Jaipur Earhtquake: ಬೆಳ್ಳಂಬೆಳಗ್ಗೆ 3 ಸರಣಿ ಭೂಕಂಪಕ್ಕೆ ಸಾಕ್ಷಿಯಾದ ಜೈಪುರ
ಜೈಪುರ, ಜುಲೈ 21: ಭಾರತವು ಶುಕ್ರವಾರ ಸರಣಿ ಭೂಕಂಪನಗಳಿಗೆ ಸಾಕ್ಷಿಯಾಗಿದೆ. ಜೈಪುರದಲ್ಲಿ ಶುಕ್ರವಾರ ಮುಂಜಾನೆ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಭೂಕಂಪಗಳ ಅನುಭವವಾಗಿದೆ. ಜೈಪುರದಲ್ಲಿ 3.4 ರ ತೀವ್ರತೆಯ ಭೂಕಂಪನ ಉಂಟಾಗಿದೆ.
ಶುಕ್ರವಾರ ಬೆಳಗಿನ ಜಾವ 4.25 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. ಸುಮಾರು ಹತ್ತು ಕಿಲೋ ಮೀಟರ್ ಭೂಮಿಯ ಆಳದಲ್ಲಿ ಭೂಕಂಪನ ಉಂಟಾಗಿದೆ ಕೇಂದ್ರ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಭೂಕಂಪನ ತೀವ್ರತೆ 3.4ರಷ್ಟಿದ್ದರೆ, ಲ್ಯಾಟ್ 26.87 ಹಾಗೂ ಉದ್ದ 75.69ರಷ್ಟಿದೆ. ಭೂಮಿಯ ಆಳಕ್ಕೆ ಸುಮಾರು 10 ಕಿಲೋ ಮೀಟರ್ ಆಳಕ್ಕೆ ಕಂಪನಗಳು ಕೇಳಿ ಬಂದಿವೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
Rajasthan | An earthquake of Magnitude 4.4 strikes Jaipur
— ANI (@ANI) July 20, 2023
(CCTV Visuals)
(Video source - locals) pic.twitter.com/MOudTvT8yF
ಮತ್ತೊಂದು ಘಟನೆಯು ಶುಕ್ರವಾರ ಮುಂಜಾನೆ 4.22 ಗಂಟೆ ಸುಮಾರಿಗೆ 5 ಕಿಲೋ ಮೀಟರ್ ಆಳದಲ್ಲಿ 3.1 ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ಕೇಂದ್ರ ತಿಳಿಸಿದೆ.
ಇದಕ್ಕೂ ಮುನ್ನ ಬೆಳಗ್ಗೆ 4.09ಕ್ಕೆ ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ಜೈಪುರದಲ್ಲಿ ಮೊದಲ ಭೂಕಂಪದ ಅನುಭವವಾಯಿತು. 4.4 ತೀವ್ರತೆಯ ಭೂಕಂಪನ ಉಂಟಾಗಿದೆ. ಈ ವೇಳೆ ಲ್ಯಾಟ್ ಪ್ರಮಾಣವು 26.88 ರಷ್ಟಿದ್ದರೆ, ಉದ್ದವು 75.70 ಇದ್ದು, ಇದು ಜೈಪುರ ವ್ಯಾಪ್ತಿಯಲ್ಲಿನ ಮತ್ತೊಂದು ಕಡೆಗೆ ಉಂಟಾದ ಭೂಕಂಪನವಾಗಿದೆ.
ಮೂರು ಸರಣಿ ಭೂಕಂಪನಗಳು ಒಂದೇ ದಿನ ಬೆಳಗ್ಗೆ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಸ್ತಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ಜೈಪುರ ಸೇರಿದಂತೆ ರಾಜ್ಯದ ಇತರ ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ. ಜನರೆಲ್ಲರು ಸುರಕ್ಷಿತ ಸ್ಥಳದಲ್ಲಿದ್ದೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇತ್ತ ಮಣಿಪುರದಲ್ಲಿ ಸಹ ಬೆಳಗಿನ ಜಾವ 3.5 ತೀವ್ರತೆಯ ಭೂಕಂಪನ ಆಗಿದೆ. ಒಟ್ಟು ಭೂಮಿಯ 20 ಕಿಲೋ ಮೀಟರ್ ಆಳದಲ್ಲಿ ಭೂಕಂಪನ ಉಂಟಾಗಿದೆ. ಇತ್ತ ರಾಜಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದ್ದರ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಖಚಿತಪಡಿಸಿದೆ.












Click it and Unblock the Notifications