ಕಾದು ನೋಡುವ ತಂತ್ರ: ಅನಿಶ್ಚಿತತೆಯಲ್ಲಿ ಜಯಾ ಪ್ರಮಾಣವಚನ?

ಚೆನ್ನೈ / ಬೆಂಗಳೂರು, ಮೇ 14: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದಿದ್ದರೂ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮುಖ್ಯಮಂತ್ರಿ ಪಟ್ಟಕ್ಕೇರುವ ಮಹೂರ್ತ ಸ್ವಲ್ಪ ದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಪ್ರಕರಣದಲ್ಲಿ ಕರ್ನಾಟಕ ಸರಕಾರದ ನಡೆಯನ್ನು ಆಧರಿಸಿ ಮುಂದಿನ ಹೆಜ್ಜೆ ಇಡಲು ಜಯಲಲಿತಾ ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಚೆನ್ನೈ ಪೋಸ್ ಗಾರ್ಡನ್ ಆವರಣದಲ್ಲಿ ಹರಿದಾಡುತ್ತಿದೆ.

ಸುಪ್ರೀಂಕೋರ್ಟಿಗೆ ಹೋಗಬೇಕೇ ಅಥವಾ ಬೇಡವೇ ಎನ್ನುವ ನಿರ್ಧಾರಕ್ಕೆ ಇನ್ನೂ ಕರ್ನಾಟಕ ಸರಕಾರ ಬಾರದ ಹಿನ್ನಲೆಯಲ್ಲಿ ಅಮ್ಮನ ಪಟ್ಟಾಭಿಷೇಕದ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆಯಿಲ್ಲದಿಲ್ಲ. (ಜಯಾ ಕೇಸ್ : ಕರ್ನಾಟಕ ಸುಪ್ರೀಂ ಮೊರೆ)

ಈ ಮಧ್ಯೆ, ರಾಜ್ಯ ಸರ್ಕಾರ ಈ ಕೇಸಿನ ವಿಚಾರದಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ತಿಳಿಸುವಂತೆ ವಿಶೇಷ ಸರಕಾರಿ ಅಭಿಯೋಜಕ (ಎಸ್ಪಿಪಿ) ಬಿ ವಿ ಆಚಾರ್ಯ ಅವರಿಗೆ ಗುರುವಾರ (ಮೇ 14) ಕಾನೂನು ಇಲಾಖೆ ಪತ್ರ ಬರೆದಿದೆ.

ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲಾವಕಾಶ ರಾಜ್ಯ ಸರಕಾರಕ್ಕಿದೆ.

ಚೆನ್ನೈನಲ್ಲಿ ರಾಜೀನಾಮೆ ನೀಡಲು ತುದಿಗಾಲಿನಲ್ಲಿ ನಿಂತಿರುವ ಹಾಲಿ ಮುಖ್ಯಮಂತ್ರಿ, ಮುಂದೆ ಓದಿ..

ಎಐಡಿಎಂಕೆ ಶಾಸಕರು ಚೆನ್ನೈನಲ್ಲಿ

ಎಐಡಿಎಂಕೆ ಶಾಸಕರು ಚೆನ್ನೈನಲ್ಲಿ

ಪಕ್ಷದ ಎಲ್ಲಾ 151 ಶಾಸಕರು ಚೆನ್ನೈನಲ್ಲಿ ಬೀಡು ಬಿಟ್ಟಿದ್ದು ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗುವ ಗಳಿಗೆಗಾಗಿ ಕಾಯುತ್ತಿದ್ದಾರೆ. ಸೋಮವಾರ ರಾಜ್ಯ ಉಚ್ಚ ನ್ಯಾಯಾಲಯ ತನ್ನ ಆದೇಶ ಪ್ರಕಟಿಸಿದ ನಂತರ ಇನ್ನು ಹತ್ತೇ ನಿಮಿಷದಲ್ಲಿ ಜಯಾ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರೆಂದು ಜಯಾ ಪರ ವಕೀಲರು ಬೆಂಗಳೂರಿನಲ್ಲಿ ಹೇಳಿದ್ದರು.

ರಾಜೀನಾಮೆ ನೀಡಲು ಪನ್ನೀರ್ ರೆಡಿ

ರಾಜೀನಾಮೆ ನೀಡಲು ಪನ್ನೀರ್ ರೆಡಿ

ಕೋರ್ಟ್ ಆದೇಶ ಹೊರಬೀಳುತ್ತಿದಂತೆಯೇ ಜಯಾ ನಿವಾಸಕ್ಕೆ ದೌಡಾಯಿಸಿದ್ದ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಅಮ್ಮ ಸೂಚನೆ ಬಂದ ತಕ್ಷಣ ರಾಜೀನಾಮೆ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಆದೇಶದಲ್ಲಿನ ಲೋಪ ಎತ್ತಿ ತೋರಿಸಿದ್ದ ಬಿ ವಿ ಆಚಾರ್ಯ

ಆದೇಶದಲ್ಲಿನ ಲೋಪ ಎತ್ತಿ ತೋರಿಸಿದ್ದ ಬಿ ವಿ ಆಚಾರ್ಯ

ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ನೀಡಿರುವ ಅಂಕಿ ಅಂಶದಲ್ಲಿ ವಿವಿಧ ಬ್ಯಾಂಕ್ ಗಳಿಂದ ಪಡೆದಿರುವ ಸಾಲದ ಮೊತ್ತ 10,67,31,274, ಆದರೆ ಆದೇಶದಲ್ಲಿ 24,17,31,274 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಬಿ ವಿ ಆಚಾರ್ಯ ಆದೇಶದಲ್ಲಿನ ಲೋಪವನ್ನು ಎತ್ತಿ ತೋರಿಸಿದ್ದರು.

ಎಐಡಿಎಂಕೆ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು

ಎಐಡಿಎಂಕೆ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು

ಈ ಲೋಪದೋಷವೇ ಮುಳ್ಳಾಗುವ ಸಾಧ್ಯತೆಯಿರುವುದರಿಂದ, ಅಂಕಿಅಂಶದಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಖುದ್ದು ಜಯಲಲಿತಾ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಕಾಲಾವಕಾಶವನ್ನೂ ಪಡೆಯಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸೋನಿಯಾ ಅಂತಿಮ ನಿರ್ಧಾರ

ಸೋನಿಯಾ ಅಂತಿಮ ನಿರ್ಧಾರ

ಬಲ್ಲ ಮೂಲಗಳ ಪ್ರಕಾರ, ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕೇ, ಬೇಡವೇ ಎನ್ನುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಲಹೆ ಕೇಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನುವ ಸುದ್ದಿಯಿದೆ.

ಆಚಾರ್ಯ ಹೇಳಿದಂತೆ ನಡೆಯವ ಸಾಧ್ಯತೆ

ಆಚಾರ್ಯ ಹೇಳಿದಂತೆ ನಡೆಯವ ಸಾಧ್ಯತೆ

ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಸಮಯಾವಕಾಶವಿರುವುದರಿಂದ, ಸೋನಿಯಾ ಸಲಹೆ ಪಡೆದು ಎಸ್ಪಿಪಿ ಬಿ ವಿ ಆಚಾರ್ಯ ನೀಡುವ ಕಾನೂನು ಸಲಹೆಯ ಪ್ರಕಾರ ಕರ್ನಾಟಕ ಮುಂದಿನ ಹೆಜ್ಜೆಯಿಡಬಹುದು.

ಭಾನುವಾರದ ಕಾರ್ಯಕ್ರಮ

ಭಾನುವಾರದ ಕಾರ್ಯಕ್ರಮ

ಭಾನುವಾರ ಮೇ 17ರಂದು ಜಯಲಲಿತಾ ಪ್ರಮಾನವಚನ ಸ್ವೀಕರಿಸಲಿದ್ದಾರೆಂದು ಎಲ್ಲಡೆ ಸುದ್ದಿಯಾಗಿತ್ತು, ಆದರೆ ಇದು ಸದ್ಯ ಅನಿಶ್ಚಿತೆಯಲ್ಲಿದೆ. ಹೇಗೂ ತನ್ನದೇ ಸರಕಾರ ಅಧಿಕಾರದಲ್ಲಿ ಇರುವುದರಿಂದ ಕರ್ನಾಟಕ ಸರಕಾರದ ಮುಂದಿನ ನಡೆಯನ್ನು ಆಧರಿಸಿ ಅಂತಿಮ ನಿರ್ಧಾರಕ್ಕೆ ಜಯಲಲಿತಾ ಬರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+