ಕಮಲ್ ಹಾಸನ್ ಸಹೋದರ ಚಂದ್ರಹಾಸನ್ ನಿಧನ
ಮಗಳು ಸಿನಿಮಾ ನಟಿ ಅನು ಹಾಸನ್ ಅವರ ಲಂಡನ್ ನಲ್ಲಿರುವ ನಿವಾಸದಲ್ಲಿ ಚಂದ್ರಹಾಸನ್ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ನವದೆಹಲಿ, ಮಾರ್ಚ್. 19: ಬಹುಭಾಷಾ ನಟ ಕಮಲ್ ಹಾಸನ್ ಅವರ ಹಿರಿಯ ಸಹೋದರ, ಖ್ಯಾತ ಸಿನಿಮಾ ನಿರ್ಮಾಪಕ ಚಂದ್ರಹಾಸನ್ (82) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಗಳು ಸಿನಿಮಾ ನಟಿ ಅನು ಹಾಸನ್ ಅವರ ಲಂಡನ್ ನಲ್ಲಿರುವ ನಿವಾಸದಲ್ಲಿ ಇವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಭಾನುವಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಚಂದ್ರಹಾಸನ್ ಅವರ ಪತ್ನಿ ಗೀತಾಮಣಿ ಮರಣ ಹೊಂದಿದ್ದರು.

ರಾಜ್ ಕಮಲ್ ಫಿಲಂಸ್ ನ ಉಸ್ತುವಾರಿ ವಹಿಸಿದ್ದ ಇವರು ಕಮಲ್ ಹಾಸನ್ ಅವರ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ಕಮಲ್ ಹಾಸನ್ ಅವರ ವಿಶ್ವರೂಪಂ ಮತ್ತು ತೂಂಗಾವನಂ ಸಿನಿಮಾದ ನಿರ್ಮಾಣದಲ್ಲಿಯೂ ಇವರು ಕಾರ್ಯವಹಿಸಿದ್ದರು.












Click it and Unblock the Notifications