೆಚ್ಚಿ ಬೀಳುವಂತೆ ಮಾಡಿದ್ದಾಳೆ.
ಈ ಪೋಕರಿಗಳ ಅಸಭ್ಯ ವರ್ತನೆಯನ್ನು ಪ್ರತಿಭಟಿಸಿದ ಬಾಲಕಿ ಕರಾಟೆ ವಿದ್ಯಾರ್ಥಿಯಾಗಿದ್ದು, ಈಕೆಯ ಹೊಡೆತದಿಂದ ಇವರ ದೇಹದ ಅಂಗಾಂಗಳು ನುಜ್ಜುಗುಜ್ಜಾಗಿದೆ. ಇವೆಲ್ಲಾವನ್ನು ಮೂಖ ಪ್ರೇಕ್ಷಕರಾಗಿ ನೋಡುತ್ತಿದ್ದ ಸಾರ್ವಜನಿಕರು ಆಕೆಯ ಸಹಾಯಕ್ಕೆ ಧಾವಿಸಲಿಲ್ಲ.
ಬರಸತ್ ನಗರದ ನಿವಾಸಿಯಾದ ಶಂಕರಿ ಹಾಲ್ದಾರ್ ಈ ಘಟನೆಗೆ ಮುಖ್ಯ ಸಾಕ್ಷಿಯಾಗಿದ್ದು, ಈಕೆಯ ಧೈರ್ಯವನ್ನು ಮೆಚ್ಚಿ, ಈಕೆ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾಳೆ ಎಂದು ಪ್ರಶಂಸೆ ಮಾತನಾಡಿದ್ದಾರೆ.












Click it and Unblock the Notifications