Jharkhand Election 2024: ಜಾಹೀರಾತಿನಿಂದ ಸಿಎಂ ಇಮೇಜ್ ಹಾಳು ಆರೋಪ- ಎಫ್‌ಐಆರ್ ದಾಖಲು
ಜಾರ್ಖಂಡ್ ಬಿಜೆಪಿ ಮೇಲೆ ಜಾಹೀರಾತಿನಿಂದ ಸಿಎಂ ಇಮೇಜ್ ಹಾಳು ಮಾಡಿದ ಆರೋಪ ಕೇಳಿ ಬಂದಿದೆ. 'ಜಾರ್ಖಂಡ್ ಚೌಪಾಲ್' ಮತ್ತು 'ರಾಂಚಿ ಚೌಪಾಲ್' ನಂತಹ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಕಳೆದ 30 ದಿನಗಳಲ್ಲಿ 72 ಲಕ್ಷ ರೂಪಾಯಿ ಮೌಲ್ಯದ ಜಾಹೀರಾತುಗಳನ್ನು ನೀಡಲಾಗಿದೆ ಎಂದು ಸಿಎಂ ಹೇಮಂತ್ ಸೊರೆನ್ ಆರೋಪಿಸಿದ್ದಾರೆ. ಈ ಜಾಹೀರಾತುಗಳ ಉದ್ದೇಶ ಕೇವಲ ಅವರ ಮತ್ತು ರಾಜ್ಯದ ಹಿತವನ್ನು ಹಾಳು ಮಾಡುವುದಾಗಿತ್ತು ಎಂದು ಸೊರೆನ್ ಆರೋಪಿಸಿದ್ದಾರೆ.
ಹೀಗಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ರಾಜ್ಯದ ಪ್ರತಿಷ್ಠೆಗೆ ಕಳಂಕ ತಂದಿರುವ ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಾಹಕರ ವಿರುದ್ಧ ಜಾರ್ಖಂಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಮತ್ತು ರಾಜ್ಯದ ಪ್ರತಿಷ್ಠೆಗೆ ಹಾನಿ ಮಾಡಿರುವ ಕಾರಣಕ್ಕೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ಮಾಡಲು ಬಿಜೆಪಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಮತ್ತು 95,000 ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಆರೋಪಿಸಿದ್ದರು.
ಈ ವಿಚಾರವನ್ನು ಚುನಾವಣಾ ಆಯೋಗ ಗಮನಕ್ಕೆ
ಜೆಎಂಎಂ ವಕ್ತಾರ ವಿನೋದ್ ಪಾಂಡೆ, 'ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರದ ವಿರುದ್ಧ ರಾಂಚಿಯ ಗೊಂಡಾ ಮತ್ತು ರತು ಪೊಲೀಸ್ ಠಾಣೆಗಳಲ್ಲಿ ನಾವು ಎರಡು ದೂರುಗಳನ್ನು ದಾಖಲಿಸಿದ್ದೇವೆ. ಜೆಎಂಎಂ ಕೂಡ ಈ ವಿಷಯವನ್ನು ಚುನಾವಣಾ ಆಯೋಗದ ಮುಂದೆ ಪ್ರಸ್ತಾಪಿಸಿದೆ' ಎಂದಿದ್ದಾರೆ. ಇನ್ನೂ ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ರವಿಕುಮಾರ್ ಮಾತನಾಡಿ, ಆಯೋಗ ವಿಷಯ ತಿಳಿದು ಅನುಪಾಲನಾ ವರದಿಯನ್ನು ಕಳುಹಿಸಿದೆ ಎಂದು ಹೇಳಿದ್ದಾರೆ.
ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸೊರೆನ್, 'ಸರ್ವಾಧಿಕಾರಿಗಳ ಬಳಿ ಕೋಟ್ಯಂತರ ರೂಪಾಯಿಗಳಿರಬಹುದು, ಆದರೆ ಅನ್ಯಾಯದ ಮೂಲಕ ಗೆಲುವು ಸಾಧಿಸುವುದಕ್ಕಿಂತ ತತ್ವಗಳಿಗೆ ಅಂಟಿಕೊಳ್ಳುವುದು ಉತ್ತಮ ಎಂದು ಅವರು ನಂಬುತ್ತಾರೆ' ಎಂದು ಹೇಳಿದರು. 'ಛಾಯಾ ಅಭಿಯಾನ'ದ ಮೂಲಕ ನನ್ನ ಇಮೇಜ್ ಹಾಗೂ ರಾಜ್ಯದ ಇಮೇಜ್ ಹಾಳು ಮಾಡಲು ಬಿಜೆಪಿಯವರು ಫೇಸ್ ಬುಕ್ ಜಾಹೀರಾತುಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. 30 ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ 72 ಲಕ್ಷ ಮೌಲ್ಯದ ಜಾಹೀರಾತುಗಳನ್ನು ನೀಡಲಾಗಿದೆ ಎಂದು ಸೊರೆನ್ ಆರೋಪ ಮಾಡಿದ್ದಾರೆ.
30 ದಿನಗಳಲ್ಲಿ 72 ಲಕ್ಷ ಮೌಲ್ಯದ ಜಾಹೀರಾತು
'ಜಾರ್ಖಂಡ್ ಚೌಪಾಲ್' ಮತ್ತು 'ರಾಂಚಿ ಚೌಪಾಲ್' ನಂತಹ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಕಳೆದ 30 ದಿನಗಳಲ್ಲಿ 72 ಲಕ್ಷ ರೂಪಾಯಿ ಮೌಲ್ಯದ ಜಾಹೀರಾತುಗಳನ್ನು ನೀಡಲಾಗಿದೆ. ಈ ಜಾಹೀರಾತುಗಳ ಗುರಿ ಕೇವಲ ತನ್ನ ಮತ್ತು ರಾಜ್ಯದ ವರ್ಚಸ್ಸನ್ನು ಹಾಳುಮಾಡುವುದಾಗಿದೆ ಎಂದು ಸೊರೆನ್ ಆರೋಪಿಸಿದ್ದಾರೆ. ಈ ಜಾಹಿರಾತುಗಳಲ್ಲಿ ಧಾರ್ಮಿಕ ಉನ್ಮಾದವನ್ನು ಹರಡಿ ಜನರ ನಡುವೆಯೇ ಹೊಡೆದಾಡುವಂತೆ ಮಾಡಲಾಗುತ್ತಿದೆ ಎಂದರು.
ಬಿಜೆಪಿ ತನ್ನ ಇಮೇಜ್ ಹಾಳು ಮಾಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ, ನಾವು ಯಾವುದೇ ಪ್ರಚಾರಕ್ಕಾಗಿ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮ ಜಾಹೀರಾತು ಗ್ರಂಥಾಲಯದಿಂದ ಪರಿಶೀಲಿಸಬಹುದು ಎಂದು ಅವರು ಹೇಳಿಕೊಂಡಿದ್ದಾರೆ.
ಸೊರೆನ್ ಆರೋಪ ಹತಾಶೆಯ ಪ್ರತಿಬಿಂಬ- ಬಿಜೆಪಿ
ಈ ಆರೋಪಗಳು ಸೊರೆನ್ ಅವರ ಹತಾಶೆಯನ್ನು ಪ್ರತಿಬಿಂಬಿಸುತ್ತವೆ ಎಂದು ಬಿಜೆಪಿ ಹೇಳಿಕೊಂಡಿದೆ. ಸೊರೆನ್ ಅವರ ಹೇಳಿಕೆಯು ಅವರ ಹತಾಶೆ ಮತ್ತು ನಿರಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಮತ್ತು ಹಿರಿಯ ಮುಖಂಡ ದೀಪಕ್ ಪ್ರಕಾಶ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಈ ಯುದ್ಧದಲ್ಲಿ ತಾನು ಸೋತಿದ್ದೇನೆ ಎಂದು ಅರ್ಥ ಮಾಡಿಕೊಂಡಿದ್ದು, ಅದಕ್ಕಾಗಿಯೇ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications