ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 08 : ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ 'ಅಪನಗದೀಕರಣ' ಯಜ್ಞ ಶುರುಮಾಡಿದ ಒಂದು ತಿಂಗಳ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಾಧ್ಯಮವನ್ನು ಉದ್ದೇಶಿಸಿ ಗುರುವಾರ, ಡಿಸೆಂಬರ್ 8ರಂದು ಮಾತನಾಡಿದರು.

ನಗದು ಬಳಕೆಯನ್ನು ಬದಿಗಿಟ್ಟು ಎಲ್ಲ ಕಡೆಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ಈ-ವಾಲೆಟ್ ಮುಖಾಂತರ ಹಣವನ್ನು ಪಾವತಿ ಮಾಡುವವರಿಗೆ ಭರ್ಜರಿ ರಿಯಾಯಿತಿ ನೀಡುವ ಮೂಲಕ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದಂದು ಡಿಜಿಟಲೀಕರಣದ ಮಂತ್ರವನ್ನು ಅರುಣ್ ಜೇಟ್ಲಿ ಜಪಿಸಿದರು.

ಅಪನಗದೀಕರಣವನ್ನು ಜಾರಿಗೆ ತಂದ ಮೇಲೆ ಪೆಟ್ರೋಲ್ ಬಂಕ್ ಗಳಲ್ಲಿ ಶೇ.20ರಿಂದ 40ರಷ್ಟು ಡಿಜಿಟಲ್ ಹಣಪಾವತಿಗಳಾಗುತ್ತಿವೆ. ಹೀಗಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ಈ-ವ್ಯಾಲೆಟ್ ಬಳಸಿ ಹಣ ಪಾವತಿ ಮಾಡುವವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಶೇ.0.75ರಷ್ಟು ಅಗ್ಗವಾಗಿ ಸಿಗಲಿದೆ ಎಂದು ಅರುಣ್ ಜೇಟ್ಲಿ ಘೋಷಿಸಿದರು.

ಹಳೆ ನೋಟು ನಿಷೇಧ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರವಲ್ಲ ಮೂರ್ಖತನದ ನಿರ್ಧಾರ ಎಂದು ರಾಹುಲ್ ಗಾಂಧಿ ಅವರು ಮಹಾತ್ಮಾ ಗಾಂಧಿ ಪ್ರತಿಮೆಯೆದಿರು ಗುರುವಾರ ಬೆಳಿಗ್ಗೆ ಜರಿದಿದ್ದರು. ಈ ಯಜ್ಞದಲ್ಲಿ ಭಾಗಿಯಾಗಿರುವವರಿಗೆ ನನ್ನ ಸಲಾಂ ಎಂದು ಮೋದಿ ಪ್ರತ್ಯುತ್ತರ ನೀಡಿದ್ದರು. ಈಗ ಅರುಣ್ ಜೇಟ್ಲಿ ಅವರು ಭರ್ಜರಿ ರಿಯಾಯಿತಿಗಳನ್ನು ಘೋಷಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. [ಡಿ.10ರಿಂದ ಬಸ್, ರೈಲು ಟಿಕೆಟ್ ಖರೀದಿಗೂ ಹಳೆ 500, 1000 ನಡೆಯಲ್ಲ!]

ಅವರ ಭಾಷಣದ ಪ್ರಮುಖ ಅಂಶಗಳು ಕೆಳಗಿನಂತಿವೆ...

ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು ಈ-ವಾಲೆಟ್

ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು ಈ-ವಾಲೆಟ್

ನಗದು ಬಳಕೆಯನ್ನು ಕಡಿಮೆ ಮಾಡಿ, ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು ಈ-ವಾಲೆಟ್ ಬಳಕೆ ಹೆಚ್ಚು ಚಾಲ್ತಿಗೆ ತರುವ ಉದ್ದೇಶದಿಂದ ಸರ್ವರೀತಿಯ ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಿವೆ.

ನಿಗದಿತ ಯೋಜನೆಯಂತೆ ಹಣ ಬಿಡುಗಡೆ

ನಿಗದಿತ ಯೋಜನೆಯಂತೆ ಹಣ ಬಿಡುಗಡೆ

ನಿಗದಿತ ಯೋಜನೆಯಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಗೆ ಹಣವನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ವಹಿವಾಟುಗಳು ಹೆಚ್ಚಬೇಕೆಂಬುದೇ ಇದರ ಹಿಂದಿನ ಮೂಲ ಉದ್ದೇಶ.

ಪೆಟ್ರೋಲ್ ಮತ್ತು ಡೀಸೆಲ್ ಅಗ್ಗ

ಪೆಟ್ರೋಲ್ ಮತ್ತು ಡೀಸೆಲ್ ಅಗ್ಗ

ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ಈ-ವ್ಯಾಲೆಟ್ ಬಳಸುವವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಶೇ.0.75ರಷ್ಟು ಅಗ್ಗವಾಗಿ ಸಿಗಲಿದೆ. ಈಗಾಗಲೆ ಶೇ.20ರಿಂದ 40ರಷ್ಟು ಕಾರ್ಡ್ ಬಳಕೆ ಹೆಚ್ಚಿದೆ.

ನಬಾರ್ಡ್ ರುಪೇ ಕಾರ್ಡ್

ನಬಾರ್ಡ್ ರುಪೇ ಕಾರ್ಡ್

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ನಬಾರ್ಡ್ ರುಪೇ ಕಾರ್ಡ್ ಗಳನ್ನು ನೀಡಲಿದೆ.

ರೈಲ್ವೆ ಟಿಕೆಟ್ ಬುಕ್ಕಿಂಗ್

ರೈಲ್ವೆ ಟಿಕೆಟ್ ಬುಕ್ಕಿಂಗ್

ಡಿಜಿಟಲ್ ಮಾರ್ಗದ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡಿಕೊಳ್ಳುವವರಿಗೆ 10 ಲಕ್ಷ ರು.ನಷ್ಟು ಜೀವವಿಮೆ ಸಿಗಲಿದೆ.

ಮಾಸಿಕ ಪಾಸ್ ಗೆ ಶೇ.0.5 ರಿಯಾಯಿತಿ

ಮಾಸಿಕ ಪಾಸ್ ಗೆ ಶೇ.0.5 ರಿಯಾಯಿತಿ

ಸಬರ್ಬನ್ ರೈಲ್ವೆ ಜಾಲದಲ್ಲಿ ಸಂಚರಿಸುವವರು ಮಾಸಿಕ ಪಾಸನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಕೊಂಡರೆ ಶೇ.0.5ರಷ್ಟು ರಿಯಾಯಿತಿ ಸಿಗಲಿದೆ. ಇದು ಮುಂಬೈ ಸಬರ್ಬನ್ ರೈಲಿನಲ್ಲಿ ಸಂಚರಿಸುವವರಿಗೆ ಜನವರಿ 1ರಿಂದ ಲಭ್ಯವಾಗಲಿದೆ.

ಕಾರ್ಡ್ ಸ್ವೈಪ್ ಮಾಡುವ ಯಂತ್ರ

ಕಾರ್ಡ್ ಸ್ವೈಪ್ ಮಾಡುವ ಯಂತ್ರ

10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ 1 ಲಕ್ಷಕ್ಕೂ ಹೆಚ್ಚು ಆಯ್ದ ಹಳ್ಳಿಗಳಿಗೆ ಕಾರ್ಡ್ ಸ್ವೈಪ್ ಮಾಡುವ ಯಂತ್ರ (ಪಿಓಎಸ್ ಮಷೀನ್) ಗಳನ್ನು ವಿತರಿಸಲಾಗುವುದು.

ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪೇಮೆಂಟ್

ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪೇಮೆಂಟ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆನ್ ಲೈನ್ ಬಳಸುವ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಮಾರ್ಗದ ಮೂಲಕ ಹಣ ಪಾವತಿಸಿದರೆ ಶೇ.10ರಷ್ಟು ರಿಯಾಯಿತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A month after demonetisation move, the union government is dolling out discounts on digital payments in a bid to encourage cashless economy. Union Finance Minister Arun Jaitley on Thursday announced new proposals by the government to encourage digital payments.
Please Wait while comments are loading...