Jio vs BSNL: ಜಿಯೋಗೆ ಠಕ್ಕರ್ ಕೊಟ್ಟ BSNL: ಇಷ್ಟು ಕಡಿಮೆಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಮಾಹಿತಿ
ಬೆಂಗಳೂರು, ಏಪ್ರಿಲ್ 16: ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದರು ಗ್ರಾಹಕರು-ಬೇಡಿಕೆ ಇಲ್ಲದೇ ನೆರಳುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ ಬೃಹತ್ ಟೆಲಿಕಾಂ ಕಂಪನಿ ಪಟ್ಟ ಗಿಟ್ಟಿಸಿಕೊಂಡಿರುವ ರಿಲಯನ್ಸ್ ಜಿಯೋ (Reliance Jio)ಗೆ ಸೆಡ್ಡು ಹೊಡೆಯುತ್ತಿದೆ. ನೀವೇನಾದರೂ BSNL ಸಿಮ್ ಬಳಕೆದಾರರಾಗಿದ್ದರೆ, ಜಿಯೋ ಗಿಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಪಡೆಯಲು ಅರ್ಹರಾಗುತ್ತೀರಿ.
ಹೌದು, ಭಾರತ ಸೇರಿದಂತೆ ವಿಶ್ವವೇ ಟೆಲಿಕಾಂ ಯುಗದಲ್ಲಿ ಜೀವಿಸುತ್ತಿದೆ. ಭಾರತದಲ್ಲಿ ನಾಲ್ಕು ಟಾಪ್ ಟೆಲಿಕಾಂ ಕಂಪನಿಗಳು ಇವೆ. ಈ ಪೈಕಿ ವಿಶೇಷ ಪ್ಲಾನ್‌ಗಳು, ಆರಂಭಿಕ ಹಂತದಲ್ಲಿ ಕಡಿಮೆ ಬೆಲೆಗೆ ಇಂಟರ್‌ನೆಟ್ ಸೇವೆ, 5ಜಿ ಹೀಗೆ ವಿವಿಧ ಸೇವೆಗಳಿಂದ ಅಗ್ರಸ್ಥಾನ ಪಡೆಕೊಂಡಿದ್ದು ರೀಲಯನ್ಸ್ ಜಿಯೋ ಸಂಸ್ಥೆ.

ಇದರ ನಂತರ ಏರ್‌ಟೆಲ್ ಸಂಸ್ಥೆ ಇದೆ. ಇದು ಸಹ ಕೋಟ್ಯಾಂತರ ಗ್ರಾಹಕರನ್ನು ಹೊಂದಿದೆ. ಜಿಯೋ, ಏರಟೆಲ್ ನಂತರ ದೊಡ್ಡ ದೊಡ್ಡ ಟೆಲಿಕಾಂ ಸಂಸ್ಥೆಗಳ ಮಧ್ಯೆ ಸರ್ಕಾರ ಬಿಎಸ್‌ಎನ್‌ಎಲ್ ನಾಪತ್ತೆಯಾಗಿದೆ.
ಇದೀಗ ಜಿಯೋಗೆ ಸೆಡ್ಡು ಹೊಡೆಯುವಂತೆ ಹೊಸ ರಿಜಾರ್ಚ್ ಪ್ಲಾನ್‌ಗಳನ್ನು ಘೋಷಿಸಿದೆ. ಬಿಎಸ್‌ಎನ್ಎಲ್ ಪ್ಲಾನ್ ಜಿಯೋಕ್ಕಿಂತಲೂ ಕಡಿಮೆ ಇದೆ. ನೀವು ಕಡಿಮೆ ಬೆಲೆಗೆ ವರ್ಷವೀಡಿ ಅಲ್‌ಲಿಮಿಟೆಡ್ ಸೇವೆಯನ್ನು ಬಿಎಸ್‌ಎನ್‌ಎಲ್ ನಿಂದ ಪಡೆಯಬಹುದು.
BSNL ₹1570 ಪ್ರಿಪೇಯ್ಡ್ ಪ್ಲಾನ್
ಇತ್ತೀಚೆಗೆ BSNL ಕಂಪನಿ ಅತೀ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ನೀಡಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಈ ಮೂಲಕ ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಲು ಮುಂದಾಗಿದೆ. ಬಿಎಸ್‌ಎನ್‌ಎಲ್ 1 ವರ್ಷ ಮಾನ್ಯವಾಗಿರುವಂತೆ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ಪ್ಲಾನ್ ನೀಡುತ್ತಿದೆ.
ಪ್ರತಿದಿನ 2gb ಇಂಟರ್ನೆಟ್‌ನಲ್ಲಿ ಲೋಕಲ್ ಮತ್ತು STD ಕರೆಗಳ ಸೌಲಭ್ಯ ಇದೆ. ನೀವು BSNL ಗ್ರಾಹಕರಾಗಿದ್ದರೆ ಒಂದು ವರ್ಷ ಪ್ಲಾನ್‌ಗೆ ನೀವು ಕೇವಲ ₹1570 ಪ್ರಿಪೇಯ್ಡ್ ಪ್ಲಾನ್ ಅತ್ಯುತ್ತಮ ಆಯ್ಕೆ ಆಗಿದೆ. ದೈನಂದಿನವಾಗಿ ನೀವು ಹೆಚ್ಚು ಮೊಬೈಲ್ ಡೇಟಾ ಬಳಸುವವರಾಗಿದ್ದರೆ ಇದರಿಂದ ನೀಮಗೆ ಹೆಚ್ಚಿನ ಅನುಕೂಲ ಆಗಲಿದೆ.

