ಕಣಿವೆ ರಾಜ್ಯ ಜಮ್ಮು & ಕಾಶ್ಮೀರ ಚುನಾವಣೆಗೆ ಕ್ಷಣಗಣನೆ: ಹೀಗಿದೆ ನೋಡಿ ಕೊನೇ ಹಂತದ ಸಿದ್ಧತೆ!
ಭಾರತದ ಕಿರೀಟ ಅಂತಾ ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಭರವಸೆ ಈಗ ಮೂಡಿದೆ. ಸದಾ ಉಗ್ರರ ಅಟ್ಟಹಾಸ & ದಾಳಿಯಿಂದ ಬಳಲಿ ಹೋಗಿದ್ದ ಜಮ್ಮು & ಕಾಶ್ಮೀರ ಕಳೆದ ಕೆಲವು ವರ್ಷಗಳಿಂದ ಶಾಂತವಾಗಿ ಬದುಕುತ್ತಿದೆ. ಹೀಗಿದ್ದಾಗ ಕೇಂದ್ರ ಸರ್ಕಾರ ಕೂಡ ಶಿಸ್ತುಬದ್ಧವಾಗಿ ಕಣಿವೆ ರಾಜ್ಯ ಜಮ್ಮು & ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಈಗ ಸಕಲ ಸಿದ್ಧತೆ ಕೈಗೊಂಡಿದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಚುನಾವಣೆಗೆ ಮತದಾನವೂ ಆರಂಭ ಆಗಲಿದ್ದು, ಅಂಕಿ-ಅಂಶ ತಿಳಿಯೋಣ ಬನ್ನಿ.
ಜಮ್ಮು & ಕಾಶ್ಮೀರದ ವಿಧಾನಸಭೆ ಚುನಾವಣೆ ವಿಚಾರ ಭಾರತದಲ್ಲಿ ಮಾತ್ರವಲ್ಲ ಈಗ ಇಡೀ ಜಗತ್ತಿನಲ್ಲೇ ಚರ್ಚೆಗೆ ವೇದಿಕೆ ಒದಗಿಸಿದೆ. ಯಾಕಂದ್ರೆ 370 ನೇ ವಿಧಿ ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಭಾರತ ಸಂವಿಧಾನದ ಪ್ರಕಾರ ಕಣಿವೆ ರಾಜ್ಯ ಜಮ್ಮು & ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಈಗ ಮೊದಲ ಚುನಾವಣೆ ನಡೆಯುತ್ತಿದೆ. 2019 ರಲ್ಲಿ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಿತ್ತು. ಹೀಗೆ ವಿಭಜನೆ ಆದ ನಂತರ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಗೆ ಹೇಗೆಲ್ಲಾ ನಡೆದಿದೆ ಗೊತ್ತಾ ಸಿದ್ಧತೆ?

24 ವಿಧಾನಸಭಾ ಕ್ಷೇತ್ರಗಳು ಎಲ್ಲೆಲ್ಲಿ?
ಜಮ್ಮು & ಕಾಶ್ಮೀರ ನೋಡಲು ಮಾತ್ರ ಸುಂದರವಾಗಿಲ್ಲ, ಭದ್ರತೆ ದೃಷ್ಟಿಯಿಂದ ಕೂಡ ನಮ್ಮ ದೇಶಕ್ಕೆ ಜಮ್ಮು & ಕಾಶ್ಮೀರ ರಾಜ್ಯ ಅತ್ಯಗತ್ಯ. ಹೀಗೆ, 2014 ರಲ್ಲಿ ಜಮ್ಮು & ಕಾಶ್ಮೀರ ಕೊನೆಯ ವಿಧಾನಸಭಾ ಚುನಾವಣೆ ಎದುರಿಸಿತ್ತು. ಆದರೆ 2019 ರಲ್ಲಿ ರಾಜ್ಯವನ್ನು ವಿಭಜನೆ ಮಾಡಿದ್ದು, ವಿಶೇಷ ಸ್ಥಾನಮಾನ ಕೂಡ ರದ್ದು ಮಾಡಲಾಗಿತ್ತು. ಇಂದು ಜಮ್ಮು & ಕಾಶ್ಮೀರ ರಾಜ್ಯದಲ್ಲಿ ಒಟ್ಟು 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪುಲ್ವಾಮಾ ಭಾಗದಲ್ಲಿ ನಾಲ್ಕು, ಶೋಪಿಯಾನ್ ಭಾಗದ 2, ಕುಲ್ಗಾಮ್ ಭಾಗದ 3, ಅನಂತನಾಗ್‌ನ 7, ರಾಂಬನ್ ಸೇರಿದಂತೆ ಬನಿಹಾಲ್‌ನ ಭಾಗದಲ್ಲಿ ತಲಾ 2, ಕಿಶ್ತ್‌ವಾರ್‌ನ 3 & ದೋಡಾ ಜಿಲ್ಲೆಯ 3 ಸ್ಥಾನಗಳಿಗೆ ಇಂದು ವೋಟಿಂಗ್ ನಡೆಯಲಿದೆ. ಹಾಗಾದ್ರೆ ಎಷ್ಟು ಲಕ್ಷ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ? ಈ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.
23.27 ಲಕ್ಷ ಮತದಾರರು ಭಾಗಿ
ಕಣಿವೆ ರಾಜ್ಯ ಜಮ್ಮು & ಕಾಶ್ಮೀರದಲ್ಲಿ ಇದೀಗ ಶಾಂತಿ ನೆಲೆಸಿದ್ದರೂ ಪರಿಸ್ಥಿತಿ ಮಾತ್ರ ಕೈಮೀರಿ ಹೋಗುವ ಭಯ ಸದಾ ಕಾಡುತ್ತದೆ. ಇದೇ ಕಾರಣಕ್ಕೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದೀಗ ಜಮ್ಮು & ಕಾಶ್ಮೀರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೇನೆ, ಜಮ್ಮು & ಕಾಶ್ಮೀರ ಪೊಲೀಸರಿಂದ ಭದ್ರತೆ ನೀಡಲಾಗಿದೆ. ಇದರ ಜೊತೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ಕೂಡ ಕಟ್ಟೆಚ್ಚರ ವಹಿಸಿದ್ದಾರೆ. ಈ ಮೂಲಕ ಒಟ್ಟಾರೆ 23.27 ಲಕ್ಷ ಮತದಾರರು ಮೊದಲನೇ ಹಂತದಲ್ಲಿ ಮತದಾನ ಅಂದರೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 23.27 ಲಕ್ಷ ಮತದಾರರ ಪೈಕಿ 5.66 ಲಕ್ಷ ಯುವ ಮತದಾರರು ಮತ್ತು 1.23 ಲಕ್ಷ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇನ್ನುಳಿದಂತೆ 3,276 ಮತಗಟ್ಟೆಗಳನ್ನು ಚುನಾವಣಾ ಆಯೋಗವು 24 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪನೆ ಮಾಡಿದೆ.












Click it and Unblock the Notifications