ಉಗ್ರರಿಂದ ಸುಧಾರಿತ ಬಾಂಬ್ ದಾಳಿ, ಸೇನಾ ಮೇಜರ್, ಸೈನಿಕ ಹುತಾತ್ಮ
ಶ್ರೀನಗರ, ಜನವರಿ 11: ಇಲ್ಲಿನ ನೌಶೇರ ಭಾಗದಲ್ಲಿ ಉಗ್ರರು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಾಂಬ್ದಾಳಿ ನಡೆಸಿದ್ದಾರೆ. ಬಾಂಬ್ ಸ್ಫೋಟದ ಪರಿಣಾಮ ಭಾರತದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಸ್ಫೋಟಿಸಿದ ಬಾಂಬಿಗೆ ಸೇನಾ ಮೇಜರ್ ಹಾಗೂ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಜ್ಯೂನಿಯರ್ ಕಮಿಷನ್ಡ್ ಆಫೀಸರ್ ಹಾಗೂ ಓರ್ವ ಯೋಧ ಗಾಯಗೊಂಡಿದ್ದರು.
ಭಾರತೀಯ ಸೇನಾ ಪಡೆ ಗಸ್ತು ತಿರುಗುವ ಸ್ಥಳಗಳಲ್ಲಿ ಉಗ್ರರು ಬಾಂಬ್ ಇಟ್ಟಿದ್ದರು ಎಂದು ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಹೇಳಿದ್ದಾರೆ.

ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಮ್(BATs)ನ ಈ ಕೃತ್ಯದ ಬಗ್ಗೆ ಯೋಧರು ಜಾಗೃತರಾಗಿದ್ದಾರೆ. ಎಲ್ ಇಡಿ ಹಾಗೂ ಇನ್ನಿತರ ಸ್ಫೋಟಕ ಬಳಸಿ ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ರಾಜೌರಿ ಹಾಗೂ ಪೂಂಚ್ ಜಿಲ್ಲೆಗಳಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದಾರೆ.












Click it and Unblock the Notifications