'ಕೇಳದೆ ಇದ್ದರೂ' ಜಿಗ್ನೇಶ್ ಮೇವಾನಿಗೆ ಪೊಲೀಸ್ ಭದ್ರತೆ
ಅಹಮದಾಬಾದ್, ನವೆಂಬರ್ 6: ಕೇಳದೇ ಇದ್ದರೂ ದಲಿತರ ಹಕ್ಕುಗಳ ಹೋರಾಟಗಾರ ಜಿಗ್ನೇಶ್ ಮೇವಾನಿಗೆ ರಕ್ಷಣೆಗಾಗಿ ಇಬ್ಬರು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದರ ವಿರುದ್ಧ ಕಿಡಿಕಾರಿರುವ ಜಿಗ್ನೇಶ್ ಮೆವಾನಿ 'ಇದು ನನ್ನ ಚಟುವಟಿಕೆಗಳ ಮೇಲೆ ಕಣ್ಣಿಡಲು ಸರಕಾರ ಹೂಡಿರುವ ತಂತ್ರ' ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಗೆ ಪರೋಕ್ಷ ಬೆಂಬಲ ನೀಡಿರುವ ಜಿಗ್ನೇಶ್ ಮೆವಾನಿ ಬಿಜೆಪಿಗೆ ಮತ ನೀಡದಂತೆ ಪ್ರಚಾರ ನಡೆಸುವುದಾಗಿ ಹೇಳಿದ್ದರು. ಇದಾದ ಬೆನ್ನಿಗೆ ಅವರಿಗೆ 'ಜೀವ ಬೆದರಿಕೆ ಇದೆ' ಎಂಬ ಕಾರಣ ಮುಂದಿಟ್ಟ ಗನ್ ಮ್ಯಾನ್ ಭದ್ರತೆ ನೀಡಲಾಗಿದೆ.
ಈ ಸಂಬಂಧ ಭಾನುವಾರ ಸಮಾವೇಶವೊಂದರಲ್ಲಿ ಮಾತನಾಡಿರುವ ಜಿಗ್ನೇಶ್, "ನಾನು ಕೇಳದೆಯೇ ಮಷಿನ್ ಗನ್ ಇರುವ ಕಮಾಂಡೊ ಭದ್ರತೆ ನೀಡಿದ್ದಾರೆ. ಇದು ಕಣ್ಗಾವಲಿಗಾ ಎಂದು ಕೇಳಿದ್ದಕ್ಕೆ ಪೊಲೀಸರು ಹೌದು ಎಂದಿದ್ದಾರೆ. ರಾಜ್ಯದ ಸದ್ಯದ ಸ್ಥತಿಯನ್ನು ಇದು ಹೇಳುತ್ತದೆ," ಎಂದಿದ್ದಾರೆ.
'ದೈತ್ಯ ಬಿಜೆಪಿಯನ್ನು ಸೋಲಿಸಲು ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗಗಳ ಹೋರಾಟಗಾರ ಅಲ್ಪೇಶ್ ಠಾಕೋರ್ ಜತೆಗೆ ಕೈಜೋಡಿಸಲು ಸಿದ್ಧ,' ಎಂದು ಜಿಗ್ನೇಶ್ ಮೆವಾನಿ ಅಬ್ಬರಿಸಿದ್ದಾರೆ.












Click it and Unblock the Notifications