365 ದಿನದ ಈ ಪ್ಲಾನ್ ಪಡೆದರೆ ಸಂಪೂರ್ಣ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕರೆ ಮಾಡಬಹುದು. ನಿತ್ಯ 100 ಎಸ್‌ಎಂಎಸ್ (SMS) ಸಂದೇಶಗಳು ಇದೇ ಪ್ಲಾನ್ ನಡಿ ಬರಲಿವೆ. ಇದರೊಂದಿಗೆ ಪ್ರತಿದಿನಕ್ಕೆ 2GB ಡೇಟಾ ಸೌಲಭ್ಯ ಸಿಗಲಿದೆ.
BSNL 2399 ಪ್ರಿಪೇಯ್ಡ್ ಪ್ಲಾನ್ ಸೇವೆ ವಿವರ
ಇದು ಸಹ 365 ದಿನದ ವರ್ಷದ ಪ್ರಿಪೇಯ್ಡ್ ಪ್ಲಾನ್ ಆಗಿದೆ. ಇದು ಒಂದು ತಿಂಗಳು ಹೆಚ್ಚು ಅಂದರೆ 13 ತಿಂಗಳವರೆಗೆ ಅನ್ಲಿಮಿಟೆಡ್ ಕರೆ ಸೌಲಭ್ಯ ನೀಡಲಿದೆ. ಪ್ರತಿದಿನ 24 ಗಂಟೆಗಳ ಕಾಲ, ಯಾವುದೇ ಅಡೆತಡೆಗಳಿಲ್ಲದೆ ಕರೆ ಮಾಡಿ ಮಾತನಾಡಬಹುದು.
ನಿತ್ಯ ದಿನ 2GB ಇಂಟರ್‌ನೆಟ್ ಸಿಗಲಿದೆ. ಪ್ರತಿ ದಿನ 100 SMS ಸಂದೇಶಗಳ ಉಚಿತವಾಗಿರಲಿದೆ. ಇದರೊಂದಿಗೆ ಕಂಪನಿಗೆ 30 ದಿನಗಳ ಕಾಲ ಉಚಿತ PRBT ಕೊಡುಗೆ ಲಭ್ಯವಿದೆ. ಪ್ಲಾನ್ ಮುಂಬೈ ಮತ್ತು ಡೆಲ್ಲಿನಂತಹ MTNL ಪ್ರದೇಶದಲ್ಲೂ ನೀವು ಬಳಸಬಹುದಾಗಿದೆ. ಈ ಪ್ಲಾನ್ ₹1570 ಪ್ರಿಪೇಯ್ಡ್ ಪ್ಲಾನ್ ಗಿಂತಲೂ ತುಸು ಭಿನ್ನವಾಗಿದ್ದು, ಹೆಚ್ಚುವರಿ ಸೇವೆ ಒದಗಿಲಿದೆ.
365 ದಿನದ ಜಿಯೋ ರಿಚಾರ್ಜ್ ಪ್ಲಾನ್‌ಗೆ 2999 ರೂ.
ಬೇರೆ ಟೆಲಿಕಾಂ ಕಂಪನಿಗಳಂತೆ ಪೋಸ್ಟ್‌ಪೇಯ್ಡ್, ಡೇಟಾ ಕಾರ್ಡ್ ಇನ್ನಿತರ ಪ್ಲಾನ್ ಗಳು ಲಭ್ಯ ಇದೆ. ಇನ್ನೂ ಜಿಯೋ ಕಂಪನಿಯು 4g ಸೌಲಭ್ಯ ಒದಗಿಸಲು 365 ದಿನದ ಪ್ಲಾನ್‌ಗೆ ಬರೋಬ್ಬರಿ 2999 ರೂ.ಪಡೆಯುತ್ತದೆ. ಬೇರೆಲ್ಲ ಕಂಪನಿಗಳಿಗೆ ಹೋಲಿಸಿದ ಸದ್ಯಕ್ಕೆ ವಾರ್ಷಿಕ ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್ ಇತರ ಕಂಪನಿಗಳಿಗೆ ಠಕ್ಕರ್ ಕೊಡುತ್ತಿದೆ.
ಹಲವು ಕಡೆ ಜಿಯೋ ಪೈಬರ್ ನೆಟ್ ಸಂಪರ್ಕ ಸಾಧ್ಯವಾಗಿಲ್ಲ. ಅಲ್ಲದೇ ಜಿಯೋ ಜಾಲ ಗ್ರಾಮೀಣ ಭಾಗದಲ್ಲಿ ಸುವ್ಯವಸ್ಥಿತ ನೆಟ್ ವರ್ಕ್ ಹೊಂದಿಲ್ಲ. ಬಿಎಸ್‌ಎನ್‌ಎಲ್ ಇದೇ ರೀತಿ ಗ್ರಾಹಕ ಸ್ನೇಹಿ ಆಫರ್ ನೀಡಲು ಶುರು ಮಾಡಿದರೆ ಮುಂದಿನ ದಿನಗಳ ಗ್ರಾಹಕರು ಹೆಚ್ಚಾದರೂ ಅಚ್ಚರಿಪಡಬೇಕಿಲ್ಲ. ಇದಕ್ಕೂ ಮೊದಲು ಕೇಂದ್ರ ಸರ್ಕಾರ ಈ ಬಿಎಸ್‌ಎನ್‌ಎಲ್ ಅನ್ನು ಸರಿದಾರಿಗೆ, ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications