Get Updates
Get notified of breaking news, exclusive insights, and must-see stories!

Kamala Harris: ಸಂಭ್ರಮಾಚರಣೆಗೆ ಮುಂದಾಗುತ್ತಿದೆ ಕಮಲಾ ಹ್ಯಾರಿಸ್ ಪೂರ್ವಜರ ತಮಿಳುನಾಡಿನ ಗ್ರಾಮ

ಚೆನ್ನೈ, ಜುಲೈ. 22: ಭಾರತದ ತಮಿಳುನಾಡಿನಲ್ಲಿರುವ ತುಳಸೇಂದ್ರಪುರಂ ಎಂಬ ಪುಟ್ಟ ಗ್ರಾಮ ಸದ್ಯ ಸಂಭ್ರಮಾಚರಣೆಯ ಮೂಡ್‌ನಲ್ಲಿದೆ. ಯನೈಟೆಡ್ ಸ್ಟೇಟ್ಸ್‌ ಆಪ್ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಮತ್ತು ಯುಎಸ್‌ನ ಸಂಭಾವ್ಯ ಅಧ್ಯಕ್ಷರಾಗಲು ಒಂದು ಹೆಜ್ಜೆ ಮುಂದಿಡುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಾಚರಣೆಗೆ ಮುಂದಾಗುತ್ತಿದ್ದಾರೆ.

ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಬಂದಿದ್ದಾರೆ. ಜೊತೆಗೆ ತಮ್ಮ ಸ್ಥಾನಕ್ಕೆ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಟಿಕೆಟ್‌ಗೆ ಪ್ರಬಲ ಸ್ಪರ್ಧಿಯನ್ನಾಗಿ ಘೋಷಿಸಿದ್ದಾರೆ. ವಾಷಿಂಗ್ಟನ್ ಡಿಸಿಯಿಂದ 12,900 ಕಿಮೀ ದೂರದಲ್ಲಿರುವ ತುಳಸೇಂದ್ರಪುರಂನಲ್ಲಿ ಸಂಭ್ರಮ ಆರಂಭವಾಗುತ್ತಿದೆ.

Kamala Harris ancestral village in Tamil Nadu plans celebrations

ಯನೈಟೆಡ್ ಸ್ಟೇಟ್ಸ್‌ ಆಪ್ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲವಾಗಿ, ಅವರ ತಾಯಿಯ ಕಡೆಯ ಪೂರ್ವಜರ ಗ್ರಾಮವು ಈ ಕ್ಷಣಕ್ಕಾಗಿ ತಯಾರಿ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕಮಲಾ ಹ್ಯಾರಿಸ್ ಅವರ ತಾಯಿ ತಂದೆ ಆಕೆ ಐದು ವರ್ಷದವಳಿದ್ದಾಗ ಈ ಗ್ರಾಮವಾದ ತುಳಸೇಂದ್ರಪುರಕ್ಕೆ ಹೋಗಿದ್ದರು. ತಮ್ಮ ಅಜ್ಜನೊಂದಿಗೆ ಹಳ್ಳಿಯಿಂದ ಕೇವಲ 320 ಕಿಮೀ ದೂರದಲ್ಲಿರುವ ಚೆನ್ನೈನ ಕಡಲತೀರದ ಉದ್ದಕ್ಕೂ ನಡೆಯುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಯನೈಟೆಡ್ ಸ್ಟೇಟ್ಸ್‌ ಆಪ್ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾದ ನಂತರ ಈ ಗ್ರಾಮಕ್ಕೆ ಭೇಟಿ ನೀಡದಿದ್ದರೂ ಕೂಡ ಗ್ರಾಮದಲ್ಲಿ ಮಾತ್ರ ಅವರ ರಾಜಕೀಯ ಜೀವನದ ಬಗ್ಗೆ ಗ್ರಾಮದಲ್ಲಿ ಹೆಮ್ಮೆಯಿದೆ. 2021 ರಲ್ಲಿ, ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾದಾಗ, ಗ್ರಾಮದಲ್ಲಿ ಪಟಾಕಿ ಸಿಡಿಸಿ, ಪೋಸ್ಟರ್ ಮತ್ತು ಕ್ಯಾಲೆಂಡರ್‌ಗಳೊಂದಿಗೆ ಅವರ ಚಿತ್ರಗಳನ್ನು ಹಂಚಲಾಗಿತ್ತು. ಗ್ರಾಮದಲ್ಲಿ ಉಚಿತ ಚಾಕೊಲೇಟ್‌ಗಳನ್ನು ಹಂಚಲಾಗಿತ್ತು.

Kamala Harris ancestral village in Tamil Nadu plans celebrations

ನ್ಯೂಯಾರ್ಕ್ ಟೈಮ್ಸ್ 2021 ರಲ್ಲಿ ವರದಿ ಮಾಡಿದ ಪ್ರಕಾರ, ಹಳ್ಳಿಯು ತಮ್ಮ ದೇವಾಲಯದಲ್ಲಿ ಕಮಲಾ ಹ್ಯಾರಿಸ್‌ಗಾಗಿ ವಿಶೇಷ ಪೂಜೆಯನ್ನು ಮಾಡಲಾಗಿತ್ತು. ದೇವಾಲಯದೊಳಗೆ ಅವರ ಹೆಸರನ್ನು ಸಹ ಕೆತ್ತಲಾಗಿದೆ. ಅನೇಕ ಗ್ರಾಮಸ್ಥರು ಕಮಲಾ ಹ್ಯಾರಿಸ್ ಅವರನ್ನು " ನಮ್ಮ ಹಳ್ಳಿಯ ಮಗಳು" ಎಂದು ಕರೆಯುತ್ತಾರೆ.

ಗ್ರಾಮ ಸಮಿತಿಯ ಸದಸ್ಯ ಕೆ ಕಲಿಯಪೆರುಮಾಳ್ ಹೇಳಿದಂತೆ, ಅವರು ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದರೆ ಗ್ರಾಮದಲ್ಲಿ ಸಂಭ್ರಮಾಚರಣೆ ಹೆಚ್ಚು ದೊಡ್ಡದಾಗಲಿದೆ. ಸುದ್ದಿ ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರು ಆಕೆಯ ವಿಷಯಗಳನ್ನು ಅಪ್‌ಡೇಟ್ ತೆಗೆದುಕೊಳ್ಳುತ್ತಿದ್ದಾರೆ. ಅವರು ಗೆದ್ದರೆ ಅವರ ಬಗ್ಗೆ ಇಡೀ ಗ್ರಾಮವೇ ಸಂಭ್ರಮಿಸಲಿದೆ ಎಂದು ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಅವರು ಗ್ರಾಮಕ್ಕೆ ಭೇಟಿ, ಹೇಳಿಕೆ ಅಥವಾ ಕನಿಷ್ಠ ಉಲ್ಲೇಖ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದರು, ಆದರೆ ಅದು ನಡೆಯಲಿಲ್ಲ ಎನ್ನುತ್ತಾರೆ ತುಳಸೇಂದ್ರಪುರಂ ಗ್ರಾಮದವರು. ಈ ಗ್ರಾಮದಲ್ಲಿ ಸುಮಾರು 2,000 ಜನರು ವಾಸಿಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಕಮಲಾ ಹ್ಯಾರಿಸ್ ಕುಟುಂಬವು 1930 ರ ದಶಕದಲ್ಲಿ ತುಳಸೇಂದ್ರಪುರವನ್ನು ತೊರೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+