ತಮಿಳುನಾಡು ನಾಯಕರಿಗೆ ಪ್ರಧಾನಿ ಪಟ್ಟದ ಆಫರ್ ಕೊಟ್ಟ ಅಮಿತ್ ಶಾಗೆ ಕನ್ನಡಿಗರ ಪ್ರಶ್ನೆ
ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಗೃಹ ಸಚಿವ ತಮಿಳು ನಾಡಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ಪ್ರಧಾನಿ ಮಾಡುವುದಾಗಿ ಅವರು ಹೇಳಿದ್ದಾರೆ. ತಮಿಳುನಾಡು ಪ್ರವಾಸ ಕೈಗೊಂಡಿರುವ ಅವರು, ರಾಜ್ಯ ಬಿಜೆಪಿಯ ಹಿರಿಯ ನಾಯಕರ ಜೊತೆ ಆಪ್ತ ಸಮಾಲೋಚನಾ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಅವರು ಭವಿಷ್ಯದಲ್ಲಿ ತಮಿಳು ನಾಡು ಬಿಜೆಪಿ ನಾಯಕರೊಬ್ಬರನ್ನು ಪ್ರಧಾನ ಮಂತ್ರಿ ಮಾಡುವ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಕೂಡ ತಮಿಳರಿಗೆ ಪ್ರಧಾನ ಮಂತ್ರಿಯಾಗುವ ಅವಕಾಶ ಸಿಕ್ಕಿತ್ತು, ಆದರೆ ಡಿಎಂಕೆ ಅದನ್ನು ತಪ್ಪಿಸಿತು ಎಂದು ಅಮಿತ್ ಶಾ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕನಿಷ್ಠ 20 ಸೀಟುಗಳು ಗೆಲ್ಲುವಂತೆ ಮಾಡಬೇಕು ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ. ತಮಿಳು ನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ಮತ ಸೆಳೆಯಲು ಈ ಆಫರ್ ನೀಡಿದೆ ಎಂದು ಹೇಳಲಾಗಿದೆ.
ಸೆಂಗೋಲ್‌ಗೆ ಗೌರವ ಕೊಟ್ಟಿದ್ದೇವೆ 20 ಸೀಟು ಗೆಲ್ಲಿಸಿ
ವೆಲ್ಲೂರಿನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ರಾಜ್ಯದ ಜನ ಎನ್‌ಡಿಎನ ಕನಿಷ್ಠ 25 ಸಂಸದರನ್ನು ಆರಿಸಿ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸೆಂಗೋಲ್ ಅನ್ನು ಸಂಸತ್ತಿನಲ್ಲಿ ಪ್ರತಿಷ್ಠಾಪಿಸಿದ್ದಕ್ಕಾಗಿ ತಮಿಳುನಾಡು ಜನತೆ ಮೋದಿಗೆ ಬೆಂಬಲ ಕೊಡಲು ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
25 ಸಂಸದರನ್ನು ಆರಿಸಿ ಕಳುಹಿಸಿದ ರಾಜ್ಯಕ್ಕೇನು ಕೊಟ್ಟಿದ್ದೀರಾ?
ಅಮಿತ್ ಶಾ ಅವರು ತಮಿಳು ನಾಡು ನಾಯಕರಿಗೆ ಪ್ರಧಾನಿ ಮಾಡ್ತೀವಿ ಎನ್ನುವುದು ವರದಿಯಾದ ಬೆನ್ನಲ್ಲೇ ಅನೇಕ ಕನ್ನಡಿಗರು ಬಿಜೆಪಿ ಚಿಂತನೆ ಬಗ್ಗೆ ಟೀಕಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲು ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡಿದ್ದು, ಕನ್ನಡಿಗರು. ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದಾರೆ, ಇಷ್ಟು ದಿನ ರಾಜ್ಯದ ಬಗ್ಗೆ ಅಮಿತ್ ಶಾ ಹೀಗೆ ಎಂದಾದರೂ ಮಾತನಾಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಯಿಂದ 4 ಶಾಸಕರು ಮಾತ್ರ ಇದ್ದಾರೆ, ಆದರೆ ತಮಿಳುನಾಡಿನಲ್ಲಿ ಬಿಜೆಪಿಯ ಒಬ್ಬ ಸಂಸದ ಕೂಡ ಇಲ್ಲ ಆದರೂ ತಮಿಳು ನಾಡು ನಾಯಕರಿಗೆ ಅಮಿತ್ ಶಾ ಪ್ರಧಾನಿ ಮಾಡುವುದಾಗಿ ಹೇಳಿದ್ದಾರೆ, ಇಷ್ಟು ದಿನ ಕರ್ನಾಟಕದಲ್ಲಿ ಅಧಿಕಾರ ಕೊಟ್ಟಿದ್ದಕ್ಕೆ ರಾಜ್ಯದ ನಾಯಕರಿಗೆ ಪ್ರಧಾನಿ ಮಾಡುವುದಾಗಿ ಎಂದಾದರೂ ಹೇಳಿದ್ದಾರಾ? ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
ಕರ್ನಾಟಕ ನಾಯಕರ ಕೈಗೆ ಚೊಂಬು?
— SHIVA (@SHIVA42741120) June 12, 2023
ಬಿಜೆಪಿಗೆ ದುಡಿಯಿರಿ ಚೊಂಬು ಇಸ್ಕೊಳ್ಳಿ.
ನೆನ್ನೆ ಮೊನ್ನೆ ಬಂದವರಿಗೆ ಮಂತ್ರಿಗಿರಿ ಈಗ ಪ್ರಧಾನ ಮಂತ್ರಿ ಸ್ಥಾನ.
ಇನ್ನೂ ಏನೇನು ಇದ್ಯೋ?
ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಬಗೆ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಶಿವ ಎನ್ನುವವರು ಪ್ರತಿಕ್ರಿಯೆ ನೀಡಿ "ಕರ್ನಾಟಕ ನಾಯಕರ ಕೈಗೆ ಚೊಂಬು? ಬಿಜೆಪಿಗೆ ದುಡಿಯಿರಿ ಚೊಂಬು ಇಸ್ಕೊಳ್ಳಿ. ನೆನ್ನೆ ಮೊನ್ನೆ ಬಂದವರಿಗೆ ಮಂತ್ರಿಗಿರಿ ಈಗ ಪ್ರಧಾನ ಮಂತ್ರಿ ಸ್ಥಾನ. ಇನ್ನೂ ಏನೇನು ಇದ್ಯೋ?" ಎಂದು ಹೇಳಿದ್ದಾರೆ.
ಒಂದೇ ಒಂದು ಸೀಟು ಗೆಲ್ಲದ ತಮಿಳುನಾಡಿನ ನಾಯಕನಿಗೆ ಪ್ರಧಾನಿ ಹುದ್ದೆ🤦 ಕರ್ನಾಟಕ ಬಿಜೆಪಿ ನಾಯಕರು ಬರಿ ಹೆಸರಿಗಷ್ಟೇ 😅
— Sumanth Heggade R (@heggade_r) June 12, 2023
ಮತ್ತೊಬ್ಬರು ಪ್ರತಿಕ್ರಿಯೆ ನೀಡಿ, "ಒಂದೇ ಒಂದು ಸೀಟು ಗೆಲ್ಲದ ತಮಿಳುನಾಡಿನ ನಾಯಕನಿಗೆ ಪ್ರಧಾನಿ ಹುದ್ದೆ. ಕರ್ನಾಟಕ ಬಿಜೆಪಿ ನಾಯಕರು ಬರಿ ಹೆಸರಿಗಷ್ಟೇ" ಎಂದು ಹೇಳಿದ್ದಾರೆ. ಇನ್ನೂ ಕೆಲವರು ನೀವು ಏನೇ ಮಾಡಿದರೂ ತಮಿಳುನಾಡಿನಲ್ಲಿ ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲಾಗದರು ಎಂದು ಕಾಲೆಳದಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications