Jharkhand Election 2024: ಜಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಸೇರಿದಂತೆ ಹಲವಾರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅಮಿತ್ ಶಾ, 'ನುಸುಳುಕೋರರಿಗೆ ರಕ್ಷಣೆ ನೀಡುವ ಜೆಎಂಎಂ ಸರ್ಕಾರ ಮತ್ತು ಅಕ್ರಮವಾಗಿ ಗಡಿ ದಾಟಲು ಯಾರಿಗೂ ಅವಕಾಶ ನೀಡದ ಬಿಜೆಪಿ ಇವೆರಡರಲ್ಲಿ ಯಾವುದು ಬೇಕು ಅಂತ ಮತದಾರರು ಆಯ್ಕೆ ಮಾಡಬೇಕಾಗುತ್ತದೆ. ಪ್ರಸ್ತುತ ಆಡಳಿತದಿಂದ ಜಾರ್ಖಂಡ್ ಗಂಭೀರ ಅಪಾಯದಲ್ಲಿದೆ' ಎಂದು ಶಾ ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಬಾಬುಲಾಲ್ ಮರಾಂಡಿ, ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೆಲ್ಲ ಅಭಿವೃದ್ಧಿ ಕೆಲಸಗಳನ್ನು ಚೆನ್ನಾಗಿ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗಲೆಲ್ಲ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷ ಸರ್ಕಾರ ರಚಿಸಿದಾಗ ಅವರು ರಾಜ್ಯಕ್ಕಾಗಿ ಏನನ್ನೂ ಮಾಡಲಿಲ್ಲ, ಅವರು ತಮ್ಮ ಕುಟುಂಬದ ಅಭಿವೃದ್ಧಿಗೆ ಮಾತ್ರ ಶ್ರಮಿಸಿದರು. ಅವರು ಕಳೆದ ಐದು ವರ್ಷಗಳಿಂದ ಜಾರ್ಖಂಡ್ ಅನ್ನು ಲೂಟಿ ಮಾಡಿದ್ದಾರೆ. ಈ ಬಾರಿ ಜನರು ಎನ್‌ಡಿಎ ಸರ್ಕಾರ ರಚಿಸಲು ಮನಸ್ಸು ಮಾಡಿದ್ದಾರೆ' ಎಂದರು.
ಇದೇ ವೇಳೆ ಬಿಜೆಪಿ ವಕ್ತಾರ ಪ್ರತುಲ್ ಶಾ ದೇವ್ ಮಾತನಾಡಿ, 'ರೈತರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಭರವಸೆಗಳನ್ನು ಈ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಪ್ರಣಾಳಿಕೆಯಲ್ಲಿ 150 ನಿರ್ಣಯಗಳಿರುತ್ತವೆ' ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಜಾರ್ಖಂಡ್ ಸರ್ಕಾರ ಮಾಡಿದ್ದೇನು? ಅಮಿತ್ ಶಾ
ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಅಮಿತ್ ಶಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಈ ಚುನಾವಣೆ ಕೇವಲ ಸರ್ಕಾರವನ್ನು ಬದಲಾಯಿಸುವ ಚುನಾವಣೆಯಲ್ಲ, ಇದು ಜಾರ್ಖಂಡ್‌ನ ಭವಿಷ್ಯವನ್ನು ಭದ್ರಪಡಿಸುವ ಚುನಾವಣೆಯಾಗಿದೆ.
ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ ಬೇಕೋ ಅಥವಾ ಮೋದಿ ಬೇಕೋ ಎಂಬುದನ್ನು ಜಾರ್ಖಂಡ್‌ನ ಜನರು ನಿರ್ಧರಿಸಬೇಕು ಎಂದು ಅವರು ಹೇಳಿದರು. ನಮಗೆ ಜಾರ್ಖಂಡ್ ನೇತೃತ್ವದ ಬಿಜೆಪಿ ಸರ್ಕಾರ ಬೇಕು, ಒಳನುಸುಳುವಿಕೆಯಿಂದ ಜಾರ್ಖಂಡ್‌ನ ಗುರುತು, ಮಣ್ಣು ಮತ್ತು ಮಹಿಳೆಯರಿಗೆ ಅಪಾಯವಾದ ಸರ್ಕಾರ ಬೇಡ. ಉಳಿಸುವ ಸರ್ಕಾರ ಬೇಕು ಎಂದರು.
ನಿರುದ್ಯೋಗದಿಂದಾಗಿ ಯುವಕರು ಇಂದು ಬಿಜೆಪಿಯೊಂದಿಗೆ ತಮ್ಮ ಭವಿಷ್ಯವನ್ನು ಹುಡುಕುತ್ತಿದ್ದಾರೆ. ಜಾರ್ಖಂಡ್‌ನ ಜನರು ತಮ್ಮ ಹಣವನ್ನು ಹಂಚುವ ಸರ್ಕಾರದ ಬದಲು ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರವನ್ನು ಎದುರು ನೋಡುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ತಂದಿದೆ. ಜಾರ್ಖಂಡ್ ಅನ್ನು ನಮ್ಮ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ರಚಿಸಿದ್ದಾರೆ.
ಜಾರ್ಖಂಡ್ ಅನ್ನು ಅಲಂಕರಿಸುವ ಕೆಲಸವನ್ನು ನಮ್ಮ ನಾಯಕ ಮತ್ತು ಪ್ರಧಾನಿ ಮಾಡಿದ್ದಾರೆ. ಆದರೆ ಐದು ವರ್ಷಗಳ ಕಾಲ ಹೇಮಂತ್ ಸೋರೆನ್ ಅವರ ಸರ್ಕಾರ ಬಿಜೆಪಿಯ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಿತು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡರು.
ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ, ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 13 ಮತ್ತು 20 ರಂದು. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications