ಜಮ್ಮು ಕಾಶ್ಮೀರದಲ್ಲಿ 34 ಪಾಕ್ ಚಾನೆಲ್ ಗಳಿಗೆ ನಿರ್ಬಂಧ
ಶ್ರೀನಗರ, ಮೇ 07 : ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಮುಂದುರೆದ ಹಿನ್ನೆಲೆ ಪಾಕಿಸ್ತಾನದ ಟಿವಿ ಚಾನೆಲ್ ಗಳಿಗೆ ನಿಷೇಧ ಹೇರಲಾಗಿದೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಹಿನ್ನೆಲೆ ಪಾಕಿಸ್ತಾನದ 34 ಧಾರ್ಮಿಕ ಚಾನೆಲ್ ಗಳನ್ನು ಜಮ್ಮು ಕಾಶ್ಮೀರದಲ್ಲಿ ನಿಷೇಧಿಸಲಾಗಿದೆ. [ಫೇಸ್ ಬುಕ್ ಸೇರಿದಂತೆ 22 ಜಾಲತಾಣಕ್ಕೆ ಜಮ್ಮು-ಕಾಶ್ಮೀರದಲ್ಲಿ ನಿಷೇಧ]

ಈ ಬಗ್ಗೆ ಜಮ್ಮು ಕಾಶ್ಮೀರ ಸರ್ಕಾರ ಇಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದು, ಪರವಾನಗಿ ಇಲ್ಲದ ಚಾನೆಲ್ಗಳನ್ನು ನಿಷೇಧಿಸುವಂತೆ ಹೇಳಿದೆ.
ರಾಷ್ಟ್ರವಿರೋಧಿ ಹಾಗೂ ಸಮಾಜ ವಿರೋಧಿಗಳು ಇವುಗಳ ದುರ್ಬಳಕೆ ಮಾಡಬಹುದು ಎಂಬ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರ ಸರಕಾರ ಇತ್ತೀಚೆಗೆ ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಸೇರಿದಂತೆ ಇಪ್ಪತ್ತೆರಡು ಸಾಮಾಜಿಕ ಜಾಲತಾಣ ವೆಬ್ ಸೈಟ್ ಹಾಗೂ ಅಪ್ಲಿಕೇಷನ್ ಗಳನ್ನು ನಿಷೇಧಿಸಿತ್ತು.












Click it and Unblock the Notifications