Maharashtra- Jharkhand Election 2024 LIVE: ಮಹಾರಾಷ್ಟ್ರದಲ್ಲಿ ಶೇ. 58.22%, ಜಾರ್ಖಂಡ್ ನಲ್ಲಿ ಶೇ. 67.59% ರಷ್ಟು ಮತದಾನ

ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಿಗೆ ಹಾಗೂ ಜಾರ್ಖಂಡ್‌ನ‌ 38 ಕ್ಷೇತ್ರಗಳಿಗೆ ಇಂದು (ಬುಧವಾರ) ಮತದಾನ ನಡೆಯಲಿದ್ದು, ಸೋಮವಾರ ಉಭಯ ರಾಜ್ಯಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.

ಜಾರ್ಖಂಡ್‌ನಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 13ರಂದು ನಡೆದಿದ್ದು, 43 ಕ್ಷೇತ್ರಗಳಲ್ಲಿ ಮತದನಾ ನಡೆದಿದೆ. ಇಂದು (ಬುಧವಾರ) 38 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಜಾರ್ಖಂಡ್ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ.

Jharkhand and Maharashtra Assembly Election 2024 Live news Updates in kannada

ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲಾ 288 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 5 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

ಇನ್ನೂ ಜಾರ್ಖಂಡ್‌ನಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 31 ಬೂತ್‌ಗಳಲ್ಲಿ ಮಾತ್ರ ಸಂಜೆ 4 ಗಂಟೆಗೆ ಮತದಾನ ಮುಗಿಯಲಿದೆ. 4 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಇನ್ನೂ ಎರಡು ರಾಜ್ಯದಲ್ಲೂ ಚುನಾವಣೆಗೆ ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Nov 20, 2024, 6:03 pm IST

ಮಹಾರಾಷ್ಟ್ರದಲ್ಲಿ ಸಂಜೆ 5 ಗಂಟೆಯ ವರೆಗೆ ಶೇಕಡ 58.22% ರಷ್ಟು ಮತದಾನ ಆಗಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತದಾನದ ಪ್ರಮಾಣ ಶೇಕಡ 67.59% ರಷ್ಟಾಗಿದೆ. ಈ ಎರಡೂ ರಾಜ್ಯಗಳ ಚುನಾವಣೆ ಫಲಿತಾಂಶ ನವೆಂಬರ್‌ 23ಕ್ಕೆ ಪ್ರಕಟವಾಗಲಿದೆ.
Nov 20, 2024, 5:58 pm IST

ಜಾರ್ಖಂಡ್ ವಿಧಾನಸಭಾ ಚುನಾವಣೆ; ಸಂಜೆ ಐದು ಗಂಟೆಯ ವೇಳೆಗೆ ಜಾರ್ಖಂಡ್‌ನಲ್ಲಿ 67.59 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಎರಡನೇ ಹಂತದ ಚುನಾವಣೆ ಇಂದು ಮುಕ್ತಾಯವಾಗಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
Nov 20, 2024, 5:47 pm IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಮತ್ತು ಮಗ ಆರ್ಯನ್ ಖಾನ್ ಕೊನೆಯ ಕ್ಷಣದಲ್ಲಿ ಮುಂಬೈನಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು
Nov 20, 2024, 5:10 pm IST
ಮಹಾರಾಷ್ಟ್ರ

ಮಹಾರಾಷ್ಟ್ರದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯುತ್ತಿದೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಪುತ್ರ ಅನಂತ್ ಅಂಬಾನಿ ಮುಂಬೈನಲ್ಲಿ ಮತದಾನ ಮಾಡಿದರು.
Nov 20, 2024, 4:49 pm IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಇಂದು ಸಂಜೆ ಬಿಗಿ ಭದ್ರತೆಯಲ್ಲಿ ಮುಂಬೈನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು
Nov 20, 2024, 4:34 pm IST
ಮಹಾರಾಷ್ಟ್ರ

ಮಹಾರಾಷ್ಟ್ರದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಯ ತನಕ ರಾಜ್ಯದಲ್ಲಿ ಶೇ 45.53ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
Nov 20, 2024, 4:31 pm IST
ಮಹಾರಾಷ್ಟ್ರ

ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹಾರಾಷ್ಟ್ರವು ಉತ್ತಮ ಸಾಧನೆ ಮಾಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಮಹಾಯುತಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಜನರು ಅಭಿವೃದ್ಧಿ ಮತ್ತು ಅವರ ಭವಿಷ್ಯಕ್ಕಾಗಿ ಮತ ಹಾಕುತ್ತಾರೆ. ಆದ್ದರಿಂದ ಮಹಾಯುತಿ ಸರ್ಕಾರ ರಚನೆಯಾಗುತ್ತದೆ ಎಂದು ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ l
Nov 20, 2024, 3:57 pm IST
ಜಾರ್ಖಂಡ್

ಜಾರ್ಖಂಡ್‌ನಲ್ಲಿ 38 ವಿಧಾನಸಭೆ ಸ್ಥಾನಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ಇಲ್ಲಿವರೆಗೂ ಶೇಕಡ 61.47ರಷ್ಟು ಮತದಾನವಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಶೇಕಡ 45.53ರಷ್ಟು ಮತದಾನವಾಗಿದೆ.
Nov 20, 2024, 3:45 pm IST

ಟಿವಿ ವಾಹಿನಿಗಳಲ್ಲಿ ನಡೆಯುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆ 2024ರ ಎಕ್ಸಿಟ್ ಪೋಲ್ ಫಲಿತಾಂಶದ ಮೇಲಿನ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.
Nov 20, 2024, 3:45 pm IST
ಮಹಾರಾಷ್ಟ್ರ

ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಇನ್ನು ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮುಂಬೈನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
Nov 20, 2024, 3:14 pm IST
ಮಹಾರಾಷ್ಟ್ರ

ಮಹಾರಾಷ್ಟ್ರದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯುತ್ತಿದೆ. ಬಿಜೆಪಿ ನಾಯಕಿ, ನಟಿ ಹೇಮಾಮಾಲಿನಿ ಮುಂಬೈ ನಗರದಲ್ಲಿ ಮತದಾನ ಮಾಡಿದರು.
Nov 20, 2024, 2:42 pm IST
ಜಾರ್ಖಂಡ್

ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಇಂದು (ನವೆಂಬರ್ 20) ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದೆ. 38 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನದವರೆಗೆ ಒಟ್ಟು 47.92% ಮತದಾನವಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ. ನೇಹಾ ಅರೋರಾ ತಿಳಿಸಿದ್ದಾರೆ.
Nov 20, 2024, 1:26 pm IST
ಮಹಾರಾಷ್ಟ್ರ

ಮಹಾರಾಷ್ಟ್ರದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ನಡೆಯುತ್ತಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ಪುತ್ರ ಆದಿತ್ಯ ಠಾಕ್ರೆ ಜೊತೆ ಮತದಾನ ಮಾಡಿದರು.
Nov 20, 2024, 1:03 pm IST
ಜಾರ್ಖಂಡ್

ಎಲ್ಲೆಲ್ಲಿ ಎಷ್ಟು ಮತದಾನ?

ಎಲ್ಲೆಲ್ಲಿ ಎಷ್ಟು ಮತದಾನ?
ಧನ್ಬಾದ್ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 21.49ರಷ್ಟು ಮತದಾನವಾಗಿದೆ. ಸಿಂದ್ರಿ- ಶೇ. 32.1, ನಿರ್ಸಾ- ಶೇ. 32.55, ಝರಿಯಾ- ಶೇ.23.83, ತುಂಡಿ- ಶೇ.31.57, ಬಾಗ್ಮಾರಾ- ಶೇ. 28.86, ದಿಯೋಘರ್- ಶೇ.29.40, ಶರತ್- ಶೇ.36.86, ಮಧುಪುರ- ಶೆ.33.47ರಷ್ಟು ಮತದಾನವಾಗಿದೆ.
Nov 20, 2024, 12:53 pm IST
ಮಹಾರಾಷ್ಟ್ರ

ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯ ತನಕ ಶೇ 18.14ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
Nov 20, 2024, 12:48 pm IST
ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಹಾಯುತಿ ಮೈತ್ರಿ ಪಕ್ಷಗಳು ಸುಳ್ಳು ಭರವಸೆಗಳನ್ನು ನೀಡಿವೆ. ಅಲ್ಲದೇ ದ್ವಂದ್ವ ನಿಲುವು ತೆಳೆದಿವೆ. ನಾವು ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ. ಜನ ಎಂವಿಎ ಮೈತ್ರಿ ಪಕ್ಷಗಳಿಗೆ ಮತ ನೀಡಲು ನಿರ್ಧರಿಸಿದ್ದಾರೆ ಎಂದಿದ್ದಾರೆ.
Nov 20, 2024, 12:21 pm IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಮತದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, "ಇದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು" ಎಂದು ಮನವಿ ಮಾಡಿದ್ದಾರೆ.
Nov 20, 2024, 12:09 pm IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತದಾನ ನಡೆಯುತ್ತಿದ್ದು, ಮಿಲ್ಕಿ ಬ್ಯೂಟಿ ತಮನ್ನಾ ಮುಂಬೈನಲ್ಲಿ ಮತ ಚಲಾಯಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಎಲ್ಲರೂ ಮತದಾನ ಮಾಡಲು ಉತ್ಸುಕರಾಗಿದ್ದಾರೆ. ನಾನು ಮತಗಟ್ಟೆಗೆ ಬರುತ್ತಿದ್ದಾಗ, ಅನೇಕ ಜನರು ತಮ್ಮ ಹಕ್ಕು ಚಲಾಯಿಸಲು ಮತ ಕೇಂದ್ರಗಳಿಗೆ ಹೋಗುತ್ತಿರುವುದನ್ನು ನಾನು ನೋಡಿದೆ. ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಹೇಳಿದರು.
Nov 20, 2024, 11:56 am IST
ಜಾರ್ಖಂಡ್

ಜಾರ್ಖಂಡ್‌ 38 ವಿಧಾನಸಭಾ ಸ್ಥಾನಗಳಿಗೆ ಇಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಜೆಎಂಎಂ ಅಭ್ಯರ್ಥಿ ಹಾಗೂ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಪತ್ನಿ ಕಲ್ಪನಾ ಸೊರೆನ್ ಗಿರಿದಿಹ್‌ನಲ್ಲಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Nov 20, 2024, 11:43 am IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ; ಕೇಂದ್ರ ಸಚಿವ ಪಿಯೂಷ್ ಗೋಯಲ್ ತಮ್ಮ ಕುಟುಂಬ ಸದಸ್ಯರ ಜಪತೆ ಆಗಮಿಸಿ ಮತ ಚಲಾಯಿಸಿದರು. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲರೂ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
Nov 20, 2024, 11:27 am IST
ಜಾರ್ಖಂಡ್

ಜಾರ್ಖಂಡ್ ರಾಜ್ಯದ 38 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ಬುಧವಾರ ನಡೆಯುತ್ತಿದೆ. ಯುವ ಮತದಾರೆ ಮೊದಲ ಬಾರಿಗೆ ತಮ್ಮ ಹಕ್ಕು ಚಲಾವಣೆ ಮಾಡಿದರು. ರಾಜ್ಯದಲ್ಲಿ 5.50 ಲಕ್ಷ ಯುವ ಮತದಾರರು ಬುಧವಾರ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.
Nov 20, 2024, 11:05 am IST
ಮಹಾರಾಷ್ಟ್ರ

ಕುಟುಂಬ ಸಮೇತರಾಗಿ ಮಹಾರಾಷ್ಟ್ರದ ಬಾರಾಮತಿಯಲ್ಲಿ ಮತ ಚಲಾಯಿಸಿದೆವು. ನಾನು ಮಹಾರಾಷ್ಟ್ರದ ಜನರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ತಲೆಬಾಗಿ ಮನವಿ ಮಾಡುತ್ತೇನೆ! ನಮ್ಮ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಮತ್ತು ಪ್ರಾಮಾಣಿಕ ಹಾಗೂ ಉತ್ತಮ ಆಡಳಿತಕ್ಕಾಗಿ ಒಟ್ಟಾಗಿ ನಿಲ್ಲೋಣ ಎಂದು ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಅವರು ಹೇಳಿದ್ದಾರೆ. Live
Nov 20, 2024, 10:53 am IST
ಮಹಾರಾಷ್ಟ್ರ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರದಲ್ಲಿ ಮತ ಚಲಾಯಿಸಿದರು. ಮಹಾರಾಷ್ಟ್ರವು ದೇಶದ ಪ್ರಗತಿಪರ ಮತ್ತು ಸಮೃದ್ಧ ರಾಜ್ಯವಾಗಿದ್ದು, ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಪಡೆಯುತ್ತದೆ. ಇದು ದೇಶಕ್ಕೆ ಮಾದರಿ ರಾಜ್ಯವಾಗಿದೆ. ಉತ್ತಮ ಸರ್ಕಾರ ಮತ್ತು ನಾಯಕತ್ವವು ಮಹಾರಾಷ್ಟ್ರದ ಭವಿಷ್ಯವನ್ನು ಬದಲಾಯಿಸುತ್ತದೆ. ಜನರು ಅಭಿವೃದ್ಧಿಗಾಗಿ ಮತ ಚಲಾಯಿಸಬೇಕು ಎಂದು ಗಡ್ಕರಿ ಹೇಳಿದರು.
Nov 20, 2024, 10:41 am IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಸ್ಟಾರ್ ಜೋಡಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೊಜಾ ಮುಂಬೈನಲ್ಲಿ ಮತದಾನ ಮಾಡಿದರು. ಗಾಯಕ ಸೋನು ಸೂದ್, ನಟರಾದ ಜಾನ್ ಅಬ್ರಹಾಮ್, ಫರ್‍ಹಾನ್ ಅಖ್ತರ್ ಮತ್ತಿತರ ಬಾಲಿವುಡ್ ನಟ-ನಟಿಯರು ಮತದಾನ
Nov 20, 2024, 10:35 am IST
ಮಹಾರಾಷ್ಟ್ರ

ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯುತ್ತಿದೆ. ಮುಂಬೈ ನಗರದಲ್ಲಿ ಆರ್‌ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್‌ ಪತ್ನಿ ಜೊತೆಗೆ ಆಗಮಿಸಿ ಮತದಾನ ಮಾಡಿದರು.
Nov 20, 2024, 9:58 am IST
ಜಾರ್ಖಂಡ್

ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳ ಪೈಕಿ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಜಾರ್ಖಂಡ್ ಎರಡನೇ ಹಂತದ ಚುನಾವಣೆಯಲ್ಲಿ ಎಸ್‌ಟಿ ಅಭ್ಯರ್ಥಿಗಳಿಗೆ 28 ​​ಮತ್ತು ಎಸ್‌ಸಿ ಅಭ್ಯರ್ಥಿಗಳಿಗೆ ಒಂಬತ್ತು ಸ್ಥಾನಗಳನ್ನು ಮೀಸಲಿಡಲಾಗಿದೆ. ಇನ್ನು ನವೆಂಬರ್ 23 ರಂದು ಚುನಾವಣಾ ಜಾರ್ಖಂಡ್‌ನ ವಿಧಾನಸಭಾ ಫಲಿತಾಂಶ ಪ್ರಕಟವಾಗಲಿದೆ.-
Nov 20, 2024, 9:53 am IST
ಮಹಾರಾಷ್ಟ್ರ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ನ್ಯಾಶನಲಿಸ್ಟ್‌ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರು, ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಅವರ ವಿರುದ್ಧ ತನಿಖೆ ನಡೆಸಬೇಕು ಎನ್ನುವುದಕ್ಕೆ ಸುಪ್ರಿಯಾ ಅವರು ಪ್ರತಿಕ್ರಿಯಿಸಿದ್ದಾರೆ. ಅವರು ಅಜಿತ್‌ ಪವಾರ್, ಅವರು ಏನು ಬೇಕಾದರೂ ಮಾತನಾಡಬಹುದು. ರಾಮ ಕೃಷ್ಣ ಹರಿ ಎಂದಿದ್ದಾರೆ.
Nov 20, 2024, 9:49 am IST

ಜಾರ್ಖಂಡ್‌ನಲ್ಲಿ ಇಂದು (ನವೆಂಬರ್ 20) 38 ವಿಧಾನಸಭೆ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿವರೆಗೆ ಶೇಕಡ 12.71ರಷ್ಟು ಮತದಾನವಾಗಿದೆ. ಇನ್ನು ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಇಲ್ಲಿವರೆಗೂ ಶೇಕಡ 6.61ರಷ್ಟು ಮತದಾನ ಆಗಿದೆ ಎಂದು ತಿಳಿದುಬಂದಿದೆ.
Nov 20, 2024, 9:41 am IST
ಮಹಾರಾಷ್ಟ್ರ

ಮಹಾರಾಷ್ಟ್ರ ಚುನಾವಣೆ ಹಿನ್ನೆಲೆ ಎನ್‌ಸಿಪಿ-ಎಸ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ಮತ ಚಲಾಯಿಸಿದರು. ಬಳಿಕ ಮಾತನಾಡಿ, ಜನರೆಲ್ಲ ಮತ ಚಲಾಯಿಸಬೇಕು. ಮಹಾರಾಷ್ಟ್ರದ ಜನರು ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನವೆಂಬರ್ 23ರ ನಂತರ ಸರ್ಕಾರ ರಚನೆಯ ಜವಾಬ್ದಾರಿಯನ್ನು ಯಾರಿಗೆ ನೀಡಲಾಗುವುದು ಎಂಬುದು ಸ್ಪಷ್ಟವಾಗುತ್ತದೆ ಎಂದರು.
Nov 20, 2024, 9:40 am IST
ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ; ವಿರೋಧಪಕ್ಷದ ನಾಯಕ ವಿಜಯ್ ವಡೆತ್ತಿವಾರ್ ಮತ್ತು ಅವರ ಕುಟುಂಬ ಚಂದ್ರಾಪುರದಲ್ಲಿ ಮತ ಚಲಾಯಿಸಿದರು. ವಿಜಯ್ ವಡೆತ್ತಿವಾರ್ ಬ್ರಹ್ಮಪುರಿ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಬಿಜೆಪಿಯ ಕೃಷ್ಣಲಾಲ್ ಬಾಜಿರಾವ್ ಸಹಾರೆ ವಿರುದ್ಧ ಸ್ಪರ್ಧೆ ಮಾಡಿದ್ದು ಮರು ಆಯ್ಕೆ ಬಯಸಿದ್ದಾರೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+