• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಟೋಬರ್ 31ರಿಂದ ಜಮ್ಮು-ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ

By ಅನಿಲ್ ಆಚಾರ್
|

ನವದೆಹಲಿ, ಆಗಸ್ಟ್ 9: ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆ 2019 ಸಂಸತ್ ನಲ್ಲಿ ಒಪ್ಪಿಗೆ ಪಡೆದ ಕೆಲ ದಿನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶುಕ್ರವಾರ ತಮ್ಮ ಅಂಕಿತ ಹಾಕಿದ್ದಾರೆ. ಈ ಪುನಾರಚನೆ ಮಸೂದೆಯು ಲಡಾಖ್ ಹಾಗೂ ಜಮ್ಮು ಹಾಗೂ ಕಾಶ್ಮೀರಕ್ಕೆ ಕೇಂದ್ರಾಡಳಿತ ಪ್ರದೇಶಗಳಾಗಿ ಮಾನ್ಯತೆ ನೀಡುತ್ತದೆ. ಆ ಪೈಕಿ ಲಡಾಖ್ ಗೆ ವಿಧಾನಸಭೆ ಇಲ್ಲ. ಜಮ್ಮು ಕಾಶ್ಮೀರಕ್ಕೆ ವಿಧಾನಸಭೆ ಇದೆ.

ಎರಡೂ ಕೇಂದ್ರಾಡಳಿತ ಪ್ರದೇಶವು ಅಕ್ಟೋಬರ್ 31ರಿಂದ ಅಸ್ತಿತ್ವಕ್ಕೆ ಬರಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಾಶ್ಮೀರ ಪುನಾರಚನೆ ಕಾಯ್ದೆ 2019ಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮುವಿನಲ್ಲಿ ಆಗಸ್ಟ್ 10ರಿಂದ ಶಾಲೆ- ಕಾಲೇಜು ಆರಂಭ

ಜಮ್ಮು- ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಿರುವುದು ಪುದುಚೆರಿ ರೀತಿ ವಿಧಾನಸಭೆ ಇರುತ್ತದೆ. ಲಡಾಖ್ ಅನ್ನು ವಿಭಜನೆ ಮಾಡಿರುವುದು ಚಂಡೀಗಢ ರೀತಿಯಲ್ಲಿ ಇರಲಿದ್ದು, ವಿಧಾನಸಭೆ ಇರುವುದಿಲ್ಲ. ಈ ನಿರ್ಧಾರಕ್ಕೆ ರಾಜ್ಯಸಭೆಯ ಮೂರನೇ ಎರಡು ಭಾಗದಷ್ಟು ಸದಸ್ಯರು ಬೆಂಬಲ ಸೂಚಿಸಿದ್ದಾರೆ.

ಇನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲಾಯಿತು. ಇದೀಗ ಭಾರತದ ಕಾನೂನುಗಳು ಹೊಸದಾಗಿ ರಚನೆ ಆಗಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ ಆಗುತ್ತವೆ.

English summary
President Ram Nath Kovind gives ascent to Jammu and Kashmir Reorganisation Bill 2019 on Friday. Jammu and Kashmir and Ladakh union territory will come in to existence from October 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X