Jharkhand Dumri By Election 2023 Results: ಬಿಜೆಪಿಗೆ ಹಿನ್ನಡೆ, ಬೇಬಿ ದೇವಿಗೆ ಅಧಿಕಾರ ಕೊಟ್ಟ ಜನ, ಎಷ್ಟು ಮತಗಳು,ವಿವರ
ಬೆಂಗಳೂರು, ಸೆಪ್ಟಂಬರ್ 08: ಜಾರ್ಖಂಡ್ ರಾಜ್ಯದ ಡುಮ್ರಿ ಕ್ಷೇತ್ರದಲ್ಲಿ ಮಂಗಳವಾರ ಸೆಪ್ಟಂಬರ್ 5ರಂದು ಮತದಾನ ನಡೆದಿತ್ತು. ಇಲ್ಲಿ JMM ಪಕ್ಷದ ಅಭ್ಯರ್ಥಿ ಬೇಬಿದೇವಿ ಹಾಗೂ SJSU ಪಕ್ಷದ ಯಶೋಧಾದೇವಿ, AIMIMನ ಅಬ್ದುಲ್ ರಿಝ್ವಿ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿತ್ತು. ಇದೀಗ JMM ಪಕ್ಷದ ಅಭ್ಯರ್ಥಿ ಬೇಬಿದೇವಿ ಅವರು ಬಹುಮತ ಗಳಿಸಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗಿದೆ.
ಪೊಲೀಸ್ ಬಿಗಿ ಭದ್ರತೆಯ ನಡುವೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಡುಮ್ರಿ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆ ಸಂಬಂದ ಇಂದು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಯಿತು. ಜೆಎಂಎಂ ಅಭ್ಯರ್ಥಿಯನ್ನು ಕಾಂಗ್ರೆಸ್ ಹಾಗೂ ಆರ್ಜೆಡಿ ಬೆಂಬಲಿಸಿದ್ದರೆ, ಎಜೆಎಸ್‌ಯು ಅಭ್ಯರ್ಥಿಯನ್ನು ಬಿಜೆಪಿ ಬೆಂಬಲ ಘೋಷಿಸಿತ್ತು.

ಅಂತಿಮ ಮತ ಎಣಿಕೆಯಲ್ಲಿ ಬೇಬಿ ದೇವಿ ಅವರು 1,00,317 ಬಹುಮತ ಪಡೆಯುವ ಮೂಲಕ ತಮಗೆ ತೀವ್ರ ಪೈಪೋಟಿ ಒಡ್ಡಿದ್ದ ಯಶೋಧಾ ದೇವಿ ಅವರನ್ನು ಸೋಲಿಸಿದರು. ಯಶೋಧಾ ದೇವಿ ಅವರಿಗೆ 83,164 ಮತಗಳಿಗೆ ತೃಪ್ತಿಪಟ್ಟಕೊಂಡರು. ಈ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಸೋಲಾಯಿತು.
ಆರಂಭದಿಂದಲೂ ಬೇಬಿ ದೇವಿ ಮುನ್ನಡೆ ಸಾಧಿಸಿದ್ದರು. ಮೊದಲು ಜೆಎಂಎಂ ಅಭ್ಯರ್ಥಿ ಬೇಬಿ ದೇವಿ ಅವರು ತಮ್ಮ ಸಮೀಪದ ಎಜೆಎಸ್‌ಯು ಪಕ್ಷದ ಪ್ರತಿಸ್ಪರ್ಧಿ ಯಶೋದಾ ದೇವಿ ಅವರಿಗಿಂತ 1,341 ಮತಗಳಿಂದ ಮುನ್ನಡೆ ಸಾಧಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಎರಡು ಸುತ್ತಿನ ಮತ ಎಣಿಕೆಯ ವೇಳೆ ಭಾರತ ಬ್ಲಾಕ್ ಅಭ್ಯರ್ಥಿಯೂ ಆಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಅಭ್ಯರ್ಥಿ 7,314 ಮತಗಳನ್ನು ಗಳಿಸಿದ್ದರೆ, ಎಜೆಎಸ್‌ಯು ಪಕ್ಷದ ಅಭ್ಯರ್ಥಿ, ಎನ್‌ಡಿಎ ಅಭ್ಯರ್ಥಿ 5,973 ಮತಗಳನ್ನು ಪಡೆದರು. ಇಲ್ಲಿ ಯಶೋಧಾದೇವಿ ಅವರಿಗೆ ಮತ್ತೆ ಹಿನ್ನಡೆ ಆಯಿತು.

ಏಳನೇ ಸುತ್ತಿನಲ್ಲಿ ಬೇಬಿ ದೇವಿಗೆ ಹಿನ್ನಡೆ ಆಗಿತ್ತು
ಇದಾದ ಬಳಿಕ ಚುನಾವಣಾ ಆಯೋಗ ತಿಳಿಸುವಂತೆ, ಏಳನೇ ಸುತ್ತಿನ ಮತ ಎಣಿಕೆಯಲ್ಲಿ ಎಜೆಎಸ್‌ಯು ಪಕ್ಷದ ಯಶೋದಾ ದೇವಿ ಮುನ್ನಡೆ ಸಾಧಿಸಿದರು. ಎಜೆಎಸ್‌ಯು ಪಕ್ಷದ ಯಶೋದಾ ದೇವಿ- 25,557 ಮತಗಳು ಪಡೆದರೆ, ಜಾರ್ಖಂಡ್ ಮುಕ್ತಿ ಮೋರ್ಚಾದ ಬೇಬಿ ದೇವಿ- 24,006 ಮತ ಪಡೆದು ಹಿನ್ನಡೆ ಅನುಭವಿಸಿದರು.
ಇನ್ನೂ ಇದೇ ಸುತ್ತಿನಲ್ಲಿ AIMIM ಅಭ್ಯರ್ಥಿ ಅಬ್ದುಲ್ ಮೊಬಿನ್ ರಿಜ್ವಿ 1,129 ಮತಗಳು, ಸ್ವತಂತ್ರ ಅಭ್ಯರ್ಥಿಗಳಾದ ರೋಷನ್ ಲಾಲ್ ತುರಿಗೆ 648, ಕಮಲ್ ಪ್ರಸಾದ್ ಸಾಹು 206 ಮತ ಮತ್ತು ನಾರಾಯಣಗಿರಿ ಅವರಿಗೆ ಕೇವಲ 205 ಮತಗಳ ಮೂಲಕ ತೀವ್ರ ಹಿನ್ನಡೆ ಅನುಭವಿಸಿದರು.
ಸಚಿವರ ನಿಧನನಿಂದ ಡುಮ್ರಿಗೆ ಉಪಚುನಾವಣೆ
ಪ್ರಸಕ್ತ ವರ್ಷ 2023ರ ಆರಂಭದಲ್ಲಿ ಏಪ್ರಿಲ್ 6 ರಂದು ಮಾಜಿ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಅವರ ಅಕಾಲಿಕ ನಿಧನ ಹೊಂದಿದ್ದರು. ಈ ಸಂಬಂಧ ಡುಮ್ರಿಗೆ ಉಪಚುನಾವಣೆ ಅನಿವಾರ್ಯವಾಯಿತು.
ಸೆಪ್ಟೆಂಬರ್ 5 ರಂದು ಡುಬ್ರಿ ಉಪಚುನಾವಣೆಗೆ 373 ಬೂತ್‌ಗಳಲ್ಲಿ ಮತದಾನ ನಡೆದಿತ್ತು. ಅಂದು ಒಟ್ಟು 2.98 ಲಕ್ಷ ಅರ್ಹ ಮತದಾರರಲ್ಲಿ ಶೇ.64.84ರಷ್ಟು ಮಂದಿ ಮತದಾನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರದೇಶದಲ್ಲಿ ಭಾರೀ ಮಳೆಯ ನಡುವೆ ಅಧಿಕೃತ ವಿಧಿವಿಧಾನಗಳು ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರಿಂದ ಸುಮಾರು 10 ನಿಮಿಷಗಳ ವಿಳಂಬವಾಯಿತು ಎಂದು ತಿಳಿದು ಬಂದಿದೆ.












Click it and Unblock the Notifications