ರಾಷ್ಟ್ರಪತಿ ಚುನಾವಣೆ: ಜೆಡಿಯು ಈಗಲೂ ವಿಪಕ್ಷಗಳ ಪರವಾಗಿದೆ!

ನವದೆಹಲಿ, ಜೂನ್ 22: ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕುದುರೆ ವ್ಯಾಪಾರ ಜೋರಾಗಿದೆ! ಎನ್ ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ರಾಮ್ ನಾಥ್ ಕೋವಿಂದ್ ಅವರನ್ನು ಘೋಷಿಸುತ್ತಿದ್ದಂತೆಯೇ ವಿಪಕ್ಷಗಳು ಬಿರುಸಿನ ಕಾರ್ಯಾಚರಣೆಗೆ ತೊಡಗಿವೆ.

ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಬೆಂಬಲ ಎನ್ ಡಿಎ ಅಭ್ಯರ್ಥಿಗೆ ಎಂದಿದ್ದಾರೆ. ಆದರೆ ಜೆಡಿಯು ಈಗಲೂ ಕಾಂಗ್ರೆಸ್ಸಿಗೆ ಬೆಂಬಲ ನೀಡಲಿದೆ ಎಂಬ ನಂಬಿಕೆ ಕಾಂಗ್ರೆಸ್ಸಿನದು!

JD(U) will support congress in presidential poll: Mallikarjun Kharge hopes

ಹೌದು, ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸುವುದು ನಿತೀಶ್ ಕುಮಾರ್ ಅವರ ವೈಯಕ್ತಿಕ ವಿಚಾರವೇ ಹೊರತು, ಅದು ಸಂಪೂರ್ಣ ಜೆಡಿಯು ಅಭಿಪ್ರಾಯವಲ್ಲ ಎನ್ನುವ ಮೂಲಕ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ!

ಇಂದು (ಜೂನ್ 22) ವಿಪಕ್ಷದ ಎಲ್ಲಾ ನಾಯಕರೂ ಸೇರಿ ಈ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳಲಿರುವುದಾಗಿ ಅವರು ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆ ಜುಲೈ 17 ರಂದು ನಡೆಯಲಿದ್ದು, ಜುಲೈ 20 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